ಮಲ್ಪೆ ಮುಖ್ಯ ರಸ್ತೆ; ಮಣ್ಣು ಸಾಗಾಟ: ಪರಿಸರ ಧೂಳುಮಯ…!
Team Udayavani, Sep 6, 2022, 12:22 PM IST
ಮಲ್ಪೆ: ಮಲ್ಪೆ ಮಣ್ಣು ಸಾಗಾಟದ ಲಾರಿ ಮಣ್ಣನ್ನು ರಸ್ತೆಯಲ್ಲಿ ಚೆಲುತ್ತಾ ಸಾಗುವುದರಿಂದ ಮುಖ್ಯ ರಸ್ತೆಯ ಪರಿಸರವಿಡೀ ಕಳೆದೊಂದು ವಾರದಿಂದ ಧೂಳುಮಯವಾಗಿದೆ.
ದಿನವಿಡೀ ಲಾರಿಗಳಲ್ಲಿ ಕೆಂಪು ಮಣ್ಣನ್ನು ಸಾಗಿಸಲಾಗುತ್ತಿದೆ. ಆದರೆ ಮಣ್ಣಿಗೆ ಯಾವುದೇ ಮುಚ್ಚಿಗೆ ವ್ಯವಸ್ಥೆ ಮಾಡದ ಕಾರಣ ಲಾರಿಗಳು ಮಣ್ಣನ್ನು ಚೆಲ್ಲುತ್ತಿದ್ದು ರಸ್ತೆಯುದ್ದಕ್ಕೂ ಇತರ ವಾಹನಗಳು ಸಂಚರಿಸುವ ಪರಿಸರ ಧೂಳು ಮಯವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಮಲ್ಪೆ ಬಂದರಿನಿಂದ ಮಣ್ಣು ಸಾಗಾಟವಾಗುತ್ತಿರುವುದು ಧೂಳಿಗೆ ಕಾರಣವಾಗಿದೆ ಎನ್ನಲಾಗಿದೆ. ವಾಣಿಜ್ಯ ಕೇಂದ್ರವಾದ ಮಲ್ಪೆಯ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿವೆ. ಬಸ್ಸು ಅಥವಾ ಲಾರಿಯಂತಹ ದೊಡ್ಡ ವಾಹನಗಳು ಒಮ್ಮೆ ಹಾದು ಹೋದರೆ ರಸ್ತೆ ಧೂಳಿನಿಂದ ಕಾಣದಂತಾಗುತ್ತದೆ. ರಸ್ತೆ ಬದಿಯಲ್ಲಿರುವ ಅಂಗಡಿಯವರಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಶಾಲಾ ಮಕ್ಕಳು ಸಾರ್ವಜನಿಕರು, ಪಾದಚಾರಿಗಳು ವಾಹನ ಬಂದರೆ ಮೂಗು ಮುಚ್ಚಿ ತಿರುಗಾಡುವಂತಾಗಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಎಲ್ಲ ಲಕ್ಷಣಗಳಿವೆ. ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.