ಅಪಾಯಕಾರಿ ಸ್ಥಿತಿಯಲ್ಲಿ ಶಿರ್ವ ಸೊರ್ಕಳ ಕಿರು ಸೇತುವೆ
Team Udayavani, Jul 5, 2023, 3:36 PM IST
ಶಿರ್ವ: ಕುತ್ಯಾರು, ಶಿರ್ವ, ಪಿಲಾರು ಗ್ರಾಮಗಳ ಜನರ ದೈನಂದಿನ ಚಟುವಟಿಕೆಗಳ ಕೊಂಡಿಯಾಗಿ, ಹಲವು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಶಿರ್ವ ಸೊರ್ಕಳ ಸಂಪರ್ಕ ಸೇತುವೆಯು ಅಪಾಯಕಾರಿ ಸ್ಥಿತಿಯಲ್ಲಿದ್ದು, ಕುಸಿಯುವ ಹಂತದಲ್ಲಿದೆ.
ಕುತ್ಯಾರು, ಶಿರ್ವ ಹಾಗೂ ಪಿಲಾರು ಗ್ರಾಮ ವ್ಯಾಪ್ತಿಯ ನಾಗರಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ 3 ಗ್ರಾಮಗಳ ಕೃಷಿಕರಿಗೆ ಈ ಸಂಪರ್ಕ ಸೇತುವೆ ಉಪಯೋಗಿಸುತ್ತಾರೆ. ಯಾವುದೇ ಸಂದರ್ಭದಲ್ಲಿ ಕುಸಿದು ಬೀಳಲಿರುವ ಶಿಥಿಲಗೊಂಡ ಸೇತುವೆಯ ದುರಸ್ತಿ ಕಾರ್ಯ ನಡೆಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಪಾಯದ ಕರೆಗಂಟೆ
ಸೇತುವೆ ತಳಪಾಯದ ಕಲ್ಲು ಮತ್ತು ತಡೆಗೋಡೆ ಬಿರುಕು ಬಿಟ್ಟಿದೆ. ಸೇತುವೆಯ ಒಂದು ಭಾಗದ ತಡೆಗೋಡೆ ಕಬ್ಬಿಣದ ರಾಡ್ ಸಂಪೂರ್ಣ ಕಿತ್ತುಹೋಗಿದೆ. ಮಳೆ ಗಾಲದಲ್ಲಿ ಸೊರ್ಕಳ ಕೆರೆಯ ನೀರು ರಭಸದಿಂದ ಹರಿಯುತ್ತಿದ್ದು, ತಡೆಗೋಡೆಯೂ ಮುರಿದಿರುವುದರಿಂದ ಮಳೆಗಾಲದಲ್ಲಿ ಸಂಚರಿಸುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಅಪಾಯದ ಕರೆಗಂಟೆ ಯಾಗಿದೆ. ಅಪಾಯಕಾರಿ ಸೇತುವೆ ತಳ ಪಾಯದ ಕಲ್ಲು ಬಿರುಕು ಬಿಟ್ಟಿರುವು ದರಿಂದ ಶಾಲಾ ವಾಹನಗಳು, ಘನ ವಾಹನಗಳು ಚಲಿಸುವಾಗ ಮತ್ತಷ್ಟು ಬಿರುಕು ಬಿಟ್ಟು ಕುಸಿದು ಬೀಳುವ ಸಾಧ್ಯತೆ ಇದೆ.
ಸುದಿನ ವರದಿ
ಅಪಾಯಕಾರಿ ಸೇತುವೆಯ ದುಃಸ್ಥಿತಿಯ ಬಗ್ಗೆ ಉದಯವಾಣಿ 2019ರ ಜೂ. 11ರಂದು ಸಚಿತ್ರ ವರದಿ ನೀಡಿತ್ತು. ಆದರೆ ಈವರೆಗೆ ಯಾವುದೇ ಸ್ಥಳೀಯಾಡಳಿತ, ಜಿಲ್ಲಾಡಳಿತ ಗಮನ ಹರಿಸಿಲ್ಲ. ಅವಘಡ ಸಂಭವಿಸುವ ಮುನ್ನ ಹೊಸ ಸೇತುವೆ ನಿರ್ಮಿಸಿ ಸಮಸ್ಯೆ ಪರಿಹರಿಸಬೇಕು ಎಂದು ಸ್ಥಳೀಯರ ಮನವಿಯಾಗಿದೆ.
150ಕ್ಕೂ ಹೆಚ್ಚು ಮನೆಗಳಿಗೆ
ಸಂಪರ್ಕ
ಈ ಸೇತುವೆ ಅವಲಂಬಿಸಿರುವ ಜನತೆಯಲ್ಲಿ ಹೆಚ್ಚಿನವರು ಕೃಷಿ ಕುಟುಂಬದವರು. ಪಾದೆಹಿತ್ಲು, ಖಾದ್ರಿಹಿತ್ಲು, ಪಿಲಾರು, ಕುತ್ಯಾರು ಭಾಗದಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಯ ಸಾರ್ವಜನಿಕರು ಈ ಸೇತುವೆ ಮೂಲಕ ಓಡಾಡಬೇಕಿದೆ. ಈ ಭಾಗದಲ್ಲಿ 250 ಎಕರೆಗೂ ಹೆಚ್ಚು ಕೃಷಿ ಭೂಮಿ ಇದ್ದು, ಕೃಷಿ ಉತ್ಪನ್ನಗಳ ಸಾಗಾಟಕ್ಕೆ, ಕೃಷಿಪರಿಕರ, ಯಂತ್ರಗಳು, ಗೊಬ್ಬರಗಳ ಸಾಗಾಟಕ್ಕೆ ಜನರು ಈ ಸಂಪರ್ಕ ಸೇತುವೆಯನ್ನು ಅವಲಂಬಿಸಿದ್ದಾರೆ. ಸೇತುವೆ ಸಂಪರ್ಕ ಕಡಿತಗೊಂಡಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಗಳಿಗೆ ಮತ್ತು ಶಿರ್ವ ಪೇಟೆಗೆ ತೆರಳಲು 5-6 ಕಿ.ಮೀ. ಸುತ್ತು ಬಳಸಿ ದೂರದ ಪಿಲಾರು ಜಾಲಮೇಲ ಕುತ್ಯಾರು ಮಾಗಂದಡಿಗಾಗಿ ಬರುವ ಮಾರ್ಗ ಅವಲಂಬಿಸಬೇಕಾಗಿದೆ.
ತಳಪಾಯದಲ್ಲಿ ಬಿರುಕು
ಅಗಲ ಕಿರಿದಾದ ಸೇತುವೆ ಸಂಚಾರ ಸುರಕ್ಷತೆ ದೃಷ್ಟಿಯಿಂದ ಅನುಕೂಲಕರವಾಗಿಲ್ಲ. ಮಳೆಗಾಲದಲ್ಲಿ ಸೊರ್ಕಳ ಕೆರೆಗೆ ವಿವಿಧ ಕಡೆಯಿಂದ ನೀರು ಹರಿದು ಬರುತ್ತಿರುವುದರಿಂದ ರಭಸವಾಗಿ ನೀರು ಹರಿಯುತ್ತದೆ. ಸೇತುವೆಯ ತಳಪಾಯದಲ್ಲಿ ಬಿರುಕು ಬಿಟ್ಟಿರುವುದರಿಂದ ಅನಾಹುತ ಸಂಭವಿಸಬಹುದು. ಸಂಬಂಧಪಟ್ಟವರು ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ನಡೆಸಬೇಕಿದೆ.
– ಜೇಮ್ಸ್ ಕ್ರಿಸ್ಟೋಫರ್, ಸ್ಥಳೀಯ ನಿವಾಸಿ
– ಸತೀಶ್ಚಂದ್ರ ಶೆಟ್ಟಿ ಶಿರ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Kota: ಸಾಸ್ತಾನ ಟೋಲ್: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.