“ತರಂಗ ಯುಗಾದಿ ಧಮಾಕ-2023′ ಅದೃಷ್ಟಶಾಲಿಗಳ ಆಯ್ಕೆ
Team Udayavani, Apr 28, 2023, 12:17 AM IST
ಮಣಿಪಾಲ: ತರಂಗ ವಾರಪತ್ರಿಕೆಯು ಮಂಗಳೂರು ಹಂಪನಕಟ್ಟೆಯ ಎಸ್.ಎಲ್. ಶೇಟ್ ಜುವೆಲರ್ ಆ್ಯಂಡ್ ಡೈಮಂಡ್ ಹೌಸ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ “ತರಂಗ ಯುಗಾದಿ ಧಮಾಕ-2023′ ಅದೃಷ್ಟಶಾಲಿಗಳ ಆಯ್ಕೆ ಸಮಾರಂಭ ಉದಯವಾಣಿ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆಯಿತು.
ಮುನಿಯಾಲು ಆಯುರ್ವೇದ ಸಮೂಹ ಸಂಸ್ಥೆಯ ನಿರ್ದೇಶಕರಾದ ಡಾ| ಶ್ರದ್ಧಾ ಶೆಟ್ಟಿ ಹಾಗೂ ಗುರು ಸಂದೇಶ ಶೆಟ್ಟಿ ಅವರು ಅದೃಷ್ಟಶಾಲಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಕನ್ನಡದ ಹೆಮ್ಮೆಯ ವಾರಪತ್ರಿಕೆ ತರಂಗ 41 ವರ್ಷಗಳಿಂದ ಕುಟುಂಬದ ಎಲ್ಲ ಸದಸ್ಯರ ಅತ್ಯಂತ ನೆಚ್ಚಿನ ವಾರ ಪತ್ರಿಕೆಯಾಗಿ ಕಲೆ, ಸಾಹಿತ್ಯ, ಶಿಕ್ಷಣ, ಆಹಾರ, ಪ್ರವಾಸೋದ್ಯಮ ಮೊದಲಾದ ವಿಷಯಗಳಲ್ಲಿ ಉತ್ತಮ ಲೇಖನ ನೀಡುತ್ತಾ ಸಮಾಜದ ಬೌದ್ಧಿಕ ಹಾಗೂ ಸಾಮಾಜಿಕ ಉನ್ನತಿಗೆ ಸಹಕರಿಸುತ್ತಿದೆ. ಇಂತಹ ಪತ್ರಿಕೆಯು ವಿಶೇಷಾಂಕದ ಮೂಲಕ ಆಯೋಜಿಸಿದ ಧಮಾಕ ಸ್ಪರ್ಧೆಯು ಓದುಗರು ಮತ್ತು ಪತ್ರಿಕೆಯ ನಡುವೆ ಇರುವ ಉತ್ತಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರತೀಕವಾಗಿದೆ. ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿರುವ ವಿಜೇತರ ಆಯ್ಕೆ ಪ್ರಕ್ರಿಯೆ ಓದುಗರಲ್ಲಿ ಇನ್ನಷ್ಟು ನಂಬಿಕೆ, ವಿಶ್ವಾರ್ಹತೆಯನ್ನು ಹೆಚ್ಚಿಸಲಿದೆ ಎಂದು ಡಾ| ಶ್ರದ್ಧಾ ಶೆಟ್ಟಿ ತಿಳಿಸಿದರು.
ಎಸ್.ಎಲ್. ಶೇಟ್ ಜುವೆಲರ್ ಆ್ಯಂಡ್ ಡೈಮಂಡ್ ಹೌಸ್‌ನ ಮಾಲಕ ಪ್ರಶಾಂತ ಶೇಟ್ ಶುಭ ಹಾರೈಸಿದರು.
ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಅವರು ಮಾತನಾಡಿ, ಪತ್ರಿಕೆಯ ಜೀವಾಳವೇ ಸಂಪಾದಕೀಯ ಬಳಗ. ಅದರೊಂದಿಗೆ ಎಲ್ಲ ವಿಭಾಗಗಳು, ಓದುಗರು ಮತ್ತು ಬರಹಗಾರರ ಕೊಡುಗೆಯೂ ಪತ್ರಿಕೆಯ ಯಶಸ್ಸಿಗೆ ಬಹು ಮುಖ್ಯವಾಗಿರುತ್ತದೆ. ಈ ನೆಲೆಯಲ್ಲಿ ಯುಗಾದಿ ವಿಶೇಷಾಂಕವು ಎಲ್ಲರನ್ನೂ ತಲುಪಲಿ ಎನ್ನುವ ಉದ್ದೇಶದಿಂದ ಈ ಯುಗಾದಿ ಧಮಾಕದಂಥ ಆಕರ್ಷಕ ಆಲೋಚನೆಯನ್ನು ಸಂಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಗುತ್ತಿದೆ. ಓದುಗರೇ ಕಟ್ಟಿ ಬೆಳೆಸಿದ ತರಂಗ ವಾರಪತ್ರಿಕೆಯು ಓದುಗರಿಗಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಾ ಮುನ್ನಡೆದಿದೆ ಎಂದರು.
ಯುಗಾದಿ ಹೊಸ ವರ್ಷದ ಆರಂಭ ಕಾಲ. ಸುಖ, ಸಂತೋಷ, ನೆಮ್ಮದಿ ಹಾಗೂ ಅಭ್ಯುದಯ ತರುವ ಕಾಲವೂ ಹೌದು. ಯುಗಾದಿಯ ಮೂಲಕವೇ ನಾವು ನಮ್ಮ ಏಳಿಗೆಯನ್ನು ನಿರೀಕ್ಷಿಸುತ್ತೇವೆ. ಈ ಹಿನ್ನೆಲೆಯಲ್ಲಿ ತರಂಗ ವಾರ ಪತ್ರಿಕೆಯು ಈ ವರ್ಷವೂ ಮೌಲಿಕ ಲೇಖನ ಮತ್ತು ಸಂಗ್ರಹ ಯೋಗ್ಯ ವಿಷಯಗಳನ್ನು ಒಳಗೊಂಡ ವಿಶೇಷಾಂಕದ ಮೂಲಕ ಯುಗಾದಿ ಸಂಭ್ರಮವನ್ನು ಇಡೀ ರಾಜ್ಯಕ್ಕೆ ಉಣಬಡಿಸಿದೆ. ತನ್ಮೂಲಕ ರಾಜ್ಯದ ಜನರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ ಎಂದು ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ. ಆಡಳಿತ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್ ಕುಮಾರ್ ಅವರು ಅಭಿಪ್ರಾಯಪಟ್ಟರು.
ತರಂಗ ವಾರ ಪತ್ರಿಕೆಯ ಸಂಪಾದಕಿ ಡಾ| ಯು.ಬಿ. ರಾಜಲಕ್ಷ್ಮೀ ಪ್ರಾಸ್ತಾವಿಕ ಮಾತನಾಡಿದರು. ಮ್ಯಾಗಜಿನ್ಸ್ ಮತ್ತು ಸ್ಪೆಶಲ್ ಇನಿಶಿಯೇಟಿವ್ಸ್‌ನ ಉಪಾಧ್ಯಕ್ಷ ರಾಮಚಂದ್ರ ಮಿಜಾರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಅದೃಷ್ಟಶಾಲಿಗಳು
ಬಂಪರ್ ಬಹುಮಾನ: (8 ಗ್ರಾಂ ಚಿನ್ನದ ನಾಣ್ಯ) ಗೀತಾ ಉರಾಳ ಅನಂತನಗರ-ಮಣಿಪಾಲ
ಪ್ರಥಮ: (4 ಗ್ರಾಂ ಚಿನ್ನದ ನಾಣ್ಯ) ಮಮತಾ ಉಮೇಶ್ ಮೇಸ್ತ ಜಲವಳ್ಳಿ-ಹೊನ್ನಾವರ, ಜಿ.ಬಿ. ಪಾಟೀಲ ಮುದ್ದೇಬಿಹಾಳ-ವಿಜಯಪುರ,
ದ್ವಿತೀಯ: (2 ಗ್ರಾಂ ಚಿನ್ನದ ನಾಣ್ಯ) ಭಾಗ್ಯಲಕ್ಷ್ಮೀ ಕಾಮತ್ ಕೊಡಿಯಾಲ್‌ಬೈಲು-ಮಂಗಳೂರು, ಸುಮಂತ್ ಶೆಟ್ಟಿ ಬಿ.ಟಿ.ಎಂ. ಲೇಔಟ್-ಬೆಂಗಳೂರು, ಸತೀಶ್ ಕುಮಾರ್ ಯಾದವಾಡ ಸರಸ್ವತಿಪುರ-ಹುಬ್ಬಳ್ಳಿ,
ತೃತೀಯ: (1 ಗ್ರಾಂ ಚಿನ್ನದ ನಾಣ್ಯ) ರಾಜ್‌ಕುಮಾರ್ ಪೈ ಕೋಡಿಕಲ್-ಮಂಗಳೂರು, ಶಿವಾನಂದ ಹುಕ್ರಟ್ಟೆ ನಲ್ಲೂರು-ಕಾರ್ಕಳ, ಎಸ್. ಚಂದ್ರಯ್ಯ ಆಚಾರ್ ತಡಂಬೈಲು-ಸುರತ್ಕಲ್, ಉಷಾ ಎ. ಸಂತೆಕಟ್ಟೆ-ಉಡುಪಿ
ಸಮಾಧಾನಕರ: (10 ಗ್ರಾಂ ಬೆಳ್ಳಿ ನಾಣ್ಯ) ಶೋಭಾ ಲೋಕೇಶ್ ಮಂಜೇಶ್ವರ-ಕಾಸರಗೋಡು, ಪುರುಷೋತ್ತಮ ಸೆಟ್ಟಿಗಾರ್ ಭಾಂಡೂಪ್-ಮುಂಬಯಿ, ಕಿರಿಜಾಜಿ ಕೇಶವ್ ಹುಣಸೂರು-ಮೈಸೂರು, ವಾಣಿಶ್ರೀ ಭಾಸ್ಕರ ಮಾಂಜರೇಕರ ಚಿಕ್ಕೋಡಿ-ಬೆಳಗಾವಿ, ಕೆ.ಎಂ. ಶ್ರೀನಿವಾಸಮೂರ್ತಿ ದಾವಣಗೆರೆ, ಡಾ| ಕೆ.ಎಸ್. ಕುಲಕರ್ಣಿ ಅಡೂರು-ಹಾವೇರಿ, ಸಿ. ಹರೀಶ್ ಭದ್ರಾವತಿ, ಬಿ. ಮಂಜುನಾಥ ಭಟ್ ಚಿಕ್ಕಪೇಟೆ-ಚಿತ್ರದುರ್ಗ, ಶ್ರೇಯಸ್ ಜೆ.ಎನ್. ಎಸ್.ಎಸ್.ಪುರಂ-ತುಮಕೂರು, ವಿಜಯೇಂದ್ರ ಕುಲಕರ್ಣಿ ಕರುಣೇಶ್ವರನಗರ ಕಲಬುರಗಿ, ಜೆಸ್ಲಿನ್ ಡಿ’ಸೋಜಾ ದೇರಳಕಟ್ಟೆ-ಮಂಗಳೂರು, ದಿಶಾ ಎ. ಸಜೀಪಮೂಡು-ಬಂಟ್ವಾಳ, ಎ. ಆನಂದನ್ ಕುಕಿಕಟ್ಟೆ-ಉಡುಪಿ, ತೇಜಸ್ವಿನಿ ಎ. ಗೋಳಿತಟ್ಟು-ಕಡಬ, ತೇಜಸ್ವಿನಿ ಮಲ್ಯ ಶಿರಿಯಾರ-ಬ್ರಹ್ಮಾವರ, ವಿಶ್ವನಾಥ ಮೊಲಿ ಅರಮನೆಬಾಗಿಲು-ಮೂಡುಬಿದಿರೆ, ಶಿವಾನಿ ಎಸ್. ರೈ ನರಿಮೊಗರು-ಪುತ್ತೂರು, ಜಯಲಕ್ಷ್ಮಿ ಕೆ. ಉಜಿರೆ-ಬೆಳ್ತಂಗಡಿ, ಐಶಾನಿ ಗರೋಡಿ ಕ್ರಾಸ್-ಕಾಪು, ಜಯಮಾಲಾ ಪ್ರಮೋದ್ ಕುಮಾರ್ ಮಣ್ಣಗುಡ್ಡ-ಮಂಗಳೂರು, ಸುನೀಲ್ ಕುಮಾರ್ ಜೆಪ್ಪು ಬಪ್ಪಲ್-ಮಂಗಳೂರು, ಗಾಯತ್ರಿ ಪಿ. ದಾಮಲೆ ಪಡೀಲ್-ಮಂಗಳೂರು, ತುಳಸೀದಾಸ್ ಶ್ರೀಧರ ಆಚಾರ್ಯ ಪಕ್ಷಿಕೆರೆ-ಹಳೆಯಂಗಡಿ, ಗಿರೀಶ್ ಎಸ್. ಜಾಲಹಳ್ಳಿ-ಬೆಂಗಳೂರು, ಅಮಿತಾ ಎಂ. ಆಚಾರ್ಯ ಅಂಬಲಪಾಡಿ-ಉಡುಪಿ, ಹೇಮಂತ ಕುಮಾರ್ ಪುನರೂರು-ಕಿನ್ನಿಗೋಳಿ, ಶ್ರೀಲತಾ ಶ್ರೀಧರ ನಾಯಕ್ ನಾಡ-ಬೈಂದೂರು, ಸುಭಾಷಿನಿ ವೈದ್ಯ ಕೋಟೇಶ್ವರ-ಕುಂದಾಪುರ, ನಂದಿನಿ ಡಿ. ಶೇರಿಗಾರ್ ಕುಂಜಿಬೆಟ್ಟು-ಉಡುಪಿ, ಸೀತಾ ಬಂಗ್ಲೆಜಡ್ಡು-ಹೆಬ್ರಿ ಅವರು ಬಹುಮಾನ ಗಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.