ಆಧ್ಯಾತ್ಮಿಕ ಸಾಧನೆ ಶಾಶ್ವತ: ಸುತ್ತೂರು ಶ್ರೀ
Team Udayavani, Dec 14, 2021, 5:55 AM IST
ಉಡುಪಿ: ಮನುಷ್ಯನಿಗೆ ಜೀವನದಲ್ಲಿ ಭೌತಿಕ ಸುಖ-ಸಂತೋಷ ಗಳು ತಾತ್ಕಾಲಿಕವಾಗಿದ್ದು, ಅಧ್ಯಾತ್ಮಿಕ
ಸಾಧನೆಯೇ ಶಾಶ್ವತ. ಧರ್ಮದ ಪ್ರಜ್ಞೆಯೊಂದಿಗೆ ಸಾಮಾಜಿಕ ಸಾಮರಸ್ಯ ಕಾಪಾಡಲು ಆದರ್ಶ ವಾದ ಶಿಕ್ಷಣ ಸಂಸ್ಥೆಗಳೊಂದಿಗೆ ದೇಶಪ್ರೇಮವನ್ನು ಉಡುಪಿಯ ಅಷ್ಟಮಠಗಳೂ ಕೊಡುಗೆಯಾಗಿ ನೀಡಿವೆ ಎಂದು ಮೈಸೂರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಅದಮಾರು ಮಠದ ವತಿಯಿಂದ ನಡೆಯುತ್ತಿರುವ “ವಿಶ್ವಾರ್ಪಣಮ್’ ಕಾರ್ಯಕ್ರಮದಲ್ಲಿ ಸೋಮವಾರ ಭಾಗ ವಹಿಸಿ ಅವರು ಮಾತನಾಡಿದರು.
ಸ್ವ ಧರ್ಮೀಯರಿಂದಲೇ ಆಪತ್ತು
ಸದ್ವಿಚಾರಗಳು ವಿಶ್ವದೆಲ್ಲೆಡೆಯಿಂದ ಬರಲಿ ಎಂಬ ಹೃದಯ ಶ್ರೀಮಂತಿಕೆ ಇರುವ ಧರ್ಮ ಹಿಂದೂ. ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಪ್ರಭಾವ ಭಾರತೀಯ ಸಂಸ್ಕೃತಿ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಯುವಜನತೆ ಯಲ್ಲಿ ಧರ್ಮಪ್ರಜ್ಞೆ ಹೇಗೆ ಬೆಳೆಯು ತ್ತಿದೆ ಎಂಬುದನ್ನು ಹಿರಿಯರು ಗಮನಿಸಬೇಕು. ಸ್ವಧರ್ಮೇ ನಿಧನಂ ಶ್ರೇಯಃ ಎಂಬ ಮಹತ್ವದ ಸಂದೇಶವನ್ನು ವಿಶ್ವಕ್ಕೆ ಸಾರಿದ ದೇಶ ಭಾರತ. ಪ್ರತಿಯೊಬ್ಬರೂ ಅವರವರ ಧರ್ಮ ಪಾಲಿಸಿಕೊಂಡು ಚೆನ್ನಾಗಿ ಬದುಕಬೇಕು ಎಂಬುದು ಇದರ ಉದ್ದೇಶ. ಆದರೆ ಇಂದು ಹಿಂದೂ ಧರ್ಮಕ್ಕೆ ಹಿಂದೂಗಳಿಂ ದಲೇ ತೊಂದರೆ ಎದುರಾಗಿದೆ. ಧರ್ಮದಪರ ಧ್ವನಿ ಎತ್ತುವವರನ್ನೇ ಸದೆಬಡಿಯುವ ಕಾರ್ಯವಾಗುತ್ತಿದೆ ಎಂದರು.
ಸಮ್ಮಾನ
ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಕೇರಳದ ಜ್ಯೋತಿಷ ಶಾಸ್ತ್ರಜ್ಞರಾದ ಬೇಳ ಪದ್ಮನಾಭ ಶರ್ಮ, ಶ್ರೀಮಠದ ನಾದಸ್ವರ ವಾದಕರಾದ ಪ್ರಕಾಶ್ ಶೇರಿಗಾರ್, ತವಿಲ್ ವಾದಕರಾದ ಸತೀಶ ಶೇರಿಗಾರ್, ರಿûಾ ಚಾಲಕರಾದ ಬಿ. ಶ್ರೀನಿವಾಸ ರಾವ್, ಅಂಚೆ ಸಹಾಯಕರಾದ ಗೌರಿ ಶೇಟ್ ಅವರನ್ನು ಸಮ್ಮಾನಿಸಿದರು.
ಮಠದ ವ್ಯವಸ್ಥಾಪಕ ಗೋವಿಂದ ರಾಜ್ ಸ್ವಾಗತಿಸಿದರು. ಪೂರ್ಣಪ್ರಜ್ಞ ಕಾಲೇಜಿನ ಉಪನ್ಯಾಸಕ ರಮೇಶ್ ನಿರ್ವಹಿಸಿದರು.
ಇದನ್ನೂ ಓದಿ:ವೈದ್ಯಕೀಯ ಸೀಟು ಶರಣಾತಿಗೆ ಬ್ರೇಕ್: ಡಾ| ಸುಧಾಕರ್
ಹಿಂದೂಗಳಿಗಿದು ಎಚ್ಚರ ವಹಿಸುವ ಸಮಯ
ಸನಾತನ ಎಂದರೆ ಬಂಡೆಕಲ್ಲಿನಂತೆ. ಭಾರತದಲ್ಲಿ ಶೇ. 80 ಹಿಂದೂಗಳಿದ್ದೇವೆ ಎನ್ನುತ್ತೇವೆ. ಇತರ ಮತಗಳು ಇಡೀ ವಿಶ್ವದಲ್ಲಿ ಏನು ಮಾಡಿವೆ ಎಂಬುದು ನಮಗೆ ಪಾಠ. ಇದರಿಂದ ಇಡೀ ವಿಶ್ವದ ಮೂಲ ಸಂಸ್ಕೃತಿ ನಾಶವಾಗಿದೆ. ಅಮೆರಿಕದಿಂದ ಜಪಾನ್‌ವರೆಗೆ ನಾಶವಾಗಿದೆ. ಭಾರತದಲ್ಲಿ ಆಗಿಲ್ಲ. ಕಾರಣ ಸನಾತನ ಸಂಸ್ಕೃತಿ ಬಂಡೆಯಂತೆ ಗಟ್ಟಿ ಇದೆ. ಆದರೆ ಈಗ ಬಂಡೆಯ ಮೇಲೆ ಗೆರೆಗಳು ಬೀಳುತ್ತಿವೆ; ಎಚ್ಚರ ವಹಿಸುವ ಸಮಯ ಇದು ಎಂದು ಕಿನ್ನಿಗೋಳಿಯ ಸಾಮಾಜಿಕ-ರಾಜಕೀಯ ಕಾರ್ಯಕರ್ತ ರಾಬರ್ಟ್ ರೊಸಾರಿಯೋ ಅವರು ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.