ಕೆಪಿಎಸ್ ಬಲವರ್ಧನೆಗೆ ಎಸ್‌ಡಿಎಂಸಿ ಏಕೀಕರಣ
ಸಮನ್ವಯ, ಸಹಕಾರ ಕೊರತೆ ನಿವಾರಣೆಗೆ ಇಲಾಖೆಯಿಂದ ಕ್ರಮ
Team Udayavani, Nov 24, 2021, 7:20 AM IST
ಸಾಂದರ್ಭಿಕ ಚಿತ್ರ..
ಉಡುಪಿ: ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲು ರಾಜ್ಯ ಸರಕಾರ ಸ್ಥಾಪಿಸಿದ್ದ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗಳ ಶಾಲಾಭಿ ವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಗಳ ನಡುವಿನ ಬಿಕ್ಕಟ್ಟು ಶಮನಕ್ಕಾಗಿ ಹೊಸರೂಪದಲ್ಲಿ ಎಸ್‌ಡಿಎಂಸಿ ರಚನೆಗೆ ಸರಕಾರ ಮುಂದಾಗಿದೆ.
ರಾಜ್ಯದಲ್ಲಿ 370ಕ್ಕೂ ಅಧಿಕ ಕೆಪಿಎಸ್‌ಗಳಿವೆ. ಪೂರ್ವ ಪ್ರಾಥಮಿಕದಿಂದ ಪಿಯುಸಿ ವರೆಗಿನ ಶಿಕ್ಷಣವನ್ನು ಸರಕಾರಿ ವ್ಯವಸ್ಥೆಯಲ್ಲಿ ನೀಡಲಾಗುತ್ತಿದೆ. ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ವಿಭಾಗ ಸೇರಿಸಿ ಕೆಪಿಎಸ್‌ಗಳ ರಚನೆ ಮಾಡಿರುವುದರಿಂದ ಸದ್ಯ ಮೂರು ಪ್ರತ್ಯೇಕ ಎಸ್‌ಡಿಎಂಸಿಗಳಿವೆ. ಇದ ರಿಂದ ಶಾಲೆಯ ಆಡಳಿತಾತ್ಮಕ ಅಥವಾ ಶೈಕ್ಷಣಿಕ ಅಭಿವೃದ್ಧಿಗೆ ಏಕರೂಪದ ನಿರ್ಣಯ ತೆಗೆದು ಕೊಳ್ಳಲು ತೊಡಕಾಗುವ ಜತೆಗೆ ಎಸ್‌ಡಿಎಂಸಿ ಸದಸ್ಯರ ನಡುವೆ ಭಿನ್ನಾಭಿಪ್ರಾಯವೂ ಹೆಚ್ಚಿತ್ತು. ಹೀಗಾಗಿ ಎಸ್‌ಡಿಎಂಸಿಗಳನ್ನು ಪುನಾರಚಿಸಿ, ಹೊಸಬರ ಸೇರ್ಪಡೆಗೂ ಸರಕಾರ ನಿರ್ಧರಿಸಿದೆ.
ಶಾಲಾಡಳಿತದಲ್ಲಿ ಮಕ್ಕಳ ಹೆತ್ತವರು ಮತ್ತು ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಒಂದು ಕೆಪಿಎಸ್‌ಗೆ ಒಂದೇ ಎಸ್‌ಡಿಎಂಸಿ ರಚಿಸಲು ಸಮಗ್ರ ಶಿಕ್ಷಣದ ಯೋಜನ ನಿರ್ದೇ ಶಕರಿಗೆ ಸೂಚನೆ ನೀಡಲಾಗಿದೆ. ಎಸ್‌ಡಿ ಎಂಸಿಗಳ ಮೇಲುಸ್ತುವಾರಿಯನ್ನು ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ಸಮಗ್ರ ಶಿಕ್ಷಣದ ಯೋಜನ ನಿರ್ದೇಶಕರು ನೋಡಿಕೊಳ್ಳಲಿದ್ದಾರೆ ಎಂದು ಸರಕಾರದ ಉನ್ನತ ಮೂಲ ಖಚಿತಪಡಿಸಿವೆ.
ಇದನ್ನೂ ಓದಿ:ಉತ್ತರ ಪ್ರದೇಶಕ್ಕೆ ಸಿಗಲಿದೆ ಐದನೇ ಅಂ.ರಾ. ವಿಮಾನ ನಿಲ್ದಾಣ
ಪದನಿಮಿತ್ತ ಸದಸ್ಯರ ಸೇರ್ಪಡೆ
ಎಸ್‌ಡಿಎಂಸಿಯಲ್ಲಿ 16 ಮಂದಿ
ಪೋಷಕ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಇವರಲ್ಲೇ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ನಡೆಯುತ್ತದೆ. ಸ್ಥಳೀಯ ಶಾಸಕರು ಗೌರವಾಧ್ಯಕ್ಷ ರಾಗಿರುತ್ತಾರೆ.ಶಾಲಾ ವ್ಯಾಪ್ತಿಯ ಗ್ರಾ.ಪಂ. ಅಧ್ಯಕ್ಷ ಅಥವಾ ನಗರಸಭೆ, ಪುರ ಸಭೆ, ಪ.ಪಂ. ವಾರ್ಡ್ ಸದಸ್ಯರು ಎಸ್‌ಡಿಎಂಸಿಗಳ ಪದ ನಿಮಿತ್ತ ಸದಸ್ಯರಾಗಲಿದ್ದಾರೆ. ಶಾಲಾ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆ, ಪ್ರಾ.ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ವಿದ್ಯಾರ್ಥಿ ನಿಲಯಗಳ ವಾರ್ಡನ್, 6 ಮಂದಿ ವಿದ್ಯಾರ್ಥಿ ಗಳು, ಶಾಲೆಯ ದಾನಿಗಳು, ಶಾಲಾ ವ್ಯಾಪ್ತಿಯ ಶಿಕ್ಷಣ ತಜ್ಞ ಅಥವಾ ನಿವೃತ್ತ ಶಿಕ್ಷಕ, ಸ್ಥಳೀಯ ಯುವಕ, ಯುವತಿ ಸಂಘದ ಓರ್ವ ಪ್ರತಿನಿಧಿ ನಾಮನಿರ್ದೇಶಿತರಾಗಲಿದ್ದಾರೆ.
ಸ್ಥಾಯಿ ಸಮಿತಿ
ಎಸ್‌ಡಿಎಂಸಿಗಳಲ್ಲೇ ಮೂರು ಉಪಸಮಿತಿ ಅಥವಾ ಸ್ಥಾಯೀಸಮಿತಿ ರಚನೆ ಮಾಡಲಾಗು ವುದು. ಭೌತಿಕ ಸೌಲಭ್ಯ ಉಸ್ತುವಾರಿಸಮಿತಿ ಶಾಲೆಯ ಸಿವಿಲ್ ಕಾಮಗಾರಿ ಸಂದರ್ಭ ಮೇಲುಸ್ತು ವಾರಿ ನೋಡಿಕೊಳ್ಳಲಿದೆ. ಶೈಕ್ಷಣಿಕ ಗುಣಮಟ್ಟ ಖಾತರಿ ಸಮಿತಿಯು ಮಕ್ಕಳ, ಶಿಕ್ಷಕರ ಹಾಜರಾತಿ, ವಾರ್ಷಿಕ ಕಾರ್ಯಸೂಚಿ, ವೇಳಾ ಪಟ್ಟಿ, ಪಠ್ಯಬೋಧನೆ ಖಾತ್ರಿ, ಕಲಿಕಾ ಪ್ರಗತಿ ಮತ್ತು ಮಕ್ಕಳ, ಪಾಲಕರ ಕೌನ್ಸೆಲಿಂಗ್ ಇತ್ಯಾದಿ ಕಾರ್ಯ ನಿರ್ವಹಿಸಲಿದೆ. ಸುರಕ್ಷಾ ಸಮಿತಿ ಶಾಲಾವರಣದಲ್ಲಿ ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ಗಮನ ಹರಿಸಲಿದೆ.
ಒಂದೇ ಎಸ್‌ಡಿಎಂಸಿ ರಚಿಸಿ, ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ವಿವಿಧ ಇಲಾಖೆಯ ಪ್ರತಿನಿಧಿ ಗಳನ್ನು, ಸಂಘಸಂಸ್ಥೆಯ ಸದಸ್ಯ ರನ್ನು ಸೇರಿಸ ಲಾಗುವುದು. ಇದರಲ್ಲೇ ಸ್ಥಾಯಿ ಸಮಿತಿಯೂ ಇರಲಿದೆ.
– ಬಿ.ಸಿ. ನಾಗೇಶ್, ಶಿಕ್ಷಣ ಸಚಿವ
ಹೊಸದಾಗಿ ಎಸ್‌ಡಿಎಂಸಿ ರಚನೆ ಮಾಡುವಾಗ ಈ ಹಿಂದೆ ಇದ್ದ ಪ್ರತ್ಯೇಕ ಎಸ್‌ಡಿಎಂಸಿಗಳು ರದ್ದಾಗಲಿವೆ. ಹೊಸದಾಗಿ ರಚಿಸುವ ಕೆಪಿಎಸ್ ಶಾಲೆಗಳ ಎಸ್‌ಡಿಎಂಸಿಯ ಜಂಟಿ ಖಾತೆಗೆ ಉಳಿಕೆ ಅನುದಾನ ವರ್ಗಾವಣೆ ಆಗಲಿದೆ.
-ಎಸ್.ಆರ್.ಎಸ್. ನಾಧನ್, ವಿಶೇಷಾಧಿಕ ಮತ್ತು ಅಧೀನ ಕಾರ್ಯದರ್ಶಿ (ಯೋಜನೆ) ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ
-ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.