ಒಲವಿನ ಊಟಕ್ಕೆ ಅಕ್ಕಂದಿರು ಸಿದ್ಧ!
ಉಡುಪಿಯಲ್ಲಿ 'ಅಕ್ಕ ಕೆಫೆ' ಪ್ರಾರಂಭಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
Team Udayavani, Dec 26, 2024, 2:33 PM IST
ಸಾಂದರ್ಭಿಕ ಚಿತ್ರ
ಮಣಿಪಾಲ: ಬಡವರಿಗೆ ಕಡಿಮೆ ವೆಚ್ಚದಲ್ಲಿ ಆಹಾರ ಸಿಗಲೆಂದು ಆರಂಭಿಸಿದ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಸರಕಾರಿ ಕಚೇರಿಗಳಿಗೆ ಬರುವವರ ಅನುಕೂಲ ಮತ್ತು ಸಬಲೀಕರಣದ ಉದ್ದೇಶದಿಂದ ಆರಂಭಿಸಿರುವ ‘ಅಕ್ಕ ಕೆಫೆ’ ಉಡುಪಿಗೂ ಕಾಲಿಡುವ ಸಾಧ್ಯತೆ ಇದೆ. ಮಹಿಳೆಯರೇ ನಿರ್ವಹಿಸುವ ಅಕ್ಕ ಕೆಫೆ ಆರಂಭಕ್ಕೆ ಇಲ್ಲಿನ ಸ್ತ್ರೀ ಶಕ್ತಿ ಸಂಘಗಳಿಂದ ಬೇಡಿಕೆ ಬಂದಿದೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಮತ್ತು ಉಡುಪಿ ತಾಲೂಕು ಕಚೇರಿಯಲ್ಲಿ ಅಕ್ಕ ಕೆಫೆ ಆರಂಭಕ್ಕೆ ಜಿಲ್ಲಾ ಪಂಚಾಯಿತಿಯಿಂದ ಒಟ್ಟು 30 ಲಕ್ಷ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಮಂಜೂರಾತಿ ಸಿಕ್ಕಿದ ಬಳಿಕ ಅದನ್ನು ಜಿಲ್ಲೆಯ ಇತರ ಭಾಗಗಳಿಗೂ ವಿಸ್ತರಿಸುವ ಚಿಂತನೆ ಇದೆ.
2024-25ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಹಿಳಾ ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರ ಮೂಲಕ ರಾಜ್ಯದ 50 ಕಡೆ ಅಕ್ಕ ಕೆಫೆ ಆರಂಭಿಸಲು 7.50 ಕೋ.ರೂ. ಕಾಯ್ದಿರಿಸಿದ್ದರು. ಬೇಡಿಕೆಗೆ ಅನುಸಾರ ಹಂತಹಂತವಾಗಿ 25 ಕೋ.ರೂ.ಗೆ ಹೆಚ್ಚಿಸಲಾಗಿದೆ.
ಸಂಜೀವಿನಿಯಲ್ಲಿ ನೋಂದಾಯಿಸಿಕೊಂಡ ಮಹಿಳಾ ಸ್ವ. ಸಹಾಯ ಸಂಘಗಳ ಸದಸ್ಯರ ಮೂಲಕ ಅನುಷ್ಠಾನಗೊಳಿಸುವುದು ಸರಕಾರದ ಉದ್ದೇಶ. ಜಿಲ್ಲೆ, ತಾ| ಕಚೇರಿ, ಆಸ್ಪತ್ರೆ, ಪ್ರವಾಸೋದ್ಯಮ ತಾಣ ಸೇರಿದಂತೆ ಸರಕಾರಿ ಕಚೇರಿಗಳ ಆವರಣದಲ್ಲಿ ಕೆಫೆ ಆರಂಭಿಸುವುದಾಗಿದೆ. ಕರ್ನಾಟಕ ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಎನ್‌ಎಲ್‌ಎಲ್ ಜತೆಗೂಡಿ ಅಕ್ಕ ಕೆಫೆ ತೆರೆಯಲಿದೆ.
ಉಡುಪಿಯಲ್ಲಿ ಮಹಿಳೆಯರ ಆಸಕ್ತಿ
ಉಡುಪಿಯಲ್ಲಿ ಅಕ್ಕ ಕೆಫೆ ತೆರೆಯುವ ಬಗ್ಗೆ ಸ್ತ್ರೀಶಕ್ತಿ ಸಂಘಗಳಿಂದ ಬೇಡಿಕೆ ಬಂದಿದೆ. ಆರಂಭದಲ್ಲಿ ಎರಡು ಕಡೆ ಸ್ಥಳ ಗುರುತಿಸಿ, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ನಗರ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ 2 ಕಡೆ ತೆರೆದು ಬಳಿಕ ಗ್ರಾಮೀಣಕ್ಕೆ ವಿಸ್ತರಣೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಉಡುಪಿ ಜಿಪಂ ಸಿಇಒ ಪ್ರತೀಕ್ ಬಾಯಲ್ ಹೇಳಿದ್ದಾರೆ.
ಹಲವು ಸ್ತ್ರೀಶಕ್ತಿ ಮಹಿಳೆಯರು ಅಕ್ಕಕೆಫೆ ತೆರೆಯಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಅಕ್ಕಕೆಫೆ ತೆರದಲ್ಲಿ ಕಚೇರಿ ಕೆಲಸಕ್ಕೆ ಬರುವವರಿಗೆ, ಸಿಬಂದಿಗೆ ಕಡಿಮೆ ದರದಲ್ಲಿ ಊಟ, ಉಪಹಾರ ಸಿಗಲಿದೆ.
ಸದ್ಯ ಬೆಂಗಳೂರಲ್ಲಿ ಮಾತ್ರ ಇದೆ
ಅಕ್ಕ ಕೆಫೆ ಪರಿಕಲ್ಪನೆ ಸದ್ಯ ಬೆಂಗಳೂರಿನಲ್ಲಿ ಮಾತ್ರ ಅನುಷ್ಠಾನಗೊಂಡಿದೆ. ದುಡಿಯುವ ಮಹಿಳೆಯರ ಕೈಗಳಿಗೆ ಕೆಲಸ ನೀಡಿ, ಕಡಿಮೆ ದರದಲ್ಲಿ ಶುಚಿ-ರುಚಿಯಾದ ಊಟ-ಉಪಹಾರ ನೀಡುವ ಯೋಜನೆಯನ್ನು ರಾಜ್ಯದ ಇತರ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತಿದ್ದು, ಉಡುಪಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ವಿಶೇಷತೆ ಏನು?
– ಸರಕಾರಿ ಕಚೇರಿಗಳ ಆವರಣದಲ್ಲಿ ಮಹಿಳೆಯರ ನೇತೃತ್ವದಲ್ಲಿ ತೆರೆಯುವ ಕ್ಯಾಂಟೀನ್ ಇದು.
– ಬೃಹತ್ ಕಂಪೆನಿಗಳ ಮಳಿಗೆಯಂತೆ ಅಕ್ಕ ಕೆಫೆಗೂ ಏಕ ರೂಪದ ಲೋಗೋ, ವಿನ್ಯಾಸ, ಬಣ್ಣ ನಿಗದಿಯಾಗಿದೆ.
– ಜೀವನೋಪಾಯ ಇಲಾಖೆ ನಗರ ಭಾಗದಲ್ಲಿ 8ರಿಂದ 15 ಲಕ್ಷ ರೂ. ಹಾಗೂ ಗ್ರಾಮೀಣ ಭಾಗದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಅಕ್ಕ ಕೆಫೆ ನಿರ್ಮಿಸಿ ಹಸ್ತಾಂತರ ಮಾಡುತ್ತದೆ.
– ಕೆಫೆಯು ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ಕಾರ್ಯನಿರ್ವಹಿಸಲಿದೆ.
– ಉಪಾಹಾರಗಳ ಬೆಲೆಯು 25 ರೂ.ನಿಂದ 75ರ ವರೆಗೆ ಇರಬಹುದು. ಊಟಕ್ಕೆ 40 ರೂ. ಇರಲಿದೆ.
– ಸರಕಾರಿ ಕಚೇರಿ ಸಿಬಂದಿ, ಅಲ್ಲಿಗೆ ಬರುವವರಿಗೆ ಇದು ಅನುಕೂಲ ಮಾಡಿಕೊಡಲಿದೆ.
– ಸರಕಾರಿ ಕಾರ್ಯಕ್ರಮಗಳಿಗೆ ಬೇಕಾದ ಊಟ, ಉಪಾಹಾರಗಳನ್ನು ಕೂಡ ಇಲ್ಲಿಂದಲೇ ಪೂರೈಸಬಹುದು.
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.