ಕಸದ ಗುಡ್ಡ ತೆರವು, ಕಲುಷಿತ ನೀರು ನದಿ ಸೇರದಂತೆ ತಡೆ
ಉಡುಪಿ ನಗರ ಬಿಜೆಪಿ: ಬೃಹತ್ ಬೀಚ್ ಸ್ವಚ್ಛತಾ ಅಭಿಯಾನ, ಸಂಕಲ್ಪ
Team Udayavani, Oct 3, 2021, 1:57 AM IST
ಉಡುಪಿ: ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ಸೇವೆ ಮತ್ತು ಸಮರ್ಪಣ ಅಭಿಯಾನದ ಪ್ರಯುಕ್ತ “ಸ್ವಚ್ಛ ಭಾರತ-ಸ್ವಚ್ಛ ಉಡುಪಿ’ ಧ್ಯೇಯ ದಡಿ ಬೀಚ್ ಶುಚಿತ್ವ ಕಾರ್ಯಕ್ರಮ ಮಲ್ಪೆ ಸೀವಾಕ್‌ನಲ್ಲಿ ಶನಿವಾರ ನಡೆಯಿತು.
ಮೋದಿ ಸ್ಫೂರ್ತಿ
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಮೋದಿಯವರ ನಿರಂತರ ಶ್ರಮ, ಹುಮ್ಮಸ್ಸು, ಕೆಲಸದ ತುಡಿತ ಯುವ ಜನತೆಗೆ ಸ್ಫೂರ್ತಿಯಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಸ್ವಚ್ಛತೆ ಮತ್ತು ಸ್ವಾಸ್ಥ್ಯಕ್ಕೆ ಕೇಂದ್ರ ಸರಕಾರ ಸಾಕಷ್ಟು ಒತ್ತು ನೀಡುತ್ತಿರುವುದಲ್ಲದೆ, ದೇಶದ ಎಲ್ಲ ಸಮಸ್ಯೆಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದೆ ಸಾಗುತ್ತಿದೆ ಎಂದರು.
ವಿಭಾಗ ಪ್ರಭಾರಿ ಕಿದಿಯೂರು ಉದಯ ಕುಮಾರ್ ಶೆಟ್ಟಿ, ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜು ಕೊಳ, ಸಂಚಾಲಕ ವೆಂಕಟರಮಣ ಕಿದಿಯೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಸದಸ್ಯೆ ಎಡ್ಲಿನ್ ಕರ್ಕಡ, ನಾಮನಿರ್ದೇಶಿತ ಸದಸ್ಯ ವಿಜಯ ಕುಂದರ್ ಉಪಸ್ಥಿತರಿದ್ದರು.
ಇದನ್ನೂ ಓದಿ:ಗಾಂಧೀಜಿ ನೈತಿಕ ಭಾರತ ಕಟ್ಟುವ ಶಕ್ತಿ: ಬೊಮ್ಮಾಯಿ
ಸಾವಿರ ಮಂದಿಗೆ ಚಹಾ
ಅಭಿಯಾನ ಪ್ರಯುಕ್ತ ಬೀಚ್‌ನಲ್ಲಿ ಮೋದಿ ಚಾಯ್ ಸ್ಟಾಲ್ ತೆರೆದು 1 ಸಾವಿರ ಮಂದಿಗೆ ಚಹಾ ವಿತರಿಸಲಾಯಿತು. ಬೀಚ್ ಸ್ವಚ್ಛತೆ ಮಾಡಲಾಯಿತು. ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ನಗರಸಭೆ ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್ ನಿರೂಪಿಸಿದರು. ನಗರಸಭೆ ಸದಸ್ಯ ಮಂಜುನಾಥ ಮಣಿಪಾಲ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಿ, ವಂದಿಸಿದರು.
ಇಂದ್ರಾಣಿ ನದಿ ನೈರ್ಮಲ್ಯ ಕಾಪಾಡಲು ಸಂಕಲ್ಪ
ಪ್ರಧಾನಿ ನರೇಂದ್ರ ಮೋದಿಯವರು ಗಾಂಧೀಜಿಯವರ ಕನಸಾದ ಸ್ವತ್ಛತೆ ಮತ್ತು ಸ್ವದೇಶಿ ಅಭಿಯಾನ ಬಲಪಡಿಸುವ ನಿಟ್ಟಿ ನಲ್ಲಿ ಸಂದೇಶ ನೀಡಿದ್ದಾರೆ. ಕಸದ ಗುಡ್ಡ ತೆರವುಗೊಳಿಸುವುದು ಮತ್ತು ನದಿ ಗಳಿಗೆ ಕಲುಷಿತ ನೀರು ಬಿಡದಂತೆ ಮಾಡುವ ಬಗ್ಗೆ ಜನತೆ ಪಣ ತೊಡಬೇಕಿದೆ. ಉಡುಪಿ ಬಿಜೆಪಿಯು ಇಂದ್ರಾಣಿ ಸಹಿತ ವಿವಿಧ ನದಿ ಗಳಿಗೆ ಕಲುಷಿತ ನೀರು ಬಿಡದಂತೆ ಮಾಡುವುದು, ಅಲೆವೂರು ಗ್ರಾ.ಪಂ. ಕರ್ವಾಲಿನಲ್ಲಿರುವ ಕಸದ ಗುಡ್ಡ (ಡಂಪಿಂಗ್ ಯಾರ್ಡ್) ತೆರವುಗೊಳಿಸುವ ಸಂಕಲ್ಪ ತೊಟ್ಟಿದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.