ಮದುವೆ ವರ್ಷಾಚರಣೆಯ ವೆಚ್ಚ ಅನಾರೋಗ್ಯ ಪೀಡಿತರಿಗೆ
Team Udayavani, Apr 27, 2020, 5:54 AM IST
ಮಲ್ಪೆ: ಕೊಡವೂರು ತೋಂದುಬೆಟ್ಟು ಜೀವನ್ ಸಾಲ್ಯಾನ್ ಅವರು ತನ್ನ ಮಾತಾಪಿತರಾದ ವಿಠಲ ಸಾಲ್ಯಾನ್ ಮತ್ತು ಗುಲಾಬಿ ವಿ. ಸಾಲ್ಯಾನ್ ಅವರ ಮದುವೆಯ ಸುವರ್ಣ ಮಹೋತ್ಸವವನ್ನು ಕ್ಯಾನ್ಸರ್, ಕಿಡ್ನಿ ವೈಫಲ್ಯದಂತಹ ಗಂಭೀರ ಕಾಯಿಲೆಗೆ ತುತ್ತಾಗಿರುವ ರೋಗಿಗಳ, ವಿಕಲಚೇತನ ಕುಟುಂಬಗಳಿಗೆ ಮತ್ತು ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಲಾಕ್‌ಡೌನ್ ಈ ವೇಳೆಯಲ್ಲಿ ದಿನಸಿ ಸಾಮಗ್ರಿಗಳನ್ನು ನೀಡುವುದರ ಮೂಲಕ ಆಚರಿಸಿದರು.
ಕೊಡವೂರು ಸಾರ್ವಜನಿಕ ಗಣೇಶೋತ್ಸವ ಮತ್ತು ಕೊಡವೂರು ಹಳೆವಿದ್ಯಾರ್ಥಿ ಸಂಘ,ಯುವಕ ಸಂಘದ ಮುಖೇನ ಕಲ್ಮಾಡಿ, ಮಲ್ಪೆ , ವಡಭಾಂಡೇಶ್ವರ, ಲಕ್ಷ್ಮೀ ನಗರ, ಪುತ್ತೂರು ಪ್ರದೇಶದ ಸುಮಾರು 65ಕ್ಕೂ ಅಧಿಕ ಕುಟುಂಬಗಳಿಗೆ ಒಟ್ಟು 50ಸಾವಿರ ರೂ. ಮೊತ್ತದ ವಸ್ತುಗಳನ್ನು ವಿತರಿಸಿದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು, ನಗರಸಭಾ ಸದಸ್ಯ ವಿಜಯ ಕೊಡವೂರು, ಗಣೇಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಕೊಡವೂರು, ಯುವಕ ಸಂಘದ ಅಧ್ಯಕ್ಷ ಪ್ರಭಾತ್ ಕೋಟ್ಯಾನ್, ಜಯಂತಿ ಕುಂದರ್, ಚಂದ್ರಸಾಲ್ಯಾನ್, ಶಾರದಕ್ಕ, ಗುರುದಾಸ್ ಕುಂದರ್, ಮಹೇಶ್ ಸುವರ್ಣ, ಹರೀಶ್ ಕಾಂಚನ್, ನಿತ್ಯಾನಂದ ಸಾಲ್ಯಾನ್, ಜನಾರ್ದನ ಕೊಡವೂರು, ಸುಧಾ ಎನ್. ಶೆಟ್ಟಿ, ಪೂರ್ಣಿಮಾ ಜನಾರ್ದನ್, ಕೃಷ್ಣ ದೇವಾ ಡಿಗ, ಶೇಖರ್ ಮಾಬ್ಯಾನ್, ನಿತ್ಯಾನಂದ ಅಮೀನ್, ದೀಕ್ಷಿತ್ ದೇವಾಡಿಗ, ಸುನೀಲ್ ಅಮೀನ್, ಚಂದ್ರಕಾಂತ್ ಶೆಟ್ಟಿಗಾರ್, ಜೀವನ್ ಪಾಳೆಕಟ್ಟೆ, ಸಂದೇಶ್ ಕೋಟ್ಯಾನ್, ಅಜಿತ್ ಕುಮಾರ್, ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.