![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 23, 2020, 5:49 AM IST
ಕಾರ್ಕಳ: ಕಾರ್ಕಳ ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ನಿಧಾನಗತಿಯಲ್ಲಿ ಮತ್ತು ಅವೈಜ್ಞಾನಿಕ ರೀತಿಯಲ್ಲಿ ಸಾಗುತ್ತಿದೆ. ಇದರಿಂದ ನಗರ ನಿವಾಸಿಗಳ ದೈನಂದಿನ ವ್ಯವಹಾರಕ್ಕೆ ತೊಂದರೆಯಾಗುತ್ತಿದ್ದು, ಸೂಕ್ತ ಕ್ರಮ ಕೈಗೊಂಡು ಕಾಮಗಾರಿಗೆ ವೇಗ ನೀಡುವಂತೆ ನಗರ ಕಾಂಗ್ರೆಸ್ ನಿಯೋಗವು ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಅವರನ್ನು ಆಗ್ರಹಿಸಿತು.
ಮೇ 22ರಂದು ಪುರಸಭಾ ಕಚೇರಿಗೆ ತೆರಳಿ ಮನವಿ ನೀಡಿದ ನಿಯೋಗ, ಕಾಮಗಾರಿ ಮೇಲುಸ್ತುವಾರಿಗೆ ಮತ್ತು ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಪುರಸಭೆಯಿಂದ ಓರ್ವ ಮೇಲ್ವಿಚಾರಕರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.
ತೆರಿಗೆ ಏರಿಕೆಗೆ ವಿರೋಧ
ಕಾರ್ಕಳ ಪುರಸಭೆಯು ಪುರಸಭಾ ಸದಸ್ಯರಿಗಾಗಲಿ, ಸಾರ್ವಜನಿಕರಿಗಾಗಲೀ ಯಾವುದೇ ಪೂರ್ವ ಮಾಹಿತಿ ನೀಡದೇ ಏಕಾಏಕಿ ಮನೆ ತೆರಿಗೆ, ಕಟ್ಟಡ ತೆರಿಗೆ ಹಾಗೂ ಇತರ ತೆರಿಗೆಗಳನ್ನು ನಿಯಮಬಾಹಿರವಾಗಿ ದುಪ್ಪಟ್ಟುಗೊಳಿಸಿ, ವಸೂಲಾತಿ ಮಾಡುತ್ತಿದೆ. ಇದು ಖಂಡನೀಯವೆಂದು ನಿಯೋಗ ಇದೇ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿತು.
ನಗರ ಕಾಂಗ್ರೆಸ್ ಅಧ್ಯಕ್ಷ ಮಧುರಾಜ್ ಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ಸುಭಿತ್ ಎನ್.ಆರ್., ಹಾಲಿ ಸದಸ್ಯರಾದ ಶುಭದ ರಾವ್, ಅಶ³ಕ್ ಅಹಮ್ಮದ್, ಸೋಮನಾಥ, ನಳಿನ್ ಆಚಾರ್ಯ, ಪ್ರಭಾ, ಹರೀಶ್ ದೇವಾಡಿಗ, ಸೀತಾರಾಮ ದೇವಾಡಿಗ, ಮಾಜಿ ಸದಸ್ಯ ವಿವೇಕಾನಂದ ಶೆಣೈ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.