ಸೀಲ್ ಡೌನ್, ನಿಷೇಧಿತ ವಲಯದ ಘೋಷಣೆ
Team Udayavani, May 26, 2020, 8:13 AM IST
ಕಾರ್ಕಳ ತಾಲೂಕಿನ ಪೊಲೀಸ್ ಸಿಬಂದಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮತ್ತಿತರರು ಪೊಲೀಸ್ ಠಾಣೆ ಸುತ್ತಮುತ್ತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಬಹಳಷ್ಟು ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿ ವಾಸಿಸಿರುವ ಪ್ರದೇಶಗಳನ್ನು ಜಿಲ್ಲಾಡಳಿತ ಸೀಲ್‌ಡೌನ್ ಮಾಡಿದ್ದು, ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಅಜೆಕಾರು ಠಾಣೆಯ ಎಎಸ್‌ಐ ಅವರಿಗೆ ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ಅವರು ವಾಸವಾಗಿದ್ದ ತೆಂಕನಿಡಿಯೂರು ಗ್ರಾಮದ ಕೆಳಾರ್ಕಳಬೆಟ್ಟುವಿನ ಪೊಲೀಸ್ ಕ್ವಾರ್ಟರ್ ನಿಷೇಧಿತ ವಲಯವಾಗಿ ಘೋಷಿಸಲಾಗಿದ್ದು, ಈ ಪ್ರದೇಶಕ್ಕೆ ಹೊಂದಿಕೊಂಡಿರುವ ಪೂರ್ವ ಭಾಗದ ಮೈದಾನ, ಪಶ್ಚಿಮ ಭಾಗದ ಸಮುದಾಯ ಭವನ, ಉತ್ತರ ಭಾಗದ ಶ್ಮಶಾನ, ದಕ್ಷಿಣ ಭಾಗ ಗರಡಿ ಮಜಲು ರಸ್ತೆಯನ್ನು ಕಂಟೈನ್ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ. ಇಲ್ಲಿ ಸರ್ವಜನಿಕರ ಸಂಚಾರ ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ ಅಗತ್ಯವಿರುವ ವಸ್ತುಗಳನ್ನು ಸರಕಾರಿ ಅಧಿಕಾರಿಗಳು ತಲುಪಿಸಲಿದ್ದಾರೆ. ಕೋವಿಡ್ ಪಾಸಿಟಿವ್ ಬಂದ ಪ್ರದೇಶದ ಸುತ್ತಮುತ್ತಲಿನ 7 ಕಿ.ಮೀ. ಪ್ರದೇಶವನ್ನು ಬಫರ್ ಝೋನ್ ಆಗಿ ಘೋಷಿಸಲಾಗಿದೆ. ಪೂರ್ವದ ಲಕ್ಷ್ಮೀ ನಗರದ ರಸ್ತೆ, ಪಶ್ಚಿಮದ ಗಾಂಧೀ ಶಾಲೆ, ಉತ್ತರ ಮಾರಿ ಗುಡಿ, ದಕ್ಷಿಣದ ವಡಭಾಂಡೇಶ್ವರ ರಸ್ತೆಯನ್ನು ಜಿಲ್ಲಾಡಳಿತ ಬಫರ್ ಝೋನ್ ಆಗಿ ಘೋಷಿಸಿದೆ.
ನಿಷೇಧಿತ ವಲಯ
ಪೆರ್ವಾಜೆ ಮಹಿಳೆಯೋರ್ವರಿಗೆ ಸೋಂಕು ದೃಢ ಪಟ್ಟ ಹಿನ್ನಲೆಯಲ್ಲಿ ಕಾರ್ಕಳ ಪೇಟೆಯನ್ನು ಸೀಲ್ ಡೌನ್ ಮಾಡಲಾಗಿದೆ. ಈ ಪ್ರದೇಶದ ಪೂರ್ವ ಭಾಗದ ತೆರೆದ ಮೈದಾನ, ಪಶ್ಚಿಮ ಭಾಗದ ಜರಿಗುಡ್ಡೆ ರಸ್ತೆ, ಉತ್ತರ ಭಾಗದ ಹೆಗ್ಡೆ ಕಾಂಪೌಂಡ್, ದಕ್ಷಿಣ ಭಾಗದ ಟಿಎಂಸಿ ರೋಡ್ ಭಾಗವನ್ನು ಕಂಟೈನ್ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ.
ಬಫರ್ ಝೋನ್
ಪಾಸಿಟಿವ್ ಬಂದ ಸುತ್ತಮುತ್ತಲಿನ 7 ಕಿ. ಮೀ. ಪ್ರದೇಶವನ್ನು ಬಫರ್ ಝೋನ್ ಆಗಿ ಘೋಷಿಸಲಾಗಿದ್ದು, ಈ ಪ್ರದೇಶ ಹೊಂದಿಕೊಂಡಿರುವ ಪೂರ್ವ ಭಾಗದಲ್ಲಿ ಕಾರ್ಪೊರೇಶನ್ ಬ್ಯಾಂಕ್ ಮೈದಾನ, ಪಶ್ಚಿಮದಲ್ಲಿ ಪುರಾಣಿಕ ರಸ್ತೆ, ದಕ್ಷಿಣದ ಹವಾಲ್ದಾರ್ ಬೆಟ್ಟ ರಸ್ತೆಯನ್ನು ಜಿಲ್ಲಾಡಳಿತ ಬಫರ್ ಝೋನ್ ಆಗಿ ಘೋಷಿಸಿದೆ.
ನಿಷೇಧಿತ ವಲಯ
29 ವರ್ಷದ ಸಿಬಂದಿಗೆ ಸೋಂಕು ದೃಢ ಪಟ್ಟ ಹಿನ್ನಲೆಯಲ್ಲಿ ಕಾರ್ಕಳ ಪೇಟೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಈ ಭಾಗದ ಪೂರ್ವ ಭಾಗದ ತೆರೆದ ಮೈದಾನ, ಪಶ್ಚಿಮ ಭಾಗದಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆ, ಉತ್ತರ ಭಾಗದ ಶೆಣೈ ಹೌಸ್, ದಕ್ಷಿಣ ಭಾಗದ ಪ್ರಾಪರ್ಟಿ ರಸ್ತೆ ಭಾಗವನ್ನು ಕಂಟೈನ್ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ.
ಬಫರ್ ಝೋನ್
ಪಾಸಿಟಿವ್ ಬಂದ ಸುತ್ತಮುತ್ತಲಿನ 7 ಕಿ. ಮೀ. ಪ್ರದೇಶವನ್ನು ಬಫರ್ ಝೋನ್ ಆಗಿ ಘೋಸಿಸಲಾಗಿದೆ. ಪೂರ್ವ ಭಾಗದಲ್ಲಿ ಮಾರುತಿ ಗ್ಯಾಸ್ ರಸ್ತೆ, ಪಶ್ಚಿಮದಲ್ಲಿ ಎಸ್‌ವಿಟಿ ಕಾಲೇಜು, ಉತ್ತರದ ಪೆರುವಾಜೆ ರಸ್ತೆಯನ್ನು, ದಕ್ಷಿಣದ ಎಸ್‌ವಿಟಿ ಸರ್ಕಲ್ ರಸ್ತೆಯನ್ನು ಜಿಲ್ಲಾಡಳಿತ ಬಫರ್ ಝೋನ್ ಆಗಿ ಘೋಷಿಸಿದೆ.
ಬ್ರಹ್ಮಾವರ
ಬ್ರಹ್ಮಾವರ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ಗೆ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಅವರು ವಾಸವಿದ್ದ ಪತ್ನಿಯ ಮನೆ ಕೋಟ ಸಮೀಪ ವಡ್ಡರ್ಸೆ ಗ್ರಾಮವನ್ನು ನಿಷೇಧಿತ ವಲಯವಾಗಿ ಘೋಷಿಸಲಾಗಿದ್ದು, ಈ ಪ್ರದೇಶಕ್ಕೆ ಹೊಂದಿಕೊಂಡಿರುವ ಪೂರ್ವದ ಎಂ.ಜಿ. ಕಾಲೋನಿ, ಪಶ್ಚಿಮ ಹಾಗೂ ದಕ್ಷಿಣ ಭಾಗದ ತೆರೆದ ಮೈದಾನ, ಉತ್ತರ ಭಾಗದ ಹೈಯರ್ ಹೋಲ್‌ನ್ನು ಕಂಟೈನ್ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ. ಇಲ್ಲಿ ಸಾರ್ವಜನಿಕರ ಸಂಚಾರ ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ 79 ಮನೆಗಳಿದ್ದು, 371 ಜನ ವಾಸಿಸುತ್ತಿದ್ದಾರೆ.
ಪಾಸಿಟಿವ್ ಬಂದ ಪ್ರದೇಶದ ಸುತ್ತಮುತ್ತಲಿನ 7 ಕಿ.ಮೀ. ಪ್ರದೇಶವನ್ನು ಬಫರ್ ಝೋನ್ ಆಗಿ ಘೋಷಿಸಲಾಗಿದ್ದು, ಈ ಪ್ರದೇಶಕ್ಕೆ ಹೊಂದಿಕೊಂಡಿರುವ ಪೂರ್ವದ ಕಾವಡಿ ಗ್ರಾಮ, ಪಶ್ಚಿಮದ ಬನ್ನಾಡಿ, ಉತ್ತರ ಬೇಳೂರು, ದಕ್ಷಿಣದ ಸಾಲಿಗ್ರಾಮ ಟೌನ್‌ನನ್ನು ಜಿಲ್ಲಾಡಳಿತ ಬಫರ್ ಝೋನ್ ಆಗಿ ಘೋಷಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.