ಸಂಸಾರಕ್ಕೆ ಒಪ್ಪದ ಪ್ರಿಯಕರ: ಯುವತಿ ಆತ್ಮಹತ್ಯೆ
ಇನ್ಸ್ಟಾಗ್ರಾಂ ಮೂಲಕ ವಿವಾಹಿತನೊಂದಿಗೆ ಪ್ರೀತಿ
Team Udayavani, Oct 26, 2020, 10:50 PM IST
ಸಾಂದರ್ಭಿಕ ಚಿತ್ರ
ಉಡುಪಿ: ಇನ್ಸ್ಟಾಗ್ರಾಂ ಮೂಲಕ ವಿವಾಹಿತ ಯುವಕನೊಂದಿಗೆ ಪರಿಚಯವಾದ ಯುವತಿಯೋರ್ವಳು ಪ್ರೀತಿಯ ನೆಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಕ್ಕಿಹಳ್ಳಿಯ ರಕ್ಷಿತಾ ನಾಯಕ್ (19) ಮೃತ ಯುವತಿ. ಯುವತಿಯ ಪ್ರಿಯಕರ ಪ್ರಶಾಂತ್ ಕುಂದರ್ ಎಂಬಾತ ಆತನ ಪತ್ನಿಯನ್ನು ತೊರೆದು ತನ್ನ ಜತೆ ಸಂಸಾರ ಮಾಡಿಲ್ಲವೆಂದು ನೊಂದುಕೊಂಡು ಯುವತಿ ಅಂಬಾಗಿಲಿನಲ್ಲಿರುವ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಪ್ರಿಯಕರನಿಗೆ ಕರೆಮಾಡಿ “ನನ್ನ ಜತೆ ಸಂಸಾರ ಮಾಡಬೇಕು. ಇಲ್ಲವಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇದುವೇ ನನ್ನ ಕೊನೆಯ ಕರೆಯಾಗಬಹುದು’ ಎಂದು ದೂರವಾಣಿ ಮೂಲಕ ಎಚ್ಚರಿಕೆ ನೀಡಿದ್ದಳು. ಇದರಿಂದ ಹೆದರಿದ ಪ್ರಿಯಕರ ತತ್ಕ್ಷಣ ಆಕೆಯ ಮನೆಯತ್ತ ತೆರಳಿದ್ದಾನೆ. ಆದರೆ ಆ ವೇಳೆಗಾಗಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ.
ಆಸ್ಪತ್ರೆಗೆ ದಾಖಲಿಸಿದ
ಇದನ್ನು ಮನೆಯ ಹೊರಭಾಗದಿಂದ ನೋಡಿದ್ದ ಆತ ಮನೆಯ ಹಿಂಬಾಗಿಲು ಒಡೆದು ಒಳ ಪ್ರವೇಶಿಸಿ ಆಕೆಯನ್ನು ಆಟೋದಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹುಡುಗಿಯ ಮನೆಯವರಿಗೆ ಮಾಹಿತಿ ನೀಡಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಇನ್ಸ್ಟಾಗ್ರಾಂ ಮೂಲಕ ಪರಿಚಯ
ಇಂಟಿರಿಯರ್ ಡಿಸೈನ್ ಕೆಲಸ ಮಾಡುತ್ತಿದ್ದ ಪ್ರಶಾಂತ್ಗೆ ಇನ್ಸ್ಟಾಗ್ರಾಂ ಮೂಲಕ ರಕ್ಷಿತಾಳ ಪರಿಚಯವಾಗಿತ್ತು. ಆನ್ಲೈನ್ನಲ್ಲಿ ಇವರು ಇಂಟಿರಿಯರ್ ಡಿಸೈನ್ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದರು. ಇನ್ಸ್ಟಾಗ್ರಾಂನಲ್ಲಿ ಸಕ್ರಿಯಳಾಗಿದ್ದ ಈಕೆಗೆ 40 ಸಾವಿರಕ್ಕೂ ಅಧಿಕ ಮಂದಿ ಫಾಲೋವರ್ಸ್ಗಳಿದ್ದರು.
ಸುಳ್ಳು ಹೇಳಿ ಬಂದಿದ್ದಳು
ತನಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಸಿಕ್ಕಿದ್ದು ಉತ್ತಮ ವೇತನವೂ ಇದೆ. ಉಡುಪಿಯಲ್ಲಿ ಸ್ನೇಹಿತೆಯೊಂದಿಗೆ ವಾಸವಿರುವುದಾಗಿ ಮನೆಯಲ್ಲಿ ತಿಳಿಸಿದ್ದಳು. 15 ದಿನಕ್ಕೊಮ್ಮೆ ಮನೆಗೂ ತೆರಳುತ್ತಿದ್ದಳು, ಕೆಲವು ಬಾರಿ ಪ್ರಶಾಂತ್ ಈಕೆಯೊಂದಿಗೂ ಕಾಣಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಪ್ರಶಾಂತ್ನನ್ನು ಉಡುಪಿ ಪೊಲೀಸರು ಸೋಮವಾರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. “ನನ್ನ ಜತೆ ಸಂಸಾರ ನಡೆಸಲು ಆಕೆ ಒತ್ತಾಯಪಡಿಸುತ್ತಿದ್ದಳು. ನನಗೆ ಮದುವೆಯಾಗಿದೆ ಎಂದು ಹೇಳಿದ್ದೆ’
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.