ಟ್ರಾಫಿಕ್ ನಿಯಮ ಉಲ್ಲಂಘನೆ : ಸವಾರರಿಗೆ ಹೊಸ ದರ ಬಿಸಿ; ಶೀಘ್ರ ಕಟ್ಟುನಿಟ್ಟು
Team Udayavani, Jul 3, 2019, 3:43 PM IST
ಉಡುಪಿ: ರಾಜ್ಯ ಸರಕಾರವು ರಸ್ತೆ ಸುರಕ್ಷೆಯ ದೃಷ್ಟಿಯಿಂದ ಸಂಚಾರ ನಿಯಮ ಉಲ್ಲಂ ಸುವವರ ಮೇಲೆ ಭಾರೀ ದಂಡ ವಿಧಿಸಲು ಆದೇಶಿಸಿದ್ದು, ನಿಧಾನಕ್ಕೆ ಅನುಷ್ಠಾನವಾಗುತ್ತಿದೆ. ಈ ನಡುವೆ ಪೊಲೀಸರು ನಿಯಮ ಮೀರು ವವರ ವಿರುದ್ಧ ಕಾರ್ಯಾಚರಣೆಯನ್ನು ಬಿಗಿಗೊಳಿಸಿದ್ದಾರೆ. ದಂಡದ ಪ್ರಮಾಣವನ್ನು 10ರಿಂದ 20 ಪಟ್ಟು ಹೆಚ್ಚಿಸು ವಂತೆ ಜೂ.25ರಂದು ರಾಜ್ಯ ಸರಕಾರ ಆದೇಶ ಹೊರಡಿ ಸಿದೆ. ರಾಜಧಾನಿಯ ಕೆಲವೆಡೆ ಜೂ.27ರಿಂದ ಜಾರಿಯಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳಿಂದ ಹೊಸ ದರದ ಅನ್ವಯ ದಂಡ ವಿಧಿಸಲಾಗುತ್ತಿದೆ.
ಹೇಗಿದೆ ಹೊಸ ದರ?
ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದರೆ ದಂಡದ ಮೊತ್ತ 1 ಸಾವಿರ ರೂ.ಗೆ ಏರಿಸಲಾಗಿದೆ. ಅನಂತರದಲ್ಲಿ ಎಷ್ಟೇ ಬಾರಿ ಸಿಕ್ಕಿ ಬಿದ್ದರೂ 2 ಸಾವಿರ ರೂ. ಕಕ್ಕಬೇಕು. ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದರೆ ಮತ್ತು ನಿಗದಿತ ವೇಗಮಿತಿ ಮೀರಿದರೆ ವಿಧಿಸುವ ದಂಡವನ್ನು 1,000 ರೂ.ಗೆ ಹೆಚ್ಚಿಸಲಾಗಿದೆ. ವಿಮೆ ರಹಿತ ವಾಹನ ಚಾಲನೆಗೂ ದಂಡ 1 ಸಾವಿರ ರೂ. ನೋಂದಣಿಯಾಗದ ವಾಹನ ಚಾಲನೆಗೆ ಮೊದಲ ಬಾರಿ 5 ಸಾವಿರ ರೂ. ಮತ್ತು ಅನಂತರದಲ್ಲಿ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಫಿಟೆ°ಸ್ ಪ್ರಮಾಣಪತ್ರ ಇಲ್ಲದ ವಾಹನಗಳಿಗೆ ಮೊದಲ ಬಾರಿ 2 ಸಾವಿರ ರೂ. ಮತ್ತು ಅನಂತರದಲ್ಲಿ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಆದೇಶ ಬಂದಿದೆ
ಹೊಸದರ ಅನುಷ್ಠಾನಗೊಳಿಸುವಂತೆ ಈಗಾಗಲೇ ಆದೇಶ ಬಂದಿದೆ. ಆದರೆ ಎಲೆಕ್ಟ್ರಾನಿಕ್ ಡಿವೈಸ್‌ಗೆ ಹೊಸದರ ಅಪ್‌ಡೇಟ್ ಆಗಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆದೇಶ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. – ನಿಶಾ ಜೇಮ್ಸ್
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು
ಬೆಂಗಳೂರಿನಲ್ಲಿ ಮಾತ್ರ ಡಿವೈಸ್ ಅಪ್‌ಡೇಟ್
ಹೊಸ ದರವನ್ನು ಟ್ರಾಫಿಕ್ ಪೊಲೀಸರ ಡಿವೈಸ್ ಸಾಫ್ಟ್ ವೇರ್‌ಗೆ ಅಪ್‌ಡೇಟ್ ಬೆಂಗಳೂರಿನಲ್ಲಿ ಮಾತ್ರ ಮಾಡಲಾಗುತ್ತಿದೆ. ಎಲ್ಲ ಜಿಲ್ಲೆಯ ಡಿವೈಸ್‌ಗಳಿಗೆ ಇದನ್ನು ಅಳವಡಿಸಲು ಸಾಕಷ್ಟು ಸಮಯಾವಕಾಶ ಬೇಕು. ಉಭಯ ಜಿಲ್ಲೆಯಲ್ಲಿ ನೋಂದಾಯಿತ ಡಿವೈಸ್ ಅಪ್‌ಡೇಟ್ ಮಾಡುವ ಸೆಂಟರ್‌ಗಳನ್ನು ಗುರುತಿಸುವ ಕೆಲಸವೂ ನಡೆಯುತ್ತಿದೆ.
ಸರಕಾರದ ಅಧಿಸೂಚನೆ ತತ್‌ಕ್ಷಣದಿಂದ ಜಾರಿಗೊಳಿಸುವ ನಿಟ್ಟಿನಲ್ಲಿ ಬಂದ ಮಾಹಿತಿಯಂತೆ ಈಗಾಗಲೇ ಪೊಲೀಸ್ ಠಾಣೆಗಳಿಗೆ ಒದಗಿಸಿರುವ ಪಿಡಿಎ ಉಪಕರಣಗಳಲ್ಲಿ ಪರಿಷ್ಕೃತ ದರವನ್ನು ಅಡಕಗೊಳಿ ಸಲು ಸಂಬಂಧಪಟ್ಟ ಠಾಣಾಧಿ ಕಾರಿಗಳು ಕ್ರಮ ಕೈಗೊಳ್ಳುವಂತೆ ಮತ್ತು ಪಿಡಿಎ ಉಪಕರಣಗಳಲ್ಲಿ ಪರಿಷ್ಕೃತ ದರವನ್ನು ಅಡಕಗೊಳಿಸುವ ತನಕ ಹಳೆಯ ವಿಧಾನದ ಪ್ರಕಾರ ದಂಡ ವಸೂಲಾತಿ ಪುಸ್ತಕದಲ್ಲಿಯೇ ಪರಿಷ್ಕೃತ ದರದಲ್ಲಿಯೇ ಪ್ರಕರಣಗಳನ್ನು ಕಡ್ಡಾಯವಾಗಿ ದಾಖಲಿಸಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.