KAR TET Exam ಶಿಕ್ಷಕರ ಅರ್ಹತಾ ಪರೀಕ್ಷೆ
Team Udayavani, Sep 3, 2023, 11:18 PM IST
ಉಡುಪಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕವು ಶಿಕ್ಷಕರ ನೇಮಕಾತಿಗೆ ಪೂಕರವಾಗಿ ರವಿವಾರ ನಡೆಸಿದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಕೆ-ಟಿಇಟಿ) ಪತ್ರಿಕೆ-1ರಲ್ಲಿ ಉಡುಪಿಯ ಶೇ. 80.38 ಹಾಗೂ ದ.ಕ.ದ ಶೇ. 87.28ರಷ್ಟು ಹಾಗೂ ಪತ್ರಿಕೆ-2ರಲ್ಲಿ ಕ್ರಮವಾಗಿ ಶೇ.90.13 ಮತ್ತು ಶೇ. 90.44 ಅಭ್ಯರ್ಥಿಗಳು ಹಾಜರಾಗಿದ್ದಾರೆ.
ದ.ಕ. ಜಿಲ್ಲೆಯ 10 ಕೇಂದ್ರದಲ್ಲಿ ಪತ್ರಿಕೆ-1 ಪರೀಕ್ಷೆ ನಡೆದಿದ್ದು ನೋಂದಾಯಿಸಿಕೊಂಡಿದ್ದ 2,430 ಅಭ್ಯರ್ಥಿಗಳಲ್ಲಿ 2,121 ಮಂದಿ ಪರೀಕ್ಷೆ ಬರೆದು, 309 ಮಂದಿ ಗೈರು ಹಾಜರಾಗಿದ್ದಾರೆ. 15 ಕೇಂದ್ರದಲ್ಲಿ ನಡೆದ ಪತ್ರಿಕೆ-2ಕ್ಕೆ ನೋಂದಾಯಿಸಿಕೊಂಡಿದ್ದ 3,733 ಅಭ್ಯರ್ಥಿಗಳಲ್ಲಿ 3,376 ಮಂದಿ ಪರೀಕ್ಷೆ ಬರೆದಿದ್ದು 357 ಮಂದಿ ಗೈರು ಹಾಜರಾಗಿದ್ದಾರೆ. ಉಡುಪಿ ಜಿಲ್ಲೆಯ 6 ಕೇಂದ್ರದಲ್ಲಿ ನಡೆದ ಪತ್ರಿಕೆ-1ರ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 1,520 ಅಭ್ಯರ್ಥಿಗಳಲ್ಲಿ 1,313 ಮಂದಿ ಪರೀಕ್ಷೆ ಬರೆದಿದ್ದು, 207 ಮಂದಿ ಗೈರು ಹಾಜರಾಗಿದ್ದಾರೆ. 9 ಕೇಂದ್ರದಲ್ಲಿ ನಡೆದ ಪತ್ರಿಕೆ-2ರ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 2,249 ಅಭ್ಯರ್ಥಿಗಳಲ್ಲಿ 2,027 ಮಂದಿ ಪರೀಕ್ಷೆ ಬರೆದು, 222 ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ.
ಉಭಯ ಜಿಲ್ಲೆಗಳಲ್ಲಿ ಯಾವುದೇ ಪರೀಕ್ಷೆ ಕೇಂದ್ರದಲ್ಲಿ ಅಕ್ರಮ, ಅವ್ಯವಹಾರ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.