ಸೈಂಟ್‌ ಮೇರೀಸ್‌ ದ್ವೀಪ: ಪ್ರವಾಸಿಗರಿಗೆ ಇನ್ನಷ್ಟು ಸುರಕ್ಷೆ


Team Udayavani, Oct 11, 2022, 5:07 PM IST

23

ಮಲ್ಪೆ: ಪ್ರವಾಸಿಗರಿಗೆ ಸುರ ಕ್ಷೆಗೆ ಹೆಚ್ಚು ಮಹತ್ವ ನೀಡುವ ನಿಟ್ಟಿನಲ್ಲಿ ಮಲ್ಪೆ ಸೈಂಟ್‌ಮೇರಿಸ್‌ ಐಲ್ಯಾಂಡ್‌ನ‌ಲ್ಲಿ ಸುರ ಕ್ಷೆಯ ಕ್ರಮಗಳನ್ನು ಕೈಗೊಂಡು ಪ್ರವೇಶವನ್ನು ಆರಂಭಗೊಳಿಸಲಾಗಿದೆ. ಮಳೆಗಾಲದ ಸಮಯದಲ್ಲಿ ಸುಮಾರು 5 ತಿಂಗಳುಗಳ ಕಾಲ ಪ್ರವಾಸಿಗರ ಪ್ರವೇಶವನ್ನು ಸ್ಥಗಿತ ಮಾಡಲಾಗಿತ್ತು. ಇದೀಗ ಅ. 5ರಿಂದ ಜಿಲ್ಲಾಡಳಿತದಿಂದ ದ್ವೀಪ ಪ್ರವೇಶಕ್ಕೆ ಅನುಮತಿ ದೊರಕಿದೆ. ಶಾಲಾ ಕಾಲೇಜಿಗೆ ದಸರಾ ರಜೆಯ ಹಿನ್ನೆಲೆಯಲ್ಲಿ ಐಲ್ಯಾಂಡ್‌ನ‌ಲ್ಲಿ ಕಳೆದ ಎರಡು ಮೂರು ದಿನಗಳಿಂದ ಭಾರಿ ಜನಸಂದಣಿ ಕಂಡು ಬಂದಿದೆ.

ಸುರಕ್ಷೆಗೆ ಏನು ಕ್ರಮ ವಹಿಸಿದೆ ?

ದ್ವೀಪದ 5 ಕಡೆ ಅಪಾಯಕಾರಿ ಸ್ಥಳದಲ್ಲಿ ಬ್ಯಾರಿಕೇಡ್‌ ಹಾಕಿ ಎಚ್ಚರಿಕೆ ಫಲಕ ಮತ್ತು ಬಾವುಟಗಳನ್ನು ಅಳವಡಿಸಿ ಸೂಚನೆ ನೀಡಲಾಗುತ್ತದೆ. ದ್ವೀಪದ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ 110 ಮೀ. ಉದ್ದ, 100 ಮೀ. ಅಗಲದಲ್ಲಿ ಸ್ವಿಮ್ಮಿಂಗ್‌ ಝೋನ್‌ ರಚಿಸಲಾಗಿದ್ದು ಈ ಜಾಗದಲ್ಲೇ ಈಜಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ, ದ್ವೀಪದ ವಿವಿಧ ಭಾಗದಲ್ಲಿ 4 ವಾಚ್‌ ಟವರ್‌ ನಿರ್ಮಿಸಿ ಪ್ರವಾಸಿಗರ ಬಗ್ಗೆ ನಿಗಾ ವಹಿಸಲಾಗಿದೆ. ಈಗಾಗಲೇ 3 ಕಡೆಗಳಲ್ಲಿ ಸೆಲ್ಫಿ ಪಾಯಿಂಟ್‌ ಮಾಡಲಾಗಿದ್ದು, ಮುಂದೆ 4 ಕಡೆ ಹೆಚ್ಚುವರಿ ಪಾಯಿಂಟ್‌ ನಿರ್ಮಿಸಲಾಗುವುದು. 6 ಕಡೆಗಳಲ್ಲಿ ಸೇಫ್ಟಿ ಜಾಕೆಟ್‌, ಲೈಫ್‌ಬಾಯ್‌, ಫ್ಲೋಟ್‌, ಪ್ರಥಮ ಚಿಕಿತ್ಸಾ ವ್ಯವಸ್ಥೆಯಿದೆ. ಇಲ್ಲಿನ ಸಿಬಂದಿ ಬರುವ ಪ್ರವಾಸಿಗರಿಗೆ ಪ್ರವೇಶ ದ್ವಾರದಲ್ಲಿ 3 ನಿಮಿಷಗಳ ಕಾಲ ಸುರಕ್ಷೆಯ ಬಗ್ಗೆ ನೀಡುವ ಸಂದೇಶ ನೀಡಲಿದ್ದಾರೆ. ಯಾವುದೇ ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ 500 ರೂ. ದಂಡವನ್ನು ವಿಧಿಸಲಾಗುತ್ತದೆ.

ಪ್ರವಾಸಿಗರಿಗೆ ಸಿಗುವ ಸೌಲಭ್ಯಗಳು

ದ್ವೀಪದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ವಸ್ತ್ರ ಬದಲಾವಣೆ ಕೋಣೆಯ ವ್ಯವಸ್ಥೆ ಇದೆ. ತೆಂಗಿನಮರ ಮತ್ತು ಎಲೆಗಳಿಂದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಅಲಂಕರಿಸಲಾಗಿದೆ. ವಿಶ್ರಾಂತಿಗಾಗಿ ಛತ್ರಿ ಕುರ್ಚಿ, ಮತ್ತು ಚಾಪೆ ವ್ಯವಸ್ಥೆ ಇದೆ. ದ್ವೀಪದಲ್ಲಿ 8 ಮಂದಿ ಜೀವರಕ್ಷಕ ಸಿಬಂದಿ, ಇಬ್ಬರು ಹೌಸ್‌ ಕೀಪರ್‌, ಇಬ್ಬರು ಸೂಪರ್‌ವೈಸರ್‌, 6 ಮಂದಿ ಗೈಡ್‌ ಗಳು, 10 ಮಂದಿ ವಾಟರ್‌ ನ್ಪೋರ್ಟ್ಸ್, ಸ್ವಚ್ಛತ ಕಾರ್ಯಕ್ಕೆ ಸಿಬಂದಿಗಳನ್ನು ನೇಮಕ ಮಾಡಲಾಗಿದೆ.

ಪ್ಲಾಸ್ಟಿಕ್‌, ಮದ್ಯಪಾನ ನಿಷೇಧ

ಮಗುವಿನ ಆಹಾರ ಮತ್ತು ಹಿರಿಯರ ಔಷಧಗಳನ್ನು ಹೊರತುಪಡಿಸಿ ಪ್ಲಾಸ್ಟಿಕ್‌ ವಸ್ತುಗಳು, ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಆಹಾರ ಪದಾರ್ಥ, ಮದ್ಯಪಾನವನ್ನು ನಿರ್ಬಂಧಿಸಲಾಗಿದ್ದು, ಸ್ಟೀಲ್‌ ಪಾತ್ರೆಗಳಲ್ಲಿ ಆಹಾರ ಸಾಗಿಸಲು ಅನುಮತಿ ನೀಡಲಾಗಿದೆ.

ಜಲಸಾಹಸ ಕ್ರೀಡೆಗಳು

ದ್ವೀಪದಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲಾಗಿದೆ. ಝೋರ್ಬಿಂಗ್‌, ಬಂಪಿ ರೈಡಿಂಗ್‌, ಬನಾನ ರೈಡ್‌, ಜೆಟ್‌ಸ್ಕೀ ಈಗಾಗಲೇ ಆರಂಭಿಸಲಾಗಿದೆ. ಪ್ಯಾರಾಸೈಲಿಂಗ್‌, ಸ್ನೋರ್ಕೆಲ್ಲಿಂಗ್‌, ಐಲ್ಯಾಂಡ್‌ ರೌಂಡಿಂಗ್‌, ಡಾಲ್ಫಿನ್‌ ಸೈಟ್‌, ಆಂಗ್ಲಿಂಗ್‌, ಎಸ್‌ಯುಪಿ, ಕಯಾಕಿಂಗ್‌, ಕ್ಲಿಪ್‌ಡೈವ್‌, ಸ್ಕೂಬಾ ಡೈವ್‌ ಮುಂದಿನ ದಿನದಲ್ಲಿ ಆರಂಭಗೊಳ್ಳಲಿದೆ ಎಂದು ಬೀಚ್‌ ಅಭಿವೃದ್ಧಿ ಸಮಿತಿಯ ನಿರ್ವಹಣಾಧಿಕಾರಿ ಸುದೇಶ್‌ ಶೆಟ್ಟಿ ತಿಳಿಸಿದ್ದಾರೆ.

ನಿಯಮ ಉಲ್ಲಂಘನೆಗೆ ದಂಡ ಸುರಕ್ಷೆಯ ದೃಷ್ಟಿಯಿಂದ ಪ್ರವಾಸಿಗರಿಗಾಗಿ ದ್ವೀಪದಲ್ಲಿನ ಕೆಲವೊಂದು ನಿಯಮಗಳು, ಎಚ್ಚರಿಕೆ ಹಾಗೂ ಅಪಾಯದ ಫಲಕಗಳನ್ನು ಅಳವಡಿಸಲಾಗಿದೆ. ಇಲ್ಲಿಗೆ ಬರುವ ಜನರು ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡಬಾರದು. ಒಂದು ವೇಳೆ ಉಲ್ಲಂಘನೆಯಾದಲ್ಲಿ 500 ರೂ. ದಂಡವನ್ನು ವಿಧಿಸಲಾಗಿದೆ.- ಪಾಂಡುರಂಗ ಮಲ್ಪೆ, ಅಧ್ಯಕ್ಷರು, ಬೀಚ್‌ ಅಭಿವೃದ್ಧಿಸಮಿತಿ

ಟಾಪ್ ನ್ಯೂಸ್

India Cricket: The star all-rounder announced his retirement from limited over cricket

India Cricket: ಸೀಮಿತ ಓವರ್‌ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಸ್ಟಾರ್‌ ಆಲ್‌ ರೌಂಡರ್

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Prashant Kishor

Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್‌ ಕಿಶೋರ್‌ ಬಂಧನ

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

supreme-Court

Protect: ಹೆತ್ತವರನ್ನು ಸಾಕದಿದ್ದರೆ ಗಿಫ್ಟ್ ಡೀಡ್‌ ರದ್ದು: ಸುಪ್ರೀಂ ಕೋರ್ಟ್‌

ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್‌ ಸರಕಾರ‌; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ

ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್‌ ಸರಕಾರ‌; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ

HDK–Siddu

Alleged: ಇದು 60 ಪರ್ಸೆಂಟ್‌ ಲಂಚದ ಕಾಂಗ್ರೆಸ್‌ ಸರಕಾರ: ಎಚ್‌.ಡಿ.ಕುಮಾರಸ್ವಾಮಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Udupi: ಇನ್‌ಸ್ಟಾಗ್ರಾಂ ಲಿಂಕ್‌ ಬಳಸಿ 12.46 ಲಕ್ಷ ರೂ. ಕಳೆದುಕೊಂಡ ಯುವತಿ

POlice

Manipal: ವೇಶ್ಯಾವಾಟಿಕೆ; ನಾಲ್ವರುಪೊಲೀಸರ ವಶಕ್ಕೆ

POLICE-5

Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್‌ ವಶ

6

Manipal: ಅಪಾಯಕಾರಿ ರೀತಿಯಲ್ಲಿ ಬೈಕ್‌ ಚಾಲನೆ; ಪ್ರಕರಣ ದಾಖಲು

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

India Cricket: The star all-rounder announced his retirement from limited over cricket

India Cricket: ಸೀಮಿತ ಓವರ್‌ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಸ್ಟಾರ್‌ ಆಲ್‌ ರೌಂಡರ್

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Prashant Kishor

Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್‌ ಕಿಶೋರ್‌ ಬಂಧನ

1

Udupi: ಇನ್‌ಸ್ಟಾಗ್ರಾಂ ಲಿಂಕ್‌ ಬಳಸಿ 12.46 ಲಕ್ಷ ರೂ. ಕಳೆದುಕೊಂಡ ಯುವತಿ

4

Bajpe: ಗುರುಪುರ ಪೇಟೆಯ ಹಲವೆಡೆ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.