Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ
Team Udayavani, Nov 18, 2024, 2:24 PM IST
ಸಾಸ್ತಾನ: ಇತಿಹಾಸ ಮತ್ತು ಪುರಾತತ್ವ ಶಾಸ್ತ್ರಜ್ಞ, ಶಿವಮೊಗ್ಗ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆಯ ಅಧ್ಯಕ್ಷ ಡಾ| ಎಸ್.ಜಿ. ಸಾಮಕ್ ಅವರು ಬ್ರಹ್ಮಾವರ ತಾಲೂಕಿನ ಸಾಸ್ತಾನ -ಪಾಂಡೇಶ್ವರ ಗ್ರಾಮದ ಚಡಗರ ಕೇರಿಯ ಶ್ರೀ ವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಅಪರೂಪದ ಲಿಂಗ ಮುದ್ರೆ ಕಲ್ಲನ್ನು ಪತ್ತೆ ಹಚ್ಚಿದ್ದಾರೆ.
ಸುಮಾರು 14- 15ನೇ ಶತಮಾನಕ್ಕೆ ಸೇರಿರುವ ಕಣ ಶಿಲೆಯ ಈ ಕಲ್ಲು ಆಯತಾಕಾರದಲ್ಲಿದೆ. (34 ಸೆಂ.ಮೀ. ಅಗಲ ಹಾಗೂ 19 ಸೆಂ.ಮಿ ದಪ್ಪ). ಇದರ ಉದ್ದ 94 ಸೆಂ.ಮಿ.. ಕಲ್ಲಿನ ಮುಂಭಾಗದ ಅಗಲ ಮುಖದ ಮೇಲೆ ಸೂರ್ಯ ಚಂದ್ರರ ಸಹಿತ ಶಿವಲಿಂಗದ ಉಬ್ಬು ಶಿಲ್ಪವಿದೆ. ಇದರ ಬಲಬದಿಯ ಸಣ್ಣ ಮುಖದ ಮೇಲೆ 55 ಸೆಂ.ಮೀ. ಉದ್ದ ಹಾಗೂ 5 ಸೆಂ.ಮೀ. ಅಗಲದ ಅಳತೆಯ ಉಬ್ಬು ಶಿಲ್ಪವಿದೆ. ಹಿಂದೆ ಭೂದಾನ ನೀಡುವ ಸಂದರ್ಭದಲ್ಲಿ ಲಿಂಗ ಮುದ್ರೆ ಅಥವಾ ವಾಮನ ಮುದ್ರೆ ಕಲ್ಲುಗಳನ್ನು ನಿಲ್ಲಿಸುವ ಪರಿಪಾಠವಿತ್ತು. ಕರ್ನಾಟಕದಲ್ಲಿ ಈ ರೀತಿಯ ನೂರಾರು ಕಲ್ಲುಗಳು ದೊರೆತಿದ್ದರೂ ಅಳತೆ ಕೊಲಿನ ಸಹಿತ ಇರುವ ಲಿಂಗ ಮುದ್ರೆ ಕಲ್ಲು ಇಲ್ಲಿ ದೊರೆತಿರುವುದು ರಾಜ್ಯದಲ್ಲೇ ಪ್ರಪ್ರಥಮ.
ಹೆಚ್ಚಿನ ಅಧ್ಯಯನ ಮುಂದುವರಿದಿದ್ದು, ಈ ಕಾರ್ಯದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಸೇವಾ ಸಂಘ, ಶ್ರೀ ವಿನಾಯಕ ದೇವಸ್ಥಾನ ಚಡಗರ ಮಠ, ಸಾಸ್ತಾನ- ಪಾಂಡೇಶ್ವರದ ಅಧ್ಯಕ್ಷ ಪಿ.ರಾಮಕೃಷ್ಣ ಚಡಗ, ಕೋಶಾಧಿಕಾರಿ ಪಿ.ಸಿ.ಹೊಳ್ಳ ಹಾಗೂ, ಹಂಗಾರಕಟ್ಟೆ ಸಾಸ್ತಾನ ರೋಟರಿ ಮಾಜಿ ಅಧ್ಯಕ್ಷ ಪಿ. ಹೆಚ್. ಅರವಿಂದ ಶರ್ಮ ಮಾಹಿತಿ ನೀಡಿ ಸಹಕರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.