ಸಮಾಜಕ್ಕಾಗಿ ಸ್ವ ಅಭಿವೃದ್ಧಿ: ವಸಂತಿ ಪೈ ಕರೆ
ಮಣಿಪಾಲ ದಂತ ವಿಜ್ಞಾನ ಕಾಲೇಜಿನ ವಾರ್ಷಿಕೋತ್ಸವ
Team Udayavani, Nov 1, 2020, 9:27 PM IST
ಉಡುಪಿ: ಕೊರೊನಾ ಸೋಂಕಿನ ಕಾರಣದಿಂದ ಮುಂದೂಡಿಕೆ ಯಾದ ಮಣಿಪಾಲ ದಂತ ವಿಜ್ಞಾನ ಕಾಲೇಜಿನ ವಾರ್ಷಿಕ ಉತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಅ. 30ರಂದು ಆನ್‌ಲೈನ್ ಮೂಲಕ ನಡೆಯಿತು.
ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ತಮಗಾಗಿ ಮಾತ್ರವಲ್ಲದೆ ಜಗತ್ತಿಗಾಗಿಯೂ ಅಭಿವೃದ್ಧಿ ಹೊಂದುವ ದೃಷ್ಟಿಕೋನ ಹೊಂದಿರಬೇಕು. ಮಣಿಪಾಲದಲ್ಲಿ ಕಲಿತ ವಿದ್ಯಾರ್ಥಿಗಳ ಗಮನ ತಮ್ಮ ಗಮ್ಯ ಸ್ಥಾನ ವನ್ನು ಮುಟ್ಟುವಂತಿರಬೇಕು ಎಂದು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಣಿಪಾಲ ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ ಕರೆ ನೀಡಿದರು.
ಕಾಲೇಜಿಗೆ ಎನ್‌ಐಆರ್‌ಎಫ್ ರ್‍ಯಾಂಕಿಂಗ್ ಲಭಿಸಿರುವುದಕ್ಕೆ ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮೆಚ್ಚುಗೆ ಸೂಚಿಸಿದರು. ಬೋಧಕರು ಮತ್ತು ವಿದ್ಯಾರ್ಥಿಗಳ ಸಮರ್ಪಣ ಮನೋಭಾವನೆಯೇ ಗುಣಮಟ್ಟದ ಶಿಕ್ಷಣಕ್ಕೆ ಕಾರಣವಾಗಿದೆ ಎಂದು ಡಾ| ಬಲ್ಲಾಳ್ ತಿಳಿಸಿದರು.
ನಿಷ್ಠೆ, ಪಾರದರ್ಶಕತೆ, ಗುಣಮಟ್ಟ, ತಂಡ ಕಾರ್ಯ, ಅನುಕಂಪದ ಅನುಷ್ಠಾನ ಇವು ಮಾಹೆಯ ಮುಖ್ಯ ನೀತಿಗಳು. ಮಾನವೀಯ ಮೌಲ್ಯ ಮತ್ತು ಸಾಮಾಜಿಕ ಬದ್ಧತೆಯನ್ನು ಮುಂದಿನ ಜನಾಂಗಕ್ಕೆ ಸಂಸ್ಥೆ ಹಸ್ತಾಂತರಿಸುತ್ತಿದೆ. ಜೀವನದ ಸನ್ನಡತೆ ಜಾಗತಿಕ ನಾಗರಿಕರನ್ನು ರೂಪಿಸುತ್ತದೆ ಎಂದು ಮಾಹೆ ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್ ನುಡಿದರು. ಮಾಹೆ ಸಹಕುಲಪತಿ ಡಾ| ಪಿಎಲ್‌ಎನ್‌ಜಿ ರಾವ್ ಅಧ್ಯಕ್ಷತೆ ವಹಿಸಿದ್ದರು.
ಪರಿಸರ ಜಾಗೃತಿ ಅಂಗವಾಗಿ ಬಳಸಿ
ಬಿಸಾಡುವ ಪೆನ್ನುಗಳ ಬದಲು ಪುನರುಪಯೋಗಿಸುವ ಪೆನ್ನುಗಳನ್ನು ಬಳಸುವ “ರೀ ಪೆನ್- ದಿ ಪೆನ್ ಬಾಕ್ಸ್’ ಯೋಜನೆಯನ್ನು ವಸಂತಿ ಪೈಯವರು ಉದ್ಘಾಟಿಸಿದರು. ಸಹ ಡೀನ್ ಡಾ| ವಿದ್ಯಾಸರಸ್ವತಿಯವರು ಯೋಜನೆಯ ಮುನ್ನೋಟ ನೀಡಿ, ಮುಳಿಯ ಪ್ರತಿಷ್ಠಾನ ದಿಂದ ಆರಂಭಿಕ ದೇಣಿಗೆಯಾಗಿ 10,000 ರೂ. ನೀಡಿದರು.
ಕಾಲೇಜಿನ ಡೀನ್ ಡಾ| ಕೀರ್ತಿಲತಾ ಎಂ. ಪೈ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು. ಡಾ| ರಜ್ವಿ ಸೇಠ್ ಅವರು ವಿದ್ಯಾರ್ಥಿ ಸಂಘದ ವರದಿಯನ್ನು ವಾಚಿಸಿದರು. ವಿದ್ಯಾರ್ಥಿಗಳ ಪರವಾಗಿ ಡಾ| ಜೋನಾತನ್ ಕೋಶಿಯವರು ಮಾತನಾಡಿದರು. ಡಾ| ಆನಂದದೀಪ ಶುಕ್ಲಾ ಮತ್ತು ಡಾ| ಶ್ರುತಿ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಪ್ರಶಸ್ತಿ ಪ್ರದಾನ
2019ರ ಶ್ರೇಷ್ಠ ಪ್ರಬಂಧ ಮಂಡನೆಗಾಗಿ ಕನ್ಸರ್ವೇಟಿವ್ ಡೆಂಟಿಸ್ಟ್ರಿ ಆ್ಯಂಡ್ ಎಂಡೋಡಾಂಟಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ|ವಾಸುದೇವ ಬಲ್ಲಾಳ್ ಅವರಿಗೆ ಡಾ| ಟಿಎಂಎ ಪೈ ಚಿನ್ನದ ಪದಕವನ್ನು ಮತ್ತು ಶ್ರೇಷ್ಠ ಬೋಧನೋಪಕರಣಕ್ಕಾಗಿ ಡಾ| ಸುನಿಲ್ ಎಸ್. ನಾಯಕ್ ಮತ್ತು ಡಾ| ಅನುಪಮ ಸಿಂಗ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ| ಸೋಹಮ್ ಮಿತ್ರಾ ಅವರಿಗೆ ಶ್ರೇಷ್ಠ ನಿರ್ಗಮನ ವಿದ್ಯಾರ್ಥಿ ಪ್ರಶಸ್ತಿ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.