ವಿಶೇಷ ವರದಿ: ಉಡುಪಿ: ಅಂಚೆ ಬ್ಯಾಂಕಿಂಗ್‌ನಲ್ಲಿ 46,374 ಖಾತೆ
ಉಡುಪಿ ಅಂಚೆ ವಿಭಾಗೀಯ ಕಚೇರಿ
Team Udayavani, Sep 29, 2020, 5:30 AM IST
ಸಾಂದರ್ಭಿಕ ಚಿತ್ರ
ಉಡುಪಿ: ಗ್ರಾಮೀಣ ಭಾಗದ ಜನರಿಗಾಗಿ ಭಾರತೀಯ ಅಂಚೆ ಇಲಾಖೆ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಯೋಜನೆಯಡಿ ಉಡುಪಿ ಅಂಚೆ ವಿಭಾಗೀಯ ಕಚೇರಿಯಲ್ಲಿ 46,374 ಖಾತೆಗಳನ್ನು ತೆರೆಯಲಾಗಿದೆ. ಈ ಬಾರಿ ಖಾತೆಗಳ ಸಂಖ್ಯೆ ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಿದೆ.
ಏನಿದು ಐಪಿಪಿಬಿ?
ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಿರುವ ಜನತೆಗೆ ಪೂರ್ಣ ಪ್ರಮಾಣದ ಬ್ಯಾಂಕಿಂಗ್ ಸೇವೆಯ ಸೌಲಭ್ಯವನ್ನು ಒದಗಿಸಲು ಇರುವ ಅಡೆತಡೆಗಳನ್ನು ನಿವಾರಿಸುವಲ್ಲಿ ಐಪಿಪಿಬಿ (ಬ್ಯಾಂಕಿಂಗ್ ಸೇವೆ ಮನೆ ಬಾಗಿಲಿಗೆ) ಮುಖ್ಯಪಾತ್ರವಹಿಸಿದೆ. ಎನ್‌ಪಿಸಿಐ (ನ್ಯಾಶನಲ್ ಪೇಮೆಂಟ್ ಕಾರ್ಪೋರೇಶನ್ ಇಂಡಿಯಾ) ಅಡಿಯಲ್ಲಿ 2018ರ ಸೆಪ್ಟಂಬರ್‌ನಲ್ಲಿ ಬ್ಯಾಂಕಿಂಗ್ ಮನೆ ಬಾಗಿಲಿಗೆ ಎನ್ನುವ ಯೋಜನೆ ಜಾರಿಗೊಳಿಸಲಾಗಿತ್ತು.
ಅನುಕೂಲವೇನು?
ನೇರ ನಗದು ಸೌಲಭ್ಯಗಳಾದ ಗ್ಯಾಸ್ ಸಬ್ಸಿಡಿ, ಸಾಮಾಜಿಕ ಭದ್ರತಾ ಪಿಂಚಣಿ, ವಿದ್ಯಾರ್ಥಿ ವೇತನ ಮತ್ತು ಇತರೆ ಸಬ್ಸಿಡಿಗಳನ್ನು ಈ ಖಾತೆಯ ಮೂಲಕ ಪಡೆಯಬಹುದು. ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಗೃಹಿಣಿಯರು, ನಗರಕ್ಕೆ ವಲಸೆ ಬಂದಿರುವವರು, ರೈತರು, ಕಾರ್ಮಿಕರು, ರಾಜ್ಯ ಸರಕಾರದ ನೇರ ಫಲಾನುಭವಿಗಳು, ವ್ಯಾಪಾರಿಗಳು, ಸಣ್ಣ ಉದ್ಯಮಿಗಳಿಗೆ ಐಪಿಪಿಬಿ ಖಾತೆಯ ಮೂಲಕ ಎಲ್ಲಿ ಬೇಕಾದರೂ ಹಣ ಪಡೆಯಬಹುದಾಗಿದೆ.
ಖಾತೆ ತೆರೆಯುವುದು ಹೇಗೆ?
ಒಂದೇ ನಿಮಿಷದಲ್ಲಿ ಶೂನ್ಯ ಮೊತ್ತದಲ್ಲಿ ಮನೆ ಬಾಗಿಲಲ್ಲೇ ಡಿಜಿಟಲ್ ಅಂಚೆ ಖಾತೆಯನ್ನು ತೆರೆಯ ಬಹುದಾಗಿದೆ. ಆಧಾರ ಕಾರ್ಡ್ ಹೊಂದಿದ ಪೋಸ್ಟ್ ಮಾಸ್ಟರ್ ಅಥವಾ ಅಂಚೆ ಕಚೇರಿಗೆ ಭೇಟಿಯಾಗಿ ಉಳಿತಾಯ ಖಾತೆ ತೆರೆಯಬಹುದು. ಇದು ಸಂಪೂರ್ಣ ಕಾಗದ ರಹಿತವಾಗಿದ್ದು, ಯಾವುದೇ ಸಹಿ ಅಥವಾ ದಾಖಲೆಗಳ ಪ್ರತಿ ನೀಡಬೇಕಾಗಿಲ್ಲ. ಆಧಾರ್ ಸಂಖ್ಯೆ, ಮೊಬೈಲ್ ಫೋನ್ ನಂಬರ್ ನೀಡಿದರೆ ಒಂದೇ ನಿಮಿಷದಲ್ಲಿ ಖಾತೆ ತೆರೆಯಲಿದೆ. ಐಪಿಪಿಬಿ ಮೊಬೈಲ್ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ವ್ಯವಹಾರ ಮಾಡಬಹುದು.
ಆನ್‌ಲೈನ್ ಸೇವೆ
ಅಂಚೆ ಇಲಾಖೆಯ ಉಳಿತಾಯ ಖಾತೆಯೊಂದಿಗೆ ಜೋಡಿಸಿಕೊಂಡು, ಅಂಚೆ ಇಲಾಖೆ ಆರ್‌ಡಿ, ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಮನೆಯಿಂದಲೇ ಹಣ ಜಮೆ ಮಾಡಬಹುದು. ಮನೆಯಿಂದಲೇ ವಿದ್ಯುತ್ ಬಿಲ್ ಪಾವತಿ, ಡಿಟಿಎಚ್ ಮತ್ತು ಮೊಬೈಲ್ ರೀಚಾರ್ಜ್ ಮಾಡಲು ಅವಕಾಶವಿದೆ. ಬಸ್, ರೈಲ್ವೇ, ವಿಮಾನ ಟಿಕೆಟ್ ಬುಕಿಂಗ್ ಸೇವೆಗಳು ಜತೆಗೆ ಇತರೆ ಆರ್ಥಿಕ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಸಾಲ, ಹೂಡಿಕೆ, ವಿಮಾ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತದೆ.
ಇಂದಿನಿಂದ ಅಭಿಯಾನ
ಸಾರ್ವಜನಿಕರು ತಮ್ಮ ಸಮೀಪದ ಅಂಚೆ ಕಚೇರಿಗಳಿಗೆ ಭೇಟಿ ನೀಡಿ ಅಥವಾ ಅಂಚೆಯಣ್ಣನ ಮೂಲಕ ಈ ಖಾತೆಗಳನ್ನು ತೆರೆದು ಡಿಜಿಟಲ್ ಬ್ಯಾಂಕ್‌ನ ಸೌಲಭ್ಯಗಳನ್ನು ಅತ್ಯಂತ ಸರಳವಾಗಿ ಮನೆಯಂಗಳದಲ್ಲೇ ಪಡೆದುಕೊಳ್ಳುವ ಸಲುವಾಗಿ ಉಡುಪಿ ವಿಭಾಗೀಯ ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಸೆ. 29ರಿಂದ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿ ಖಾತೆಗಳನ್ನು ತೆರೆಯುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಬೆರಳಚ್ಚು ನೀಡಿ!
ನಗರ ಪ್ರದೇಶದವರು ಅಂಚೆ ಎಟಿಎಂ, ಡಿಜಿಟಲ್ ಆ್ಯಪ್ ಮೂಲಕ ಹಣ ಪಡೆಯ ಬಹುದು. ಆದರೆ ಗ್ರಾಮೀಣ ಪ್ರದೇಶದ ಕೆಲವು ಕಡೆಗಳಲ್ಲಿ ಇಂತಹ ಸೌಲಭ್ಯಗಳಿಲ್ಲ. ಹೀಗಾಗಿ ಮನೆಗೆ ಪೋಸ್ಟ್ ಮಾಸ್ಟರ್ ಬಂದಾಗ ಬೆರಳಚ್ಚು ನೀಡಿ, ಹಣ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ದಿನನಿತ್ಯ ಇದಕ್ಕಾಗಿ ಪೋಸ್ಟ್ ಮಾಸ್ಟರ್‌ಗೆ ದಿನಕ್ಕೆ 15,000 ರೂ. ಇಟ್ಟುಕೊಳ್ಳುವ ಅವಕಾಶ ನೀಡಲಾಗಿದೆ.
ಸೆ. 29ರಂದು ಪ್ರಾರಂಭ
ಉಡುಪಿ ವಿಭಾಗೀಯ ಕಚೇರಿಯಲ್ಲಿ ಬ್ಯಾಂಕಿಂಗ್ ಮನೆ ಬಾಗಿಲಿಗೆ ಎನ್ನುವ ಅಭಿಯಾನ ಸೆ. 29ರಂದು ಪ್ರಾರಂಭವಾಗಲಿದೆ. ಈ ದಿನ ಪೋಸ್ಟ್
ಮ್ಯಾನ್ ಮನೆ ಬಾಗಿಲಿಗೆ ಬಂದು ಡಿಜಿಟಲ್ ಖಾತೆ ತೆರೆಯಲು ಸಹಕರಿಸುವರು. ಬಳಿಕ ಅಂಚೆ ಕಚೇರಿಗೆ ಬಂದು ಖಾತೆ ತೆರೆಯಲು ಅವಕಾಶವಿದೆ. -ನವೀನ್ ಚಂದರ್, ಅಂಚೆ ಅಧೀಕ್ಷಕ, ವಿಭಾಗೀಯ ಕಚೇರಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.