![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 16, 2023, 3:34 PM IST
ಮಲ್ಪೆ: ಬಿಪರ್‌ಜಾಯ್ ಚಂಡಮಾರುತದಿಂದಾಗಿ ಕಡಲು ಪ್ರಕ್ಷುಬ್ದಗೊಂಡಿದ್ದು ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಇದು ಜಿಲ್ಲೆಯ ಕಡಲತೀರದ ಪ್ರದೇಶದಲ್ಲಿ ಕಡಲಕೊರೆತದ ಭೀತಿ ಉಂಟಾಗಿದ್ದು, ಕಡಲ ತಡಿಯ ನಿವಾಸಿಗಳಿಗೆ ಆತಂಕ ಉಂಟು ಮಾಡಿದೆ. ಈ ಬಾರಿ ಕೆಲವೆಡೆ ಕಡಲ ಕೊರೆತ ಕಂಡು ಬಂದರೂ ಕೆಲವು ಕಡೆ ಕಡಿಮೆ ಎನ್ನಲಾಗಿದೆ.
ಈ ಹಿಂದೆ ಮಲ್ಪೆ ಪಡುಕರೆ, ಮಲ್ಪೆ ಬೀಚ್, ಹನುಮಾನ್‌ನಗರ, ತೊಟ್ಟಂ, ಹೂಡೆ
ಯಲ್ಲಿ ಪ್ರತೀ ವರ್ಷ ಸಾಮಾನ್ಯವಾಗಿ ಕಡಲ್ಕೊರೆತ ಕಾಣಿಸಿಕೊಳ್ಳುತ್ತಿತ್ತು. ಮೂಳೂರು, ಮಟ್ಟು , ಉದ್ಯಾವರದ ಪ್ರದೇಶದಲ್ಲಿ ಈ ಹಿಂದೆ ಹೆಚ್ಚು ಕೊರೆತ ಸಂಭವಿಸುತ್ತಿದ್ದು ಇದೀಗ ಕಳೆದ ಕೆಲವು ವರ್ಷದಿಂದ ತುಸು ಕಡಿಮೆಯಾಗಿದೆ.
ಉದ್ಯಾವರ ಮಟ್ಟು, ಕುತ್ಪಾಡಿ ಪ್ರದೇಶದಲ್ಲಿ 5 ವರ್ಷಗಳ ಹಿಂದೆ ಎಡಿಬಿ ಯೋಜನೆಯಡಿ ಬೇÅಕ್‌ವಾಟರ್ ರೀತಿ
ಯಲ್ಲಿ 200 ಮೀ. ಅಂತರದಲ್ಲಿ ಸುಮಾರು 20 ಕಡೆ ಗ್ರೆಹನ್ಸ್ ತಡೆಗೋಡೆಯನ್ನು ಮಾಡ
ಲಾಗಿತ್ತು. ಇದೀಗ ಆ ಪ್ರದೇಶದಲ್ಲಿ ಕೊರೆತ ಉಂಟಾಗುವುದು ಕಡಿಮೆ ಎನ್ನಲಾಗಿದೆ.
ಕುತ್ಪಾಡಿಯಿಂದ ಮುಂದಕ್ಕೆ ಬಂದರು ಇಲಾಖೆಯ ವತಿಯಿಂದ ತಲಾ 1.25 ಕೋ. ರೂ. ವೆಚ್ಚದಲ್ಲಿ ಸುಮಾರು 5 ಕಡೆ
75 ಮೀಟರ್ ಉದ್ದದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿದೆ. ಈ ಬಾರಿ ಮೂಳೂರು, ಕಾಪು, ಮರವಂತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಮತ್ತೆ ಕಡಲ ಕೊರೆತ ಕಾಣಿಸಿಕೊಂಡಿದೆ. ಪ್ರಕೃತಿ ವಿಕೋಪದಡಿ ಇಲ್ಲಿ ತಾತ್ಕಾಲಿಕ ಪರಿಹಾರಿ ಕಲ್ಪಿಸುವ ಯೋಜನೆಯೂ ನಡೆಯಲಿದೆ ಎನ್ನಲಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.