ಅತ್ಯಾಚಾರಿಗೆ 27 ವರ್ಷ ಕಠಿನ ಶಿಕ್ಷೆ
Team Udayavani, Apr 13, 2019, 10:45 AM IST
ಉಡುಪಿ: ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಉಡುಪಿ ಸಮೀಪದ ಪೆರಂಪಳ್ಳಿಯ ಅರುಣ ಆಚಾರಿ(32)ಗೆ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ 27 ವರ್ಷ ಕಠಿನ ಸಜೆ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.
ಅರುಣ ಆಚಾರಿ 2016ರ ಜು.16ರಂದು ಬೆಳಗ್ಗೆ 8.30ರ ವೇಳೆಗೆ ಶಾಲೆಗೆ ಹೊರಟಿದ್ದ ಮಂದ ಬುದ್ಧಿಯ ಬಾಲಕಿಯನ್ನು ಅಪಹರಿಸಿ ಮಣಿಪಾಲದ ಲಾಡ್ಜ್ ಗಳಿಗೆ ಕರೆದೊಯ್ದಿದ್ದ. ಅಲ್ಲಿ ರೂಮ್ ಸಿಗದಿದ್ದಾಗ ತನ್ನ ಮನೆಗೆ ಕರೆ ತಂದು ಲೈಂಗಿಕ ದೌರ್ಜನ್ಯ ಎಸಗಿದ್ದ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಸಿಐ ಗಿರೀಶ್ ಎಸ್.ವಿ ತನಿಖೆ ನಡೆಸಿದ್ದು, ಬಳಿಕ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ವಿಶೇಷ ನ್ಯಾಯಾಲಯದಲ್ಲಿ 30 ಸಾಕ್ಷಿಗಳ ವಿಚಾರಣೆ ನಡೆದಿತ್ತು. ವಾದ ವಿವಾದ ಆಲಿಸಿದ್ದ ಪ್ರಧಾನ ನ್ಯಾಯಾಧೀಶ ಸಿ.ಎಂ.ಜೋಷಿ ಅವರು ಆರೋಪ ಸಾಬೀತಾಗಿರುವುದಾಗಿ ಎ.10ರಂದು ತೀರ್ಪು ನೀಡಿದ್ದರು. ಸರಕಾರದ ಪರವಾಗಿ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ವಾದಿಸಿದ್ದರು.
ಕಣ್ಣೀರಿಟ್ಟ ಅಪರಾಧಿ
ನ್ಯಾಯಾಧೀಶರು ಶಿಕ್ಷೆ ಪ್ರಕಟಿಸುತ್ತಿದ್ದಂತೆಯೇ ಕಟಕಟೆಯಲ್ಲಿದ್ದ ಅಪರಾಧಿ ಕಣ್ಣೀರಿಟ್ಟ. ಡಿಎನ್‌ಎ ವರದಿ, ನ್ಯಾಯಾಧೀಶರ ಮುಂದೆ ನೊಂದ ಬಾಲಕಿ ನೀಡಿರುವ ಹೇಳಿಕೆ ಕೂಡ ತೀರ್ಪಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆತನಿಗೆ 3 ವರ್ಷಗಳಿಂದ ಜಾಮೀನು ದೊರೆತಿರಲಿಲ್ಲ.
ಶಿಕ್ಷೆ ವಿವರ
ಅತ್ಯಾಚಾರ(ಲೈಂಗಿಕ ಹಲ್ಲೆ) ಮಾಡಿರುವುದಕ್ಕೆ 10 ವರ್ಷ ಕಠಿನ ಸಜೆ ಮತ್ತು 30 ಸಾ. ರೂ. ದಂಡ, ಪೋಕ್ಸೋ ಪ್ರಕರಣದಡಿ 10 ವರ್ಷ ಕಠಿನ ಸಜೆ ಮತ್ತು 50 ಸಾ. ರೂ. ದಂಡ, ಅಪಹರಣ ಪ್ರಕರಣಕ್ಕೆ 7 ವರ್ಷಗಳ ಕಠಿನ ಸಜೆ ಮತ್ತು 30 ಸಾ. ರೂ. ದಂಡ ವಿಧಿಸಲಾಗಿದೆ. ಅಪಹರಣ ಹೊರತುಪಡಿಸಿ ಉಳಿದೆರಡು ಶಿಕ್ಷೆಗಳನ್ನು ಜತೆಯಾಗಿ ಅನುಭವಿಸಬೇಕು. ಒಟ್ಟು 1.10 ಲ.ರೂ. ದಂಡದಲ್ಲಿ 1 ಲ.ರೂ.ಗಳನ್ನು ಸಂತ್ರಸ್ತ ಬಾಲಕಿಗೆ ನೀಡಬೇಕು. 10 ಸಾ. ರೂ.ಗಳನ್ನು ನ್ಯಾಯಾಲಯದ ವೆಚ್ಚಕ್ಕೆ ಬಳಸಬೇಕು ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.