Sasthan: ಮಂಜೂರಾಗಿ 2 ವರ್ಷ ಕಳೆದರೂ ಜಿಲ್ಲೆಗಿಲ್ಲ ಇಎಸ್‌ಐ ಆಸ್ಪತ್ರೆ ಭಾಗ್ಯ
Team Udayavani, Aug 23, 2024, 4:43 PM IST
ಸಾಸ್ತಾನ: ಉಡುಪಿ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಇಎಸ್‌ಐ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂಬ ಕಾರ್ಮಿಕ ವಲಯದ ಹಲವಾರು ವರ್ಷಗಳ ಬೇಡಿಕೆಯಂತೆ ಕೇಂದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಜಿಲ್ಲೆಗೆ 100 ಹಾಸಿಗೆಯ ವಿಮಾ ಅಸ್ಪತ್ರೆ ಹಾಗು ಹಾಗೂ ಸಿಬಂದಿ ವಸತಿಗೃಹ ನಿಮಾಣದ ಮಂಜೂರಾತಿ ನೀಡಿ ಎರಡು ವರ್ಷ ಕಳೆದರೂ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಗೆ ಇನ್ನೂ ಚಾಲನೆ ದೊರಕಿಲ್ಲ.
ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಸುಸಜ್ಜಿತ ಇಎಸ್‌ಐ ಆಸ್ಪತ್ರೆಯ ಆಗತ್ಯತೆ ಇದೆ. ವಿವಿಧ ಕಾರ್ಮಿಕ ಸಂಘಟನೆಗಳು, ಸ್ವಯಂ ಸೇವಾ ಸಂಘಗಳ ಬಹುಕಾಲದ ಬೇಡಿಕೆ ಹಾಗೂ ಹಿಂದಿನ ಉಡುಪಿ ಶಾಸಕರು ಮತ್ತು ಸಂಸದರ ಮುತುವರ್ಜಿಯಿಂದಾಗಿ ಎರಡು ವರ್ಷಗಳ ಹಿಂದೆಯೆ ಇಎಸ್‌ಐ ಕಾರ್ಪೋರೇಶನ್‌ನಿಂದ ಜಿಲ್ಲೆಗೆ ನೂರು ಹಾಸಿಗೆಯ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಮಂಜೂರಾತಿ ದೊರಕಿತ್ತು. ಅನಂತರ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತವಾದ ಜಾಗ ಗುರುತಿಸಿದ್ದರೂ ಇನ್ನೂ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಿಲ್ಲ.
60 ಸಾವಿರಕ್ಕಿಂತ ಹೆಚ್ಚು ಇಎಸ್‌ಐ ಸದಸ್ಯರಿರುವ ಜಿಲ್ಲೆಯಲ್ಲಿ ಆಸ್ಪತ್ರೆ ನಿರ್ಮಿಸಲೇಬೇಕು ಎಂದು ಇಎಸ್‌ಐ ಕಾನೂನು ಇದ್ದರೂ ಒಂದು ಲಕ್ಷಕ್ಕಿಂತ ಹೆಚ್ಚು ಕಾರ್ಮಿಕರು ವಿಮಾಯೋಜನೆಯ ಸದಸ್ಯರು ಹಾಗು ಸುಮಾರು 5 ಲಕ್ಷದ ತನಕ ಫಲಾನುಭವಿಗಳಿರುವ ಉಡುಪಿ ಜಿಲ್ಲೆಯಲ್ಲಿ ಆಸ್ಪತ್ರೆ ನಿರ್ಮಾಣ ಈಗಾಗಲೇ ಆಗಬೇಕಾಗಿತ್ತು. ಆದುದರಿಂದ ಕಾನೂನಾತ್ಮಕವಾಗಿ ಇಎಸ್‌ಐ ಆಸ್ಪತ್ರೆ ನಿರ್ಮಾಣ ಕಾರ್ಯ ನಡೆಯಬೇಕಾಗಿದೆ.
ಟೆಂಡರ್ ಪ್ರಕ್ರಿಯೆಗೆ ಚಾಲನೆ
ಅಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಹಾಗು ಬಿಡ್ ಪ್ರಕ್ರಿಯೆ ಇಲಾಖಾ ಮಟ್ಟದಲ್ಲಿ ನಡೆದಿದ್ದು, ಅಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಶೀಘ್ರದಲ್ಲಿ ಚಾಲನೆ ದೊರಕಲಿದೆ.
-ಯಶ್‌ಪಾಲ್ ಸುವರ್ಣ, ಶಾಸಕರು
ಮುಂದಿನ ದಿನಗಳಲ್ಲಿ ಹೋರಾಟ
ಇಎಸ್‌ಐ ಆಸ್ಪತ್ರೆ ನಿಮಾಣಕ್ಕೆ ಜಾಗ ಗುರುತಿಸಲಾಗಿದ್ದರೂ ಈ ತನಕ ಆಸ್ಪತ್ರೆ ನಿಮಾಣಕ್ಕೆ ಶಂಕುಸ್ಥಾಪನೆ ಕಾರ್ಯ ನಡೆದಿಲ್ಲ. ಕೂಡಲೇ ಆಸ್ಪತ್ರೆ ನಿಮಾಣ ಕಾರ್ಯಕ್ಕೆ ಚಾಲನೆ ನೀಡಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಿದ್ದೇವೆ
-ಶಶಿಧರ್, ಸಿಐಟಿಯು ಉಡುಪಿ ಜಿಲ್ಲಾ ಕೋಶಾಧಿಕಾರಿ
ಅತೀ ಶೀಘ್ರ ಚಾಲನೆಗೊಳ್ಳಬೇಕು
ಇಎಸ್‌ಐ ಅಸ್ಪತ್ರೆ ಹಾಗೂ 32 ಸಿಬ್ಬಂದಿ ವಸತಿಗ್ರಹದ ನಿರ್ಮಾಣದ ಪೂರ್ವಭಾವಿ ಪ್ರಕ್ರಿಯೆಗಳು ಇಎಸ್‌ಐ ನಿಗಮದ ಹಂತದಲ್ಲಿ ಪ್ರಗತಿಯಲ್ಲಿದೆ. ಜಿಲ್ಲಾ ಶಾಸಕರು, ಸಂಸದರ ಮುತುವರ್ಜಿ, ಜಿಲ್ಲಾಡಳಿತ, ಸ್ಥಳೀಯರ ಸಹಕಾರದಿಂದ ಆಸ್ಪತ್ರೆ ನಿರ್ಮಾಣ ಕಾಮಗಾರಿ ಅತೀ ಶೀಘ್ರದಲ್ಲಿ ಚಾಲನೆಗೊಳ್ಳಬೇಕು. ಕ್ಲಪ್ತ ಸಮಯದಲ್ಲಿ ಪೂರ್ಣಗೊಂಡು ಇಎಸ್‌ಐ ಫಲಾನುಭವಿಗಳ ಸೇವೆಗೆ ತೆರೆದುಕೊಳ್ಳುವುದು ಅತೀ ಆಗತ್ಯವಾಗಿದೆ
-ಡಾ| ಹೇಮಂತ್‌ಕುಮಾರ್, ಆಡಳಿತ ವಿಮಾ ವೈದ್ಯಾಧಿಕಾರಿ,ಇಎಸ್‌ಐ ಉಡುಪಿ ಮತ್ತು ಕುಂದಾಪುರ
6 ಎಕರೆ ಭೂಮಿ ಗುರುತಿಸಲಾಗಿದೆ
ಆಸ್ಪತ್ರೆ ನಿರ್ಮಿಸಲು ಉಡುಪಿ ಜಿಲ್ಲೆಯ ಬ್ರಹ್ಮಾವರದ ವಾರಂಬಳ್ಳಿಯಲ್ಲಿ ಸುಮಾರು 6 ಎಕರೆ ಸರಕಾರಿ ಭೂಮಿಯನ್ನು ಗುರುತಿಸಿದ್ದು, ಇಎಸ್‌ಐ ಆಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಎರಡು ವರ್ಷಗಳು ಕಳೆದರೂ ಕಾಮಗಾರಿಗೆ ಚಾಲನೆ ಮಾತ್ರ ಇನ್ನೂ ದೊರೆತಿಲ್ಲ.
-ಉದಯ ಆಚಾರ್ ಸಾಸ್ತಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.