ಮೋಂತಿ ಫೆಸ್ಟ್: ವೆಲಂಕಣಿ ಕ್ಷೇತ್ರಕ್ಕೆ ವಿಶೇಷ ರೈಲು
Team Udayavani, Aug 24, 2018, 2:25 AM IST
ಉಡುಪಿ: ತಮಿಳುನಾಡಿನ ವೆಲಂಕಣಿಯಲ್ಲಿ ಸೆ.8ರಂದು ಮೋಂತಿ ಫೆಸ್ಟ್ನ ಪ್ರಯುಕ್ತ ಜರಗುವ ವಿಶೇಷ ಉತ್ಸವದ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಗೋವಾದ ವಾಸ್ಕೋಡಗಾಮದಿಂದ ಉಡುಪಿ, ಮಂಗಳೂರು ಮೂಲಕ ವೆಲಂಕಣಿಗೆ ವಿಶೇಷ ರೈಲು ಓಡಿಸಲಿದೆ. ವಾಸ್ಕೋಡಗಾಮದಿಂದ ವಿಶೇಷ ರೈಲು ಆ.27, ಸೆ.3 ಮತ್ತು ಸೆ.9ರಂದು ಬೆಳಗ್ಗೆ 11.20ಕ್ಕೆ ಹೊರಟು ಸಂಜೆ 5.10ಕ್ಕೆ ಉಡುಪಿಗೆ ಆಗಮಿಸಿ ಮರುದಿನ ಮಧ್ಯಾಹ್ನ 1 ಗಂಟೆಗೆ ವೆಲಂಕಣಿ ತಲುಪಲಿದೆ.
ಆ.29, ಸೆ. 3, 8 ಮತ್ತು 9 ರಂದು ರಾತ್ರಿ 11.45ಕ್ಕೆ ವೆಲಂಕಣಿಯಿಂದ ಹೊರಟು ಮರುದಿನ ಸಂಜೆ 4.55ಕ್ಕೆ ಉಡುಪಿ ತಲುಪಿ ಅನಂತರ ವಾಸ್ಕೋಡಗಾಮಕ್ಕೆ ತೆರಳಲಿದೆ. ಈ ರೈಲು ತಂಜಾವೂರು ಮೂಲಕ ಹಾದು ಹೋಗುವುದರಿಂದ ಹಿಂದೂಬಾಂಧವರು ತಂಜಾವೂರಿನ ಪ್ರಸಿದ್ಧ ಶ್ರೀ ಬೃಹದೀಶ್ವರ ದೇವಸ್ಥಾನಕ್ಕೆ ಹೋಗುವುದಕ್ಕೂ ಅನುಕೂಲವಾಗಲಿದೆ. ಯಾತ್ರಿಕರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು ಎಂದು ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್ ಡಾಯಸ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.