ಶೋಭಾ ಕರಂದ್ಲಾಜೆ ಪುನರಾಯ್ಕೆಯಲ್ಲಿ ದಾಖಲೆ
ಮತಗಳ ಅಂತರ 3,49,599
Team Udayavani, May 24, 2019, 6:10 AM IST
ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಿಂದಿನ ಚುನಾವಣೆಯಲ್ಲಿ ತಾನೇ ದಾಖಲಿಸಿದ ಅತ್ಯಧಿಕ ಅಂತರದ ದಾಖಲೆಯನ್ನು ಮುರಿದು ವಿಜಯಿ ಯಾದರು. ಅವರು 7,18,916 ಮತ ಗಳಿಸಿ ಸಮೀಪದ ಸ್ಪರ್ಧಿ ಜೆಡಿಎಸ್ – ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜರನ್ನು 3,49,599 ಮತಗಳ ಅಂತರದಿಂದ ಸೋಲಿಸಿ ಜಯಶಾಲಿಯಾದರು.
ಅಂಚೆ ಮತ ಪತ್ರವೂ ಸೇರಿದಂತೆ ಒಟ್ಟು 11,51,012 ಮತಗಳಲ್ಲಿ ಶೋಭಾ 7,18,916 ಮತ, ಪ್ರಮೋದ್ 3,69,317 ಮತ, ಬಿಎಸ್‌ಪಿಯ ಪಿ. ಪರಮೇಶ್ವರ್ 15,947, ಪಿ. ಅಮೃತ್ ಶೆಣೈ (ಪ) 7,981, ಶಿವಸೇನೆಯ ಗೌತಮ್ ಪ್ರಭು 7,431, ಅಬ್ದುಲ್ ರೆಹಮಾನ್ (ಪ) 6,017, ಕೆ.ಸಿ. ಪ್ರಕಾಶ್ (ಪ) 3,543, ಪ್ರೌಟಿಸ್ಟ್ ಸರ್ವ ಸಮಾಜದ ಎಂ.ಕೆ. ದಯಾನಂದ 3,539, ಎಂ. ಗಣೇಶ (ಪ) 3,526, ಉತ್ತಮ ಪ್ರಜಾಕೀಯ ಪಾರ್ಟಿಯ ಸುರೇಶ ಕುಂದರ್ 3,488, ಸಿಪಿಐ ಎಂಎಲ್ ರೆಡ್‌ಸ್ಟಾರ್‌ನ ವಿಜಯ ಕುಮಾರ್ 2,216, ಆರ್‌ಪಿಐನ ಶೇಖರ ಹಾವಂಜೆ 1,581 ಮತಗಳನ್ನು ಗಳಿಸಿದರು. 7,518 ಮಂದಿ ನೋಟಾ ಚಲಾಯಿಸಿದ್ದರು.
ಅಂಚೆ ಮತ ಪತ್ರ
ಒಟ್ಟು 1,881 ಅಂಚೆ ಮತದಾರರಲ್ಲಿ ಶೋಭಾರಿಗೆ 1,434, ಪ್ರಮೋದರಿಗೆ 385 ಮತಗಳು ದೊರೆ ತವು. ಅವುಗಳಲ್ಲಿ 8 ನೋಟಾ ಆಗಿತ್ತು. ಒಟ್ಟು 2,492 ಅಂಚೆ ಮತ ಪತ್ರದಲ್ಲಿ 611 ಮತಗಳು ತಿರಸ್ಕೃತವಾಗಿ 1,881 ಸಿಂಧುವಾಗಿದ್ದವು. ಮತಎಣಿಕೆ ಸಂಜೆ ವರೆಗೂ ನಡೆದು ಡಿಸಿ, ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಶೋಭಾ ಕರಂದ್ಲಾಜೆಯವರ ಆಯ್ಕೆಯನ್ನು ಘೋಷಿಸಿದರು. ಸೈಂಟ್ ಸಿಸಿಲಿ ಶಾಲೆ ಆವರಣದಲ್ಲಿ ಮತ ಎಣಿಕೆ ನಡೆಯಿತು.
ಪ್ರಮೋದ್ ನಾಲ್ಕು ಬಾರಿ ಮಾತ್ರ ಮುನ್ನಡೆ !
ಒಟ್ಟು 21 ಸುತ್ತಿನಲ್ಲಿ ನಡೆದ ಮತ ಎಣಿಕೆಯಲ್ಲಿ ಪ್ರಮೋದ್ ಒಟ್ಟಾರೆಯಾಗಿ ಒಂದು ಬಾರಿಯೂ ಮುನ್ನಡೆ ಸಾಧಿಸಲಿಲ್ಲ. ಆದರೆ 5 ಸುತ್ತುಗಳಲ್ಲಿ ಒಂದೊಂದು ಕ್ಷೇತ್ರದಲ್ಲಿ ಅಲ್ಪ ಮುನ್ನಡೆ ದಾಖಲಿಸಿದ್ದರು.
2ನೇ ಸುತ್ತಿನಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮೋದ್ 4,174, ಶೋಭಾ 3,966 ಮತ ಗಳಿಸಿದ್ದರು. 6ನೇ ಸುತ್ತಿನಲ್ಲಿ ಉಡುಪಿಯಲ್ಲಿ ಪ್ರಮೋದ್ 4,386, ಶೋಭಾ 4,134 ಮತ, 9ನೇ ಸುತ್ತಿನಲ್ಲಿ ಚಿಕ್ಕಮಗಳೂರಿನಲ್ಲಿ ಪ್ರಮೋದ್ 4,068, ಶೋಭಾ 3,197, 11ನೇ ಸುತ್ತಿನಲ್ಲಿ ಕಾಪುವಿನಲ್ಲಿ ಪ್ರಮೋದ್ 4,891, ಶೋಭಾ 4,369, 17ನೇ ಸುತ್ತಿನಲ್ಲಿ ತರಿಕೆರೆಯಲ್ಲಿ ಪ್ರಮೋದ್ 1,439, ಶೋಭಾ 637 ಮತಗಳನ್ನು ಗಳಿಸಿದ್ದಾರೆ. ಉಳಿದಂತೆ ಎಲ್ಲ ಸುತ್ತಿನಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಶೋಭಾ ನಾಗಾಲೋಟದಲ್ಲಿ ಸಾಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.