ಐತಿಹಾಸಿಕ ಕಟ್ಟಿ ಕೆರೆ ಉಳಿಸಿ
Team Udayavani, Oct 18, 2022, 8:59 AM IST
ಕಟಪಾಡಿ: ಮೂಡಬೆಟ್ಟು ಗ್ರಾಮದ ಐತಿಹಾಸಿಕ ಕಟ್ಟಿಕೆರೆ ಉಳಿಸಿ ಧಾರ್ಮಿಕ ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿ ಪಡಿಸುವಂತೆ ಜನಾಗ್ರಹ ಕೇಳಿ ಬರುತ್ತಿದೆ.
ರಾ.ಹೆ. 66ರ ಬದಿಯಲ್ಲಿಯೇ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಇರುವ ವಿಶಾಲವಾದ ಈ ಕಟ್ಟಿಕೆರೆಯು ಜೀರ್ಣಗೊಂಡಿದ್ದು, ತೀರಾ ನಾದುರಸ್ತಿಯಲ್ಲಿದೆ. ಕೆರೆಯ ಒಳಭಾಗದ ಆವರಣವು ಕುಸಿದು ಬಿದ್ದಿದೆ. ಸುರಕ್ಷತೆಗಾಗಿ ಆವರಣ ಗೋಡೆಯೂ ಇಲ್ಲವಾಗಿದೆ. ಈ ಪ್ರದೇಶದ ಹಲವು ಎಕರೆ ಪ್ರದೇಶಕ್ಕೆ ಅಂತರ್ಜಲ ಮಟ್ಟದ ವೃದ್ಧಿ ಹಾಗೂ ಕೃಷಿ ಚಟುವಟಿಕೆಗಳಿಗೂ ಇಲ್ಲಿನ ಸಂಗ್ರಹ ಗೊಂಡ ನೀರು ವರವಾಗಲಿದೆ.
ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಈ ಕಟ್ಟಿಕೆರೆಯು ಪಕ್ಕದಲ್ಲಿಯೇ ಇರುವ ನಾನಯರ ಗರಡಿಯಲ್ಲಿ ಪಳಗಿದ ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ ಚೆನ್ನಯರು ತಂಗಿರುವ ಪ್ರದೇಶವಾಗಿದ್ದು, ಈ ಕೆರೆಯ ನೀರು ಬಳಕೆಯಾಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿದೆ. ಸುಸಜ್ಜಿತವಾಗಿದ್ದ ಈ ಕಟ್ಟಿಕೆರೆಯು ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವರ ತೀರ್ಥಸ್ಥಾನವೂ ಆಗಿದ್ದು ಪವಿತ್ರ ಸ್ಥಳವಾಗಿ ಪ್ರಾಮುಖ್ಯತೆಯನ್ನು ಹೊಂದಿದೆ.
ಇಂತಹ ಪಾವಿತ್ರ್ಯತೆವುಳ್ಳ, ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ಕಟ್ಟಿಕೆರೆಯನ್ನು ನವೀಕರಣಗೊಳಿಸಿ ಸೂಕ್ತ ರೀತಿಯಲ್ಲಿ ಅಭಿವೃದ್ಧಿಪಡಿಸಿ ಧಾರ್ಮಿಕ ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಸ್ಥಳವಾಗಿ ಬೆಳೆಸುವಲ್ಲಿ ಜನಪ್ರತಿನಿಧಿಗಳು, ಸಂಬಂಧ ಪಟ್ಟ ಇಲಾಖೆಯು ಕಾರ್ಯೋನ್ಮುಖವಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಂಪೂರ್ಣ ನಾದುರಸ್ಥಿ: ಕಟಪಾಡಿ ಬೀಡುವಿಗೂ ಸಂಬಂಧ ಹೊಂದಿದ್ದು, ಮೂಡಬೆಟ್ಟು ಮಹಾಲಿಂಗೇಶ್ವರ ದೇಗುಲದ ಉತ್ಸವಾದಿ ಸಂದರ್ಭ ಕಟ್ಟೆ ಪೂಜೆ ಹಾಗೂ ಗಣಪತಿ ವಿಸರ್ಜನೆಯ ಕಟ್ಟಿಕೆರೆಯಾಗಿಯೂ ಬಳಕೆಯಲ್ಲಿದ್ದು ಸಂಪೂರ್ಣ ನಾದುರಸ್ಥಿಯಲ್ಲಿದೆ. ಪವಿತ್ರವಾದ ಇಂತಹ ಕೆರೆಯ ಅಭಿವೃದ್ಧಿ ಅತ್ಯವಶ್ಯಕ . –ಅಶೋಕ್ ಶೆಟ್ಟಿ ಮೂಡಬೆಟ್ಟು ಗುತ್ತು, ಮಾಜಿ ಸದಸ್ಯರು, ಕಟಪಾಡಿ ಗ್ರಾ.ಪಂ.
ಕುಸಿತದ ಭೀತಿ: ಹೂಳು ತುಂಬಿದೆ. ದಂಡೆಗಳು ಕುಸಿದು ಕೆರೆಯೊಳಗೆ ಸೇರಿಕೊಂಡಿದೆ. ಮಳೆಗಾಲದಲ್ಲಿ ಯತೇತ್ಛವಾಗಿ ನೀರು ಹರಿದು ಬಂದು ಈ ಕಟ್ಟಿಕೆರೆಯೊಳಗೆ ಸೇರುವುದರಿಂದ ಮತ್ತಷು ಕುಸಿತದ ಭೀತಿ ಇದೆ. ಕೆರೆಯ ಪಕ್ಕದಲ್ಲಿಯೇ ಸ್ಥಳೀಯರು ತೆರಳುವುದರಿಂದ ಕೆರೆ ಕುಸಿತವು ಅಪಾಯವನ್ನು ಉಂಟು ಮಾಡುವ ಸಾಧ್ಯತೆಯೂ ಇದೆ. ಕೂಡಲೇ ಇಲಾಖೆಯು ಎಚ್ಚೆತ್ತು ಅಭಿವೃದ್ಧಿಪಡಿಸುವ ಮೂಲಕ ಧಾರ್ಮಿಕ- ಐತಿಹಾಸಿಕ ಪರಂಪರೆ ಹೊಂದಿರುವ ಕಟ್ಟಿಕೆರೆಯನ್ನು ಸುಸಜ್ಜಿತಗೊಳಿಸಬೇಕಿದೆ. – ಕೆ. ಮುರಲೀಧರ ಪೈ, ಸ್ಥಳೀಯರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.