Shirva ಆರೋಗ್ಯ ಮಾತಾ ಚರ್ಚ್: ವಾರ್ಷಿಕ ಮಹೋತ್ಸವಕ್ಕೆ ಚಾಲನೆ
Team Udayavani, Jan 31, 2024, 8:51 AM IST
ಶಿರ್ವ: ಇಲ್ಲಿನ ಆರೋಗ್ಯ ಮಾತಾ (ಸಾವುದ್ ಅಮ್ಮನವರ) ದೇವಾಲಯದ ವಾರ್ಷಿಕ ಮಹೋತ್ಸವವು ದೇವರ ವಾಕ್ಯದ ಸಂಭ್ರಮದೊಂದಿಗೆ ಜ.30ರ ಮಂಗಳವಾರ ಆರಂಭಗೊಂಡಿತು.
ಮಂಗಳೂರು ಸಂತ ಅಂತೋನಿ ಆಶ್ರಮದ ಸಹಾಯಕ ನಿರ್ದೇಶಕ ವಂ| ನೆಲ್ಸನ್ ಪೆರಿಸ್ ಅವರು ದೇವರ ವಾಕ್ಯದ ಧ್ಯಾನ -ಚರಲ್ ಆಶೀರ್ವಾದದೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಿದರು.ಬಳಿಕ ಮಾತೆ ಮೇರಿಯ ಮೂರ್ತಿಯನ್ನು ಮೆರವಣಿಗೆಯಲ್ಲಿ ಚರ್ಚಿಗೆ ತರಲಾಯಿತು.
ಜ.31ರಂದು ಬೆಳಗ್ಗೆ 10-15ಕ್ಕೆ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಅ|ವಂ| ಡಾ| ಎಲೋಶಿಯಸ್ ಪಾವ್É ಡಿಸೋಜಾ ಅವರ ನೇತೃತ್ವದಲ್ಲಿ ವಾರ್ಷಿಕ ಮಹೋತ್ಸವ ಪವಿತ್ರ ಬಲಿಪೂಜೆಯೊಂದಿಗೆ ಸಂಪನ್ನಗೊಳ್ಳಲಿದೆ.
ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಸರ್ವ ಧರ್ಮದ ಭಕ್ತಾಧಿಗಳಿಗೆ ಆರೋಗ್ಯ ಮಾತೆಯ ಆಶೀರ್ವಾದ ಪಡೆಯಲು ಹರಕೆ ಸಲ್ಲಿಸಲು ಹಾಗೂ ಮೊಂಬತ್ತಿ ಉರಿಸಲು ಅವಕಾಶ ಕಲ್ಪಿಸಲಾಗಿದೆ. ರಾತ್ರಿ ಸರ್ವ ಧರ್ಮದ ಸಾವಿರಾರು ಭಕ್ತರು ಆಗಮಿಸಿ ಆರೋಗ್ಯ ಮಾತೆಯ ದರ್ಶನ ಪಡೆದು ತಮ್ಮ ಸಂಕಷ್ಟ ನಿವಾರಣೆಗಾಗಿ ಮೊಂಬತ್ತಿ ಉರಿಸಿ ಹರಕೆ ಸಲ್ಲಿಸಿ ತೀರ್ಥ, ಎಣ್ಣೆ ಪ್ರಸಾದ ಪಡೆದರು.
ಉಡುಪಿ ಡಯಾಸಿಸ್‌ನ ಚಾನ್ಸ್‌ಲರ್ ವಂ|ಡಾ|ರೋಷನ್ ಡಿಸೋಜಾ, ಮಂಗಳೂರು ಡಯಾಸಿಸ್‌ನ ಚಾನ್ಸ್‌ಲರ್ ವಂ| ವಿಕ್ಟರ್ ಜಾರ್ಜ್‌ಡಿಸೋಜಾ, ಉಡುಪಿ ವಲಯದ ಪ್ರಧಾನ ಧರ್ಮಗುರು ವಂ| ಚಾರ್ಲ್ಸ್ ಮೆನೇಜಸ್, ಕಾರ್ಕಳ ವಲಯದ ಪ್ರಧಾನ ಧರ್ಮಗುರು ವಂ| ಪೌಲ್ ರೇಗೋ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ| ಆಂಟನಿ ಪ್ರಕಾಶ್ ಮೊಂತೆರೋ, ಕೆನಡಾದ ಮಾಜಿ ಪ್ರೊವಿನ್ಶಿಯಲ್ ವಂ| ಹೆನ್ರಿ ಆಳ್ವ, ಐಸಿವೈಎಂ ರಾಷ್ಟ್ರೀಯ ನಿರ್ದೇಶಕ ವಂ|ಚೇತನ್ ಮಚಾದೋ, ಶಿರ್ವ ವಲಯದ ಪ್ರಧಾನ ಧರ್ಮಗುರು ವಂ|ಡಾ| ಲೆಸ್ಲಿ ಡಿಸೋಜಾ, ಸಹಾಯಕ ಧರ್ಮಗುರುಗಳಾದ ವಂ| ರೋಲ್ವಿನ್ ಅರಾನ್ಹಾ, ವಂ| ರೋನ್ಸನ್ ಪಿಂಟೊ, ವಂ| ಜೇಸನ್ ಲೋಬೋ , ಚರ್ಚ್‌ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಅರಾನ್ಹಾ,ಕಾರ್ಯದರ್ಶಿ ಫ್ಲೇವಿ ಡಿಸೋಜಾ ಮತ್ತು ಚರ್ಚ್ ಆಯೋಗದ ಸಂಯೋಜಕಿ ಲೀನಾ ಮಚಾದೋ, ಚರ್ಚ್ ಆರ್ಥಿಕ ಮತ್ತು ಪಾಲನ ಮಂಡಳಿಯ ಸದಸ್ಯರು, ಉಡುಪಿ ಮತ್ತು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಗುರುಗಳು ಹಾಗೂ ಶಿರ್ವ ವಲಯದ ವಿವಿಧ ಚರ್ಚುಗಳ ಧರ್ಮಗುರುಗಳು, ಧರ್ಮಭಗಿನಿಯರು, ಭಕ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.