Shirva: ಹುಲಿ ವೇಷ ಹಾಕಿ ಅನಾರೋಗ್ಯಪೀಡಿತ ಬಾಲಕನಿಗೆ ನೆರವು ನೀಡಿದ ಪೋರರು!
ಸುದಿನ ವರದಿಗೆ ಸ್ಪಂದಿಸಿದ ಪಿತ್ರೋಡಿಯ 12-16 ವರ್ಷದ ಬಾಲಕರು
Team Udayavani, Oct 18, 2024, 3:59 PM IST
ಶಿರ್ವ: 12ರಿಂದ 16ರ ಹರೆಯದ ಪೋರರ ತಂಡವೊಂದು ನವರಾತ್ರಿಯ ಸಂದರ್ಭದಲ್ಲಿ ಹುಲಿ ವೇಷ ಹಾಕಿ ಅದರಲ್ಲಿ ಉಳಿದ ಹಣವನ್ನು ಶಿರ್ವದ ತಮ್ಮದೇ ವಯಸ್ಸಿನ ಅನಾರೋಗ್ಯ ಪೀಡಿತ ಬಾಲಕನಿಗೆ ಚಿಕಿತ್ಸೆಗಾಗಿ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ಶಿರ್ವ ಗ್ರಾಮದ ಮಟ್ಟಾರು ಕಡಂಬು ನಿವಾಸಿ ಅರುಣ್ ಕುಮಾರ್ ಅವರ ಪುತ್ರ 16ರ ಹರೆಯದ ಬಾಲಕ ದೀಶಿತ್ ಕುಮಾರ್ ಹಲವಾರು ವರ್ಷಗಳಿಂದ ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದು, ಹಾಸಿಗೆ ಹಿಡಿದಿದ್ದಾನೆ. ಊರವರು ಮತ್ತು ಹಿತೈಷಿಗಳ ಸಹಾಯದಿಂದ ಬಾಲಕನಿಗೆ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಡ ಕುಟುಂಬದ ಜೀವನ ನಿರ್ವಹಣೆಯೂ ಸೇರಿದಂತೆ ಬಾಲಕನ ಚಿಕಿತ್ಸೆಗಾಗಿ ದಾನಿಗಳ ನೆರವಿನ ಅಗತ್ಯವಿರುವ ಬಗ್ಗೆ ಉದಯವಾಣಿ ಸುದಿನದಲ್ಲಿ ಸೆ. 22ರಂದು ವರದಿ ಪ್ರಕಟಿಸಿತ್ತು.
ಇದನ್ನು ಗಮನಿಸಿದ ಪಿತ್ರೋಡಿಯ ಗೌತಮ್, ಸುಹಾನ್, ರಿತೇಶ್ ಮತ್ತು ಸುರೇಶ್ ನೇತೃತ್ವದ 15 ಮಂದಿಯ ಟೀಂ ಯುವ ಫ್ರೆಂಡ್ಸ್ ತಂಡ ಈ ಬಾರಿಯ ಹುಲಿ ವೇಷದಲ್ಲಿ ಉಳಿದ ಮೊತ್ತವನ್ನು ಬಾಲಕನಿಗೆ ನೀಡಲು ನಿರ್ಧರಿಸಿದರು.
ಅ. 11ರಂದು ಲೋಬಾನ ಸೇವೆ ನೆರವೇರಿಸಿ ಪಿತ್ರೋಡಿಯ ಗೋವಿಂದ ನಗರದಿಂದ ಹೊರಟು ಉದ್ಯಾವರ, ಸಂಪಿಗೆ ನಗರ, ಪಿತ್ರೋಡಿ ಮತ್ತು ಮಲ್ಪೆ ಸುತ್ತಮುತ್ತ ಪರಿಸರದಲ್ಲಿ ಸಂಚರಿಸಿ ಹಣ ಸಂಗ್ರಹಿಸಿತು. ತಂಡವು ಅ. 17ರಂದು ಮನೆಗೆ ತೆರಳಿ ಹಸ್ತಾಂತರಿಸಿದೆ. ಸೌತ್ ಕೆನರಾ ಫೋಟೋಗ್ರಾಫರ್ ಎಸೋಸಿಯೇಶನ್‌ನ ಕಾಪು ವಲಯದ ಮಾಜಿ ಅಧ್ಯಕ್ಷ ರವಿಕುಮಾರ್ ಕಟಪಾಡಿ, ಟೀಂ ಯುವ ಫ್ರೆಂಡ್ಸ್ ನ ಬಾಲಕರ ತಂಡದ ಗೌತಮ್, ಸುಹಾನ್, ರಿತೇಶ್, ಬಾಲಕನ ತಂದೆ ಅರುಣ್ ಕುಮಾರ್, ತಾಯಿ ಮತ್ತು ಸಹೋದರಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.