ಅಗಲಿದ ಚೇತನ : ಟಿ. ಮೋಹನದಾಸ್ ಪೈ ನಿಧನಕ್ಕೆ ಮುಖ್ಯಮಂತ್ರಿ ಸೇರಿ ಗಣ್ಯರ ಸಂತಾಪ
Team Udayavani, Aug 1, 2022, 12:48 PM IST
ಬೆಂಗಳೂರು : ಉದಯವಾಣಿಯ ಸಂಸ್ಥಾಪಕ ಟಿ. ಮೋಹನದಾಸ ಪೈ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೋಹನದಾಸ ಪೈ ಅವರು ನಿಧನ ಹೊಂದಿದ್ದಾರೆ ಎನ್ನುವ ವಿಷಯ ನನಗೆ ಆಘಾತ ಉಂಟು ಮಾಡಿದೆ. ಹಿರಿಯ ಚೇತನರು, ಎಲ್ಲರ ಮಾರ್ಗದರ್ಶಕರಂತಿದ್ದ ಟಿ. ಮೋಹನ್ ದಾಸ್ ಪೈ ಅವರ ಆತ್ಮಕ್ಕೆ ಆ ಭಗವಂತ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ ಪೈ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಸಿಮ್ ಬಸವರಾಜ್ ಬೊಮ್ಮಾಯಿ ಕೋರಿದ್ದಾರೆ.
ಹಿರಿಯ ಉದ್ಯಮಿ, ಉದಯವಾಣಿ ದಿನಪತ್ರಿಕೆಯ ಸಂಸ್ಥಾಪಕರು ಆದ ಶ್ರೀ ಟಿ. ಮೋಹನದಾಸ್ ಪೈ ಅವರು ನಿಧನರಾದ ವಿಷಯ ನನಗೆ ಆಘಾತವನ್ನುಂಟು ಮಾಡಿದೆ.
ಹಿರಿಯ ಚೇತನರು, ಎಲ್ಲರ ಮಾರ್ಗದರ್ಶಕರಂತಿದ್ದ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಹಾಗೂ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/3snkWNisoS— Basavaraj S Bommai (@BSBommai) July 31, 2022
ಅತ್ಯುತ್ತಮ ಆಡಳಿತ, ಕ್ರಮಬದ್ದ ಯೋಜನೆಗಳನ್ನು ರೂಪಿಸುವಲ್ಲಿ ನಿಪುಣರಾಗಿದ್ದ ಪೈ ಅವರು, ಪೈ ಪರಿವಾರದ ಕೀರ್ತಿಯನ್ನು ದಿಗಂತಕ್ಕೆ ಏರಿಸಿ, ಅಸಂಖ್ಯಾತ ಜನರಿಗೆ ಉದ್ಯೋಗದಾತರು ಆಗಿದ್ದರು. 1970ರಲ್ಲಿ ಉದಯವಾಣಿ ಪತ್ರಿಕೆಯನ್ನು ಆರಂಭಿಸಿದ ಮೋಹನದಾಸ ಪೈ ಅವರು, ಅಲ್ಪ ಕಾಲದಲ್ಲಿಯೇ ಅದನ್ನು ರಾಜ್ಯದ ಪ್ರಮುಖ ಪತ್ರಿಕೆಯನ್ನಾಗಿ ಕಟ್ಟಿದರು. ಮುದ್ರಣ, ಪ್ರಕಾಶನ, ಮುದ್ರಣ ತಂತ್ರಜ್ಞಾನದಲ್ಲಿ ನವಶಕೆ ಆರಂಭಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.
ಮಣಿಪಾಲದ ಪೈ ಪರಿವಾರದ ಹಿರಿಯರು, ನಾಡಿನ ಹೆಸರಾಂತ ಪತ್ರಿಕೆ ‘ಉದಯವಾಣಿ’ ಸಂಸ್ಥಾಪಕರು ಆಗಿದ್ದ ಶ್ರೀ ಟಿ. ಮೋಹನದಾಸ್ ಪೈ ಅವರ ನಿಧನ ಬಹಳ ದುಃಖವನ್ನುಂಟು ಮಾಡಿದೆ.
ಅತ್ಯುತ್ತಮ ಆಡಳಿತಗಾರರಾಗಿದ್ದ ಅವರು, ಪೈ ಪರಿವಾರದ ಕೀರ್ತಿಯನ್ನು ದಿಗಂತಕ್ಕೇರಿಸಿ ಅಸಂಖ್ಯಾತ ಜನರಿಗೆ ಉದ್ಯೋಗದಾತರಾಗಿದ್ದರು.1/2 pic.twitter.com/4UkUkbNVUF
— H D Kumaraswamy (@hd_kumaraswamy) July 31, 2022
ಉದಯವಾಣಿ ಪತ್ರಿಕೆಯ ಸಂಸ್ಥಾಪಕರು, ಹಿರಿಯ ಉದ್ಯಮಿ, ಹಲವು ಸಂಘ – ಸಂಸ್ಥೆಗಳ ಮುಂಚೂಣಿಯಲ್ಲಿ ನಿಂತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಟಿ.ಮೋಹನದಾಸ ಪೈ ಅವರ ನಿಧನದ ಸುದ್ದಿ ನೋವುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ದುಃಖತಪ್ತ ಕುಟುಂಬವರ್ಗಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಉದಯವಾಣಿ ಪತ್ರಿಕೆಯ ಸಂಸ್ಥಾಪಕರು, ಹಿರಿಯ ಉದ್ಯಮಿ, ಹಲವು ಸಂಘ – ಸಂಸ್ಥೆಗಳ ಮುಂಚೂಣಿಯಲ್ಲಿ ನಿಂತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಟಿ.ಮೋಹನದಾಸ ಪೈ ಅವರ ನಿಧನದ ಸುದ್ದಿ ನೋವುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ.
ಅವರ ದುಃಖತಪ್ತ ಕುಟುಂಬವರ್ಗಕ್ಕೆ ನನ್ನ ಸಂತಾಪಗಳು. pic.twitter.com/kNXB3uUwFE
— Siddaramaiah (@siddaramaiah) July 31, 2022
ಖ್ಯಾತ ಉದ್ಯಮಿಗಳು, ಹಿರಿಯರು, ಉದಯವಾಣಿ ದಿನಪತ್ರಿಕೆಯ ಸಂಸ್ಥಾಪಕರಾದ ಶ್ರೀ ಟಿ. ಮೋಹನ್‌ದಾಸ್ ಪೈ ಅವರ ನಿಧನದ ಸುದ್ದಿ ಆಘಾತವುಂಟುಮಾಡಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಸಂತಾಪ ಸೂಚಿಸಿದ್ದಾರೆ.
ಖ್ಯಾತ ಉದ್ಯಮಿಗಳು, ಹಿರಿಯರು, ಉದಯವಾಣಿ ದಿನಪತ್ರಿಕೆಯ ಸಂಸ್ಥಾಪಕರಾದ ಶ್ರೀ ಟಿ. ಮೋಹನ್‌ದಾಸ್ ಪೈ ಅವರ ನಿಧನದ ಸುದ್ದಿ ಆಘಾತವುಂಟುಮಾಡಿದೆ.
ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಮತ್ತು ಅವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. pic.twitter.com/AY7xtHnzaq
— Pralhad Joshi (@JoshiPralhad) August 1, 2022
ಟಿಎಂಎ ಪೈ, ಮಣಿಪಾಲ್ ಮೀಡಿಯಾ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳ ಅಧ್ಯಕ್ಷರಾಗಿದ್ದ ಅವರು ದೂರದೃಷ್ಟಿಯ ನಾಯಕರಾಗಿದ್ದರು. ನಾನು ಮಂಗಳೂರಿನಲ್ಲಿ ವೈದ್ಯಕೀಯ ಪದವಿ ವ್ಯಾಸಂಗ ಮಾಡುವಾಗ ಹತ್ತಿರದಿಂದ ಇವರನ್ನು ಬಲ್ಲೆ. ಒಳ್ಳೆಯ ಉದ್ಯಮಿಯಾಗಿ ಹೆಸರು ಮಾಡಿದ್ದ ಅವರ ಅಗಲಿಕೆಯಿಂದ ಇಡೀ ಸಮಾಜಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ ಟ್ವೀಟ್ ಮಾಡಿದ್ದಾರೆ.
ಡಾ. T.M.A.ಪೈ ಅವರು ಕಟ್ಟಿ ಬೆಳೆಸಿದ ಮಣಿಪಾಲ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ಅವರ ಹಿರಿಯ ಪುತ್ರರಾದ ಶ್ರೀ ಟಿ. ಮೋಹನ್ ದಾಸ್ ಪೈ ಅವರು ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ನೋವಾಯಿತು.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗ, ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುವೆ.
ಓಂ ಶಾಂತಿ. pic.twitter.com/fV5QSweg1m
— Dr. Ashwathnarayan C. N. (@drashwathcn) July 31, 2022
ಖ್ಯಾತ ಉದ್ಯಮಿಗಳು, ಉದಯವಾಣಿ ದಿನಪತ್ರಿಕೆಯ ಸಂಸ್ಥಾಪಕರಾದ ಶ್ರೀ ಟಿ. ಮೋಹನ್‌ದಾಸ್ ಪೈ ಅವರ ನಿಧನದ ಸುದ್ದಿ ಆಘಾತವುಂಟು ಮಾಡಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.