ಮೀನುಗಾರರನ್ನು ಪದೇ ಪದೇ ಕಾಡುತ್ತಿರುವ ಹವಾಮಾನದ ವೈಪರೀತ್ಯ!
ನಿರಂತರ ಮಳೆಯಿಂದ ಸಾಕಷ್ಟು ಸಮಸ್ಯೆ
Team Udayavani, Sep 24, 2020, 4:40 AM IST
ಮೀನುಗಾರಿಕೆಗೆ ತೆರಳದೆ ಲಂಗರು ಹಾಕಿರುವ ಬೋಟ್‌ಗಳು.
ಮಲ್ಪೆ: ಇತ್ತೀಚಿನ ವರ್ಷಗಳಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ಹವಾಮಾನ ವೈಪರೀತ್ಯ ಕರಾವಳಿಯ ಮೀನುಗಾರರನ್ನು ಕಂಗೆಡಿಸುವಂತೆ ಮಾಡಿದೆ. ಈ ಮೊದಲು ಮತ್ಸ್ಯ ಕ್ಷಾಮದಿಂದ ಬಳಲುತ್ತಿದ್ದ ಮೀನುಗಾರರು ಕಳೆದ ಒಂದೂವರೆ ವರ್ಷದಿಂದ ಹವಾಮಾನದ ವೈಪರೀತ್ಯವನ್ನು ಎದುರಿಸುತ್ತಿದ್ದಾರೆ. ಇದು ಉಳಿದ ವ್ಯಾಪಾರ ವ್ಯವಹಾರದ ಮೇಲೂ ಪರೋಕ್ಷವಾಗಿ ಪರಿಣಾಮವನ್ನು ಬೀರಿದೆ.
ಕಳೆದ ವರ್ಷ ಓಖೀ, ಕ್ಯಾರ್, ಮಹಾ, ಅಂಫಾನ್ ಸೇರಿದಂತೆ ಆರು ಚಂಡ ಮಾರುತಗಳು ಮೀನುಗಾರರ ಬದುಕನ್ನು ಕಸಿದಿತ್ತು. ಪರಿಣಾಮ ಬೋಟ್ ಒಂದಷ್ಟು ಕಾಲ ದಡದಲ್ಲಿ ಉಳಿಯಬೇಕಾಯಿತು. ಅಕ್ಟೋಬರ್ ನಂತರ ಸ್ವಲ್ಪಮಟ್ಟಿಗೆ ಮೀನುಗಾರಿಕೆ ಚುರುಕು ಕಂಡು, ಡಿಸೆಂಬರ್‌ವರೆಗೆ ಮುಂದುವರಿದರೂ ಜನವರಿಯಿಂದ ಮೀನಿನ ಲಭ್ಯತೆ ಕಡಿಮೆ
ಯಾಯಿತು. ಉಳಿದ ಅವಧಿಯಲ್ಲಿ ಒಂದಷ್ಟು ದುಡಿದು ಕಳೆದುಕೊಂಡಿರುವ ಅರ್ಧದಷ್ಟಾದರೂ ಪಡೆಯೋಣ ಎಂಬ ನಿರೀಕ್ಷೆಯಲ್ಲಿ ಮೀನುಗಾರಿಕೆಗೆ ತೊಡಗಿದರೆ ಮುಂದೆ ಕಾಡಿದ್ದು ಮಹಾಮಾರಿ ಕೊರೊನಾ. ಪರಿಣಾಮ ಕನಿಷ್ಠ ಮೂರು ತಿಂಗಳ ಕಾಲ ಮೀನುಗಾರಿಕೆ ನಡೆಸಲು ಸಾಧ್ಯ
ವಾಗಲಿಲ್ಲ.
ಬೋಟ್‌ಗಳ ಢಿಕ್ಕಿ, ಕೋಟ್ಯಂತರ ರೂ. ನಷ್ಟ
ಹವಾಮಾನದ ವೈಪರೀತ್ಯಗಳಾದಾಗ ಬೋಟುಗಳು ಬಂದರಿನಲ್ಲಿ ಲಂಗರು ಹಾಕುತ್ತವೆ. ಈ ವೇಳೆಯೂ ಸಾಕಷ್ಟು ಹಾನಿಯಾಗಿವೆ. ಹೊಳೆಬದಿ ಲಂಗರು ಹಾಕಿ ನಿಲ್ಲಿಸಲಾಗಿದ್ದ ಮೀನುಗಾರಿಕೆ ಬೋಟುಗಳು ನದಿ ನೀರಿನ ಹರಿವಿನ ರಭಸಕ್ಕೆ ಕಟ್ಟಿದ ಹಗ್ಗ ತುಂಡಾಗಿ ತೇಲಿ ಹೋದರೆ,ಇನ್ನು ಕೆಲವು ಒಂದಕ್ಕೊಂದು ಢಿಕ್ಕಿಯಾಗಿ ಹಾನಿಗೊಂಡಿದೆ. ನಿರಂತರ ಮಳೆಯಿಂದಾಗಿ ನದಿಯಲ್ಲಿ ನೀರು ಪ್ರವಾಹ ವೇಗದಲ್ಲಿ ಹರಿಯುತ್ತಿದ್ದು ನೀರಿನ ಹೊಯ್ದಾಟಕ್ಕೆ ಕಟ್ಟಿದ ಬೋಟುಗಳು ಒಂದಕ್ಕೊಂದು ಢಿಕ್ಕಿ ಹೊಡೆದುಕೊಂಡು ಸಾಕಷ್ಟು ನಷ್ಟ ಉಂಟಾಗಿತ್ತು. ಮೀನುಗಾರಿಕೆ ಆರಂಭಗೊಂಡಂದಿನಿಂದ ಆದಾಯಗಳಿಸುವುದಕ್ಕಿಂತ ಬೋಟಿನ ದುರಸ್ತಿ ಕೆಲಸದ ಖರ್ಚು ಹೆಚ್ಚಾಗಿದೆ.
ಹವಾಮಾನ ಏರಿಳಿತ
ಕಳೆದ ಸಾಲಿನಲ್ಲಿ 6 ಚಂಡಮಾರುತ ಬಂದಿತ್ತು. ಈ ಸಲ ಮೀನುಗಾರಿಕೆ ಆರಂಭಗೊಂಡು ಒಂದು ತಿಂಗಳಲ್ಲಿ ಎರಡು ಹವಾಮಾನ ಏರಿಳಿತ ಕಂಡಿದೆ. ಹೀಗೆ ವೈಪರೀತ್ಯಗಳಿದ್ದರೆ ಮೀನುಗಾರರು ದುಡಿಮೆ ಮಾಡುವುದು ಹೇಗೆ ? ದಿನದಿಂದ ದಿನಕ್ಕೆ ಮೀನುಗಾರರ ಸ್ಥಿತಿ ಶೋಚನೀಯವಾಗುತ್ತಿದೆ.
-ಕೃಷ್ಣ ಎಸ್. ಸುವರ್ಣ, ಅಧ್ಯಕ್ಷರು, ಮೀನುಗಾರರ ಸಂಘ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.