ಸ್ಪೀಡ್ ಬೋಟ್ ಸೇವೆ ಆರಂಭ
ಮಲ್ಪೆ ಬೀಚ್‌ನಿಂದ ಸೈಂಟ್‌ಮೇರಿ ದ್ವೀಪ ಯಾನ
Team Udayavani, Sep 16, 2019, 5:13 AM IST
ಮಲ್ಪೆ: ಕರಾವಳಿಯ ಅತ್ಯಂತ ಆಕರ್ಷಣೀಯ ಪ್ರವಾಸಿ ತಾಣ ಮಲ್ಪೆ ಸೈಂಟ್‌ಮೇರಿ ದ್ವೀಪಕ್ಕೆ ಸ್ಪೀಡ್‌ಬೋಟ್ ಸೇವೆ ಸೆ. 15ರಿಂದ ಆರಂಭಗೊಂಡಿದೆ. ಇದು ಮಲ್ಪೆ ಬೀಚ್‌ನಿಂದ ಹೊರಡಲಿದ್ದು ಕೇವಲ 15ನಿಮಿಷಗಳಲ್ಲಿ ತಲುಪಲು ಸಾಧ್ಯವಾಗಲಿದೆ.
ಜೈ ಹನುಮಾನ್, ಜ್ಞಾನಜ್ಯೋತಿ, ಸೀಬರ್ಡ್ ಮತ್ತು ಇಂಡಿಯನ್ ಒಟ್ಟು 4 ಸ್ಪೀಡ್ ಬೋಟ್‌ಗಳು ಸೇವೆಗೆ ಇದೆ. ಒಂದು ಬೋಟಿನಲ್ಲಿ ಚಾಲಕರು,ನಿರ್ವಾಹಕರು ಸೇರಿದಂತೆ 14 ಮಂದಿಗೆ ಮಾತ್ರ ತೆರಳಲು ಅವಕಾಶ ವಿದ್ದು, ಯಾನಕ್ಕಾಗಿ ಕಾಯುವ ಪ್ರಮೇಯ ಇರುವುದಿಲ್ಲ. ಮಾತ್ರವಲ್ಲದೆ ದ್ವೀಪದಲ್ಲೂ ಹೆಚ್ಚು ಹೊತ್ತು ಸುತ್ತಾಡಿ ಕಾಲ ಕಳೆಯುವ ಅವಕಾಶ ನೀಡ ಲಾಗುತ್ತದೆ.
ಬೋಟ್‌ಗಳು ಅತ್ಯಾಧುನಿಕ ಸೌಕರ್ಯ ಹೊಂದಿದ್ದು, ಪ್ರತಿ ಬೋಟಿನಲ್ಲಿ ಇಬ್ಬರು ನುರಿತ ಈಜುಗಾರರು, ಲೈಫ್‌ಬಾಯ್, ಲೈಫ್ ಜಾಕೆಟ್ ಸಹಿತ ಸುರಕ್ಷಿತ ಸಾಧನಗಳು ಪ್ರಯಾಣಿಕರಿಗೆ ಲಭಿಸಲಿದೆ.
ಕಳೆದ 11 ವರ್ಷಗಳಿಂದ ಬೋಟಿ ನಲ್ಲಿ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾ, ಉತ್ತಮ ಸೇವೆ ಕಾಪಾಡಿ ಕೊಂಡು ಬಂದಿದ್ದು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಂದ ಸಂಸ್ಥೆಗೆ ಪ್ರಶಂಸಾ ಪತ್ರ ದೊರಕಿದೆ. ಸ್ಪೀಡ್‌ಬೋಟ್‌ನ ಟಿಕೆಟ್ ಕೌಂಟರ್‌ನ್ನು ಬೀಚ್ ಗಾಂಧಿ ಪ್ರತಿಮೆಯ ಬಳಿ ತೆರೆಯಲಾಗಿದೆ ಎಂದು ಟೂರಿಸ್ಟ್ ಬೋಟಿನ ಪ್ರಮುಖ ನಿರ್ವಾಹಕ ಸನತ್ ಸಾಲ್ಯಾನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.