Prize: ಸೂಡ ಸರಕಾರಿ ಪ್ರೌಢಶಾಲೆ; ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸಮ್ಮಾನ
Team Udayavani, Jun 7, 2024, 4:06 PM IST
ಶಿರ್ವ: ಬೆಳ್ಮಣ್‌ನ ಉದ್ಯಮಿ ಎಸ್. ಕೆ. ಸಾಲಿಯಾನ್ ಅವರ ಪ್ರಾಯೋಜಕತ್ವದಲ್ಲಿ ಕಳೆದ 31 ವರ್ಷಗಳಿಂದ ನಡೆಯುತ್ತಿರುವ ಸೂಡ ಸರಕಾರಿ ಪ್ರೌಢ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸಮ್ಮಾನ ಸಮಾರಂಭವು ವಿಜಯಾ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಪ್ರಶಾಂತ್ ಕುಮಾರ್ ಶೆಟ್ಟಿ ಸೂಡ ಅವರ ಅಧ್ಯಕ್ಷತೆಯಲ್ಲಿ ಜೂ. 7 ರಂದು ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಉದ್ಯಮಿ ಎಸ್. ಕೆ. ಸಾಲಿಯಾನ್ ಶೇ. 100 ಫಲಿತಾಂಶ ದಾಖಲಿಸಿದ ಸೂಡ ಸರಕಾರಿ ಪ್ರೌಢ ಶಾಲೆಯ ಸಾಧಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೂಡ ಗ್ರಾಮಸ್ಥರ ಪರವಾಗಿ ಅಭಿನಂದಿಸಿ ಪ್ರತಿಭಾ ಪುರಸ್ಕಾರ ನೀಡಿದರು. ಶೇ. 100 ಫಲಿತಾಂಶ ದಾಖಲಿಸಲು ಶ್ರಮಿಸಿದ ಶಿಕ್ಷಕ ವೃಂದದವರನ್ನು ಸಮ್ಮಾನಿಸಿದರು. ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ,ಸೂಡ ಶ್ರೀನಿವಾಸ ಭಟ್ ಮತ್ತು ಪಡುಬಿದ್ರಿ ದಿ|ಜಗನ್ನಾಥ ಶೆಟ್ಟಿ ದತ್ತಿನಿಧಿ ಪುರಸ್ಕಾರಗಳನ್ನು ವಿತರಿಸಲಾಯಿತು.
ಬೆಳ್ಮಣ್ ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಕುಂದರ್‌ಮಾತನಾಡಿ ಉತ್ತಮ ಸಂಸ್ಕಾರದೊಂದಿಗೆ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗುವ ಸರಕಾರಿ ಶಾಲೆಯನ್ನು ಗ್ರಾಮಸ್ಥರು ಎಸ್.ಕೆ. ಸಾಲ್ಯಾನ್ ಅವರಂತಹ ಮಾರ್ಗದರ್ಶಕರ ಸಹಕಾರದೊಂದಿಗೆ ಉಳಿಸುವ ಪ್ರಯತ್ನ ನಡೆಸಬೇಕಿದೆ ಎಂದು ಹೇಳಿದರು.
ಸಮ್ಮಾನ
ಸಮಾಜದ ವಿವಿಧ ಕೇÒತ್ರದಲ್ಲಿ ಸಾಧನೆಗೈದ ಗಣ್ಯರಾದ ಮುಂಡ್ಕೂರು ಉಮೇಶ್ ಕಾಮತ್ ಮತ್ತು ಮುಲ್ಲಡ್ಕ ಜನ್ನೋಜಿ ರಾವ್‌ಅವರನ್ನು ಉದ್ಯಮಿ ಎಸ್.ಕೆ. ಸಾಲ್ಯಾನ್ ಸಮ್ಮಾನಿಸಿದರು. ಸರಕಾರಿ ಸಂಯುಕ್ತ ಪ್ರೌಢಶಾಲೆಯ 3 ಶಿಕ್ಷಣ ಸಂಸ್ಥೆಗಳ ಶಿಕ್ಷಕ ವೃಂದದವರನ್ನು ಗೌರವಿಸಿದರು. ಪ್ರೌಢಶಾಲೆಯ ವತಿಯಿಂದ ಪ್ರಾಯೋಜಕ ಎಸ್.ಕೆ. ಸಾಲ್ಯಾನ್ ಅವರನ್ನು ಸಮ್ಮಾನಿಸಲಾಯಿತು. ಶಿಕ್ಷಕ ಕೆ.ಎಸ್.ರಮೇಶ್ ಸಮ್ಮಾನಿತರ ಪರಿಚಯ ಮಾಡಿದರು.
ಸಮ್ಮಾನಿತರ ಪರವಾಗಿ ಉಮೇಶ್ ಕಾಮತ್‌ಮತ್ತು ವಿದ್ಯಾರ್ಥಿಗಳ ಪರವಾಗಿ ಸಹನ್ಯಾ ಮಾತನಾಡಿದರು., ಬೆಳ್ಮಣ್ ಗ್ರಾ.ಪಂ.ಸದಸ್ಯ ಜೇರಿ ಎಲ್. ಡಿಸೋಜಾ,ನಿವೃತ್ತ ಶಿಕ್ಷಕ ವಿಜಯ ರಾವ್ ಮತ್ತು ಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ್ ಮಾತನಾಡಿದರು.
ಬ್ಯಾಂಕ್ ಆಫ್ ಬರೋಡಾ ಸೂಡ ಶಾಖೆಯ ಪ್ರಬಂಧಕ ವಿಜಯನ್,ನಿವೃತ್ತ ಬ್ಯಾಂಕ್ ಪ್ರಬಂಧಕ ಶೀನ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ದುಗ್ಗಪ್ಪ, ಮಾಜಿ ಗ್ರಾ.ಪಂ.ಸದಸ್ಯಗಣೇಶ್ ಶೆಟ್ಟಿ ಸೂಡ ವೇದಿಕೆಯಲ್ಲಿದ್ದರು.
ಸೂಡ ಶ್ರೀ ಸುಬ್ರಹ್ಮಣ್ಯ ಹಿ.ಪ್ರಾ.ಶಾಲೆಯ ಸಹಸಂಚಾಲಕ ಗಣೇಶ್ ಶೆಣೈ,ಸದಾಶಿವ ಸಾಲ್ಯಾನ್, ಸೋಮನಾಥ ಹೆಗ್ಡೆ, ಪ್ರದೀಪ್ ದೇವಾಡಿಗ, ಶಿಕ್ಷಕವೃಂದ, ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಹೆತ್ತವರು, ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಶಿಕ್ಷಕ ಕೆ.ಎಸ್. ರಮೇಶ್ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾ ಕೆ.ಆರ್. ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ವಿದ್ಯಾ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.