ಪರ್ಯಾಯ: ಹೊರೆಕಾಣಿಕೆ ಸಮರ್ಪಣೆ
Team Udayavani, Jan 15, 2022, 5:02 PM IST
ಗಂಗೊಳ್ಳಿ: ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ. ಟ್ರಸ್ಟ್ ಬೈಂದೂರು ತಾ| ಇದರ ವತಿಯಿಂದ ಉಡುಪಿ ಶ್ರೀ ಕೃಷ್ಣಾಪುರ ಮಠ ಪರ್ಯಾಯೋತ್ಸವದ ಅಂಗವಾಗಿ ಹಸುರುವಾಣಿ ಸಮರ್ಪಣೆ ನಡೆಯಿತು.
ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್‌ನ ಬೈಂದೂರು ತಾ|ನ ವಿವಿಧ ವಲಯಗಳ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಸಂಗ್ರಹಿಸಲಾಗಿದ್ದ ಹೊರೆಕಾಣಿಕೆಯನ್ನು ತ್ರಾಸಿಯಲ್ಲಿರುವ ಯೋಜನಾ ಕಚೇರಿ ಬಳಿಯಿಂದ ಸುಮಾರು 20ಕ್ಕೂ ಅಧಿಕ ವಾಹನಗಳಲ್ಲಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಸಮರ್ಪಿಸಲಾಯಿತು. ಬೈಂದೂರು ತಾ| ಯೋಜನಾಧಿಕಾರಿ ಶಶಿರೇಖಾ, ಯೋಜನೆಯ ಕೇಂದ್ರ ಸಮಿತಿ ಒಕ್ಕೂಟದ ಅಧ್ಯಕ್ಷ ರಘುರಾಮ ಪೂಜಾರಿ, ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ಶುಭಾಶಂಸನೆಗೈದರು. ಬೈಂದೂರು ತಾ| ಭಜನ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ತ್ರಾಸಿ ವಲಯ ಅಧ್ಯಕ್ಷ ನಾಗರಾಜ ಖಾರ್ವಿ, ಜಿ.ಪಂ. ಮಾಜಿ ಸದಸ್ಯೆ ಶೋಭಾ ಜಿ. ಪುತ್ರನ್, ವಿವಿಧ ವಲಯಗಳ ವಲಯಾಧ್ಯಕ್ಷರು, ಜನಜಾಗೃತಿ ವೇದಿಕೆ ಸದಸ್ಯರು, ಸೇವಾ ಪ್ರತಿನಿಧಿಗಳು, ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.