ಸಂಘ -ಸಂಸ್ಥೆಗಳ ಸೇವೆ ಸರಕಾರದ ಕೆಲಸ ಹಗುರಗೊಳಿಸಿದೆ: ಸಚಿವ ಶ್ರೀನಿವಾಸ ಪೂಜಾರಿ
Team Udayavani, Apr 27, 2020, 4:01 AM IST
ಮಲ್ಪೆ: ಲಾಕ್‌ಡೌನ್‌ನಿಂದಾಗಿ ದುಡಿದು ತಿನ್ನುವವರಿಗೆ ಕೆಲಸ ಮಾಡಲು ಆಗುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ಸಂಘ ಸಂಸ್ಥೆಗಳು ಹಾಗೂ ಕಿದಿಯೂರು ಉದಯ ಕುಮಾರ್ ಶೆಟ್ಟಿ ಅವರು ಮಾಡುತ್ತಿರುವ ಕೆಲಸ ಎಲ್ಲರಿಗೂ ಮಾದರಿ. ಇವು ಸರಕಾರದ ಕೆಲಸ ಹಗುರಗೊಳಿಸಿವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಿದಿಯೂರು ಉದಯ ಕುಮಾರ್ ಟ್ರಸ್ಟ್ ವತಿಯಿಂದ 27ನೇ ದಿನದ ಸಗ್ರಿ ಪರಿಶಿಷ್ಟ ವರ್ಗದ ಜನರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಟ್ರಸ್ಟ್‌ನ ಅಧ್ಯಕ್ಷ ಬಿಜೆಪಿ ಮಂಗಳೂರು ವಿಭಾಗದ ಉಸ್ತುವಾರಿ ಕೆ. ಉದಯ ಕುಮಾರ್ ಶೆಟ್ಟಿ, ಅಂಡಾರು ದೇವಿ ಪ್ರಸಾದ್ ಶೆಟ್ಟಿ, ಸಂಧ್ಯಾ ರಮೇಶ್, ಸಗ್ರಿ ವಾರ್ಡ್ ಸದಸ್ಯೆ ಭಾರತಿ, ರಾಧಾಕೃಷ್ಣ ಶೆಟ್ಟಿ ದೊಡ್ಡಣಗುಡ್ಡೆ, ಪೆರಂಪಳ್ಳಿ ಯುವಕ ಮಂಡಲದ ಗೌರವಾಧ್ಯಕ್ಷ ಹರಿಕೃಷ್ಣ ಶಿವತ್ತಾಯ, ಶಶಾಂಕ್ ಶಿವತ್ತಾಯ, ಕಿಶೋರ್, ರಾಘವೇಂದ್ರ ಪ್ರಭು ಕರ್ವಾಲು, ಈಶ್ವರ ಪೂಜಾರಿ, ತಾ.ಪಂ. ಸದಸ್ಯ ರಾಜೇಂದ್ರ ಪಂದುಬೆಟ್ಟು, ಅಂಬಲಪಾಡಿ ಪಂಚಾಯತ್ ಸದಸ್ಯರಾದ ಸುಂದರ ಪೂಜಾರಿ, ಭಾರತೀ ಭಾಸ್ಕರ್, ಪುಷ್ಪಾ ಸಂತೋಷ್ ಶೆಟ್ಟಿ, ಸಲೀಂ ಅಂಬಾಗಿಲು, ಪ್ರಜ್ವಲ್ ಕೋಟ್ಯಾನ್, ರಾಮರಾಜ್ ಕಿದಿಯೂರು, ರಾಜೀವ ಪೂಜಾರಿ, ಜಗದೀಶ್ ಶೆಟ್ಟಿ, ಗಿರೀಶ್ ಅಮೀನ್, ಸುಂದರ ಪೂಜಾರಿ, ನವೀನ್ ಕುಂದರ್, ವಿಷ್ಣು ಪೂಜಾರಿ, ಭರತ್ ಭೂಷಣ್, ನಿತೀನ್ ಬಂಗೇರ, ಮಹೇಶ್ ಕುಮಾರ್, ಅಕ್ಷಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.