ಸಂಸ್ಕೃತದ್ವಾರಾ ಸಮರ್ಥ ಭಾರತಂ: ಸೋನಿ


Team Udayavani, Jan 8, 2017, 3:45 AM IST

07-LOC-4.jpg

ಉಡುಪಿ: ಇಡೀ ಜಗತ್ತಿಗೇ ಕಲ್ಯಾಣ ಮಾಡುವ ಅಮೂಲ್ಯ ವಿಷಯಗಳು ಇರುವ ಸಂಸ್ಕೃತ ಸಾಹಿತ್ಯದಲ್ಲಿ  ಆಳವಾದ ಸಂಶೋಧನೆ ನಡೆಸಬೇಕಾಗಿದೆ. ಇದಾಗಬೇಕಾದರೆ ಸಂಸ್ಕೃತವನ್ನು ಜನಪ್ರಿಯಗೊಳಿಸಬೇಕು. ಹೀಗಾದರೆ ಮಾತ್ರ ಭಾರತ ವಿಶ್ವಗುರುವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಸುರೇಶ ಸೋನಿ ಹೇಳಿದರು. 

ಸಂಸ್ಕೃತ ಭಾರತಿಯ ರಾಷ್ಟ್ರೀಯ ಅಧಿವೇಶನ ಪ್ರಯುಕ್ತ ಶನಿವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ “ಸಂಸ್ಕೃತ ಭಾರತಂ- ಸಮರ್ಥ ಭಾರತಂ’ ವಿಷಯದ ಕುರಿತು ಮಾತನಾಡಿದ ಅವರು, ಜನರಿಗೆ ಸಂಸ್ಕಾರ, ಸಂಸ್ಕೃತಿಧಿಯನ್ನು ಕೊಟ್ಟಾಗ ಮಾತ್ರ ಇದು ಸಾಧ್ಯ. ಸಂಸ್ಕೃತದ ಮೂಲಕ ಸಂಸ್ಕೃತಿಯನ್ನು ಕೊಡಬೇಕಾಗಿದೆ. ಜಾಗತಿಕ ತಾಪಮಾನದಿಂದ ಬಳಲುತ್ತಿರುವ ಜಗತ್ತಿನ ಜನರಿಗೆ ಭೂಮಿಯನ್ನು ತಾಯಿ ಸ್ವರೂಪದಲ್ಲಿ ಕಾಣುವ ಸಂಸ್ಕಾರವನ್ನು ಕಲಿಸಬೇಕಾಗಿದೆ ಎಂದರು. 

ಖಜಾನೆ ಇದ್ದೂ ಕೀಳರಿಮೆ ಶಿಕ್ಷಣ
ನವರಾಷ್ಟ್ರ, ಬಹುರಾಷ್ಟ್ರಗಳ ವಾದವನ್ನು ಹರಿದುಬಿಟ್ಟಿದ್ದಾರೆ. ಋಗ್ವೇದದಲ್ಲಿ ಹಿಮಾಲಯದಿಂದ ಸಮುದ್ರದವರೆಗೆ ಏಕರಾಷ್ಟ್ರವಾಗಿತ್ತು ಎಂಬ ಉಲ್ಲೇಖವಿದೆ. ಅಥರ್ವವೇದದ ಭೂಮಿಸೂಕ್ತದಲ್ಲಿ ಜ್ಞಾನ, ಕಲಾಕೌಶಲಗಳ ಮೂಲಕ ರಾಷ್ಟ್ರಭಕ್ತಿಯ ಪ್ರವಾಹ ಕಾಣುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆ ನಮ್ಮ ದೇಶದ ಹಿರಿಯರ ಬಗೆಗೆ ಕೀಳರಿಮೆ ಹುಟ್ಟಿಸುತ್ತಿದ್ದು ಇದನ್ನು ಸರಿಪಡಿಸಬೇಕಾಗಿದೆ. ನಮ್ಮಲ್ಲಿ ದೊಡ್ಡ ಜ್ಞಾನದ ಖಜಾನೆಯೇ ಇದೆ. ಇದನ್ನು ಹುಡುಕುವ ಕೆಲಸ ನಡೆಯಬೇಕಾಗಿದೆ ಎಂದರು. 

ಬಹುತ್ವ-ಏಕತ್ವ
ನಮ್ಮಲ್ಲಿ ಬಹುತ್ವದಲ್ಲಿ ಏಕತೆ ಇದೆ. ಬಹುತ್ವ ಇರುವುದು ಗುರುತಿಗಾಗಿ. ಇದು ಒಂದಕ್ಕೊಂದು ವಿರುದ್ಧವಲ್ಲ. ಇಡೀ ವ್ಯವಸ್ಥೆ ಒಂದೇ ನಿಯಮದಲ್ಲಿದೆ. ದೇಶದ ಮೇಲೆ ನಿರಂತರ ದಾಳಿ ನಡೆದ ಕಾರಣ ರಕ್ಷಣಾತ್ಮಕ ಪ್ರಜ್ಞೆ (ಡಿಫೆನ್ಸಿವ್‌ ಮೂಡ್‌) ಬೆಳೆದುಬಂದಿದೆ. ನಮ್ಮ ಪರಂಪರೆಯ ಬೇರು, ಇನ್ನೊಂದೆಡೆ ಆಕ್ರಮಣಕಾರರ ಪ್ರಭಾವ ಎರಡರ ನಡುವೆ ನಮ್ಮ ಜೀವನ ಸಾಗುತ್ತಿದೆ ಎಂದು ಸೋನಿ ಹೇಳಿದರು. 

ಸಮಸ್ಯೆಗಳಿಗೆ ಕಲಾಂ ಉತ್ತರ
ಭ್ರಷ್ಟಾಚಾರ, ಅನಾಚಾರ, ಆತಂಕವಾದ, ವಿಘಟನೆಗಳಿದ್ದರೂ ದೇಶ ಉದ್ಧಾರ ಆಗುವುದು ಹೇಗೆ ಎಂದು ಡಾ| ಅಬ್ದುಲ್‌ ಕಲಾಂ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಸಾಮಾನ್ಯಜನರಿಗೆ ರಾಷ್ಟ್ರದ ಪ್ರಜ್ಞೆ ಮೂಡಿಸಿದರೆ, ಆತಂಕವಾದಿಗಳಿಗೆ ಸರಿಯಾದ ಧರ್ಮಪ್ರಜ್ಞೆ ಮೂಡಿಸಿದರೆ ಎಲ್ಲ ಸಮಸ್ಯೆಗಳಿಗೂ ಉತ್ತರ ಸಿಗುತ್ತದೆ ಎಂದಿದ್ದರು ಎಂಬುದನ್ನು ಸೋನಿ ಉದಾಹರಿಸಿದರು. 

ಭಾರತದ ಧರ್ಮದ ಅನುಷ್ಠಾನವನ್ನು ಮಾಡಿದರೆ ಎಲ್ಲ ಸಮಸ್ಯೆಗಳೂ ನಿವಾಧಿರಣೆಧಿಯಾಗುತ್ತವೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಗೀತೆಧಿಯೊಂದೇ ಬಹುಸಮಸ್ಯೆಗಳಿಗೆ ಉತ್ತರ ನೀಡುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು. ಶ್ರೀಮಠದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲಾನಾಥ ಸ್ವಾಮೀಜಿ ಉಪಸ್ಥಿತರಿದ್ದರು. ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸ್ಕೃತ ಭಾರತಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಹಿಮಾಚಲಪ್ರದೇಶದ ಡಾ| ಭಕ್ತವತ್ಸಲಂ, ಸ್ವಾಗತ ಸಮಿತಿ ಕಾರ್ಯದರ್ಶಿ ಎಂ.ಬಿ. ಪುರಾಣಿಕ್‌ ಉಪಸ್ಥಿತರಿದ್ದರು. ಉತ್ತರ ಪ್ರದೇಶದ ಕ್ಷೇತ್ರೀಯ ಸಂಘಟನ ಕಾರ್ಯಧಿದರ್ಶಿ ಡಾ| ಸಂಜೀವಕುಮಾರ್‌ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. 

ಜಾವಡೇಕರ್‌ ಉಪನ್ಯಾಸ
ಕೇಂದ್ರ ಮಾನವ ಸಂಪದ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಜ. 8ರ ಬೆಳಗ್ಗೆ 9ಕ್ಕೆ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡುವರು. ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀಶೈಲ ಪೀಠಾಧಿಪತಿ ಗಳು ಆಶೀರ್ವಚನ ನೀಡಲಿದ್ದು ಆರೆಸ್ಸೆಸ್‌ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸಮಾರೋಪ ಭಾಷಣ ಮಾಡುವರು. 

ಸೇವಾ ಕೇಂದ್ರಿತ ರಾಜನೀತಿ, ಲೋಭರಹಿತ ಅರ್ಥನೀತಿ
ಸೇವಾ ಕೇಂದ್ರಿತ ರಾಜಕೀಯ ನೀತಿ ಮತ್ತು ಲೋಭರಹಿತ ಅರ್ಥ ನೀತಿ ಇಂದು ತುರ್ತಾಗಿ ಬೇಕಾಗಿದೆ. ಇದರಿಂದ ಮಾತ್ರ ದೇಶದ ಅಭಿವೃದ್ಧಿ, ಪರಿವರ್ತನೆ ಸಾಧ್ಯ ಎಂದು ಸುರೇಶ ಸೋನಿ ಹೇಳಿದರು. ವಿಮಾ ಕಂಪೆನಿಗಳ “ಯೋಗಕ್ಷೇಮಂ ವಹಾಮ್ಯಹಂ’, ಸಂಸತ್ತಿನಲ್ಲಿರುವ “ಸತ್ಯಮೇವ ಜಯತೇ’, “ಯೋಗ ಕರ್ಮಸು ಕೌಶಲಂ’ ಇತ್ಯಾದಿ ಘೋಷವಾಕ್ಯಗಳನ್ನು ಹೊತ್ತ ಅನೇಕ ಸಂಸ್ಥೆಗಳಿವೆ. ಇವುಗಳನ್ನು ಜಾರಿಗೊಳಿಸಿದರೆ ಸಾಕು. ಇಡೀ ಜಗತ್ತಿಗೆ ಬೇಕಾದಷ್ಟು ವಿಚಾರಗಳು ನಮ್ಮ ದೇಶವೊಂದರಲ್ಲಿಯೇ ಇವೆ ಎಂದು ಸೋನಿ ಹೇಳಿದರು.

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

man-a

Udupi: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.