ಕಷ್ಟದಲ್ಲಿದ್ದರೂ ಅಕ್ಕಿ ಹಂಚಿದ ಮಲ್ಪೆಯ ಶಾರದಕ್ಕ
Team Udayavani, Apr 23, 2020, 5:40 AM IST
ಮಲ್ಪೆ : ಇಲ್ಲೊಬ್ಬ ಮಹಿಳೆ ತಾನು ಅತೀ ಕಷ್ಟದಲ್ಲಿದ್ದರೂ ತನ್ನಿಂದ ಆದಷ್ಟು ಕೂಡಿಟ್ಟ ಹಣದಿಂದ ನೆರೆಹೊರೆಯ ಸುಮಾರು 140 ಮನೆಗೆ ಅಕ್ಕಿಯನ್ನು ಹಂಚಿ ಮಾನವೀಯತೆಯನ್ನು ಮೆರೆದಿದ್ದಾರೆ.
ಮೀನುಗಾರಿಕೆ ಬಂದರಿನಲ್ಲಿ ಅಲ್ಲೊ ಇಲ್ಲೋ ಸಿಕ್ಕಿದ ಮೀನು, ಮರುವಾಯಿ ಗಳನ್ನು ಮಾರಿ ಪುಟ್ಟ ಗುಡಿಸಲಿನಲ್ಲಿ ಜೀವನ ಸಾಗಿಸುವ ಮಲ್ಪೆ ವಡಭಾಂಡೇಶ್ವರದ ನೆರ್ಗಿ ಸಮೀಪದ ಶಾರದಕ್ಕ ವಡಭಾಂಡೇಶ್ವರ ನೆರ್ಗಿಯಲ್ಲಿ ಯಾವುದೇ ಪ್ರಚಾರ ಬಯಸದೆ ತಲಾ 5ಕೆ.ಜಿ.ಯಂತೆ ಒಟ್ಟು 140 ಮನೆಗಳಿಗೆ ಅಕ್ಕಿಯನ್ನು ಹಂಚಿ ತನ್ನ ಮನೆ ಸೇರಿದ್ದಾರೆ. ವಿಷಯ ತಿಳಿದು ಅವರನ್ನು ಮಾತನಾಡಿಸಿದಾಗ ಕೋವಿಡ್-19 ಬಂದು ಎಲ್ಲರೂ ಕಷ್ಟದಲ್ಲಿದ್ದಾರೆ. ನನಗಿಲ್ಲದಿದ್ದರೂ ತನ್ನ ಕೈಯಿಂದ ಆದಷ್ಟು ಮಂದಿಗೆ ನೀಡಿದೆ, ಮುಂದೆಯೂ ಸಾಧ್ಯವಾದರೆ ಮತ್ತಷ್ಟು ಮಂದಿಗೆ ನೀಡುತೇ¤ನೆ ಎನ್ನುವ ಅವರು ನ್ಯಾಯಬೆಲೆ ಅಂಗಡಿಯಲ್ಲಿ ದೊರೆತ ಅಕ್ಕಿಯನ್ನೂ ಕೂಡ ಮನೆ ವಠಾರದ ಕೂಲಿ ಕಾರ್ಮಿಕರಿಗೆ ಹಂಚಿದ್ದಾರೆ ಎನ್ನಲಾಗಿದೆ. ಪ್ರಚಾರಕ್ಕಾಗಿ ಸೇವೆ ಮಾಡುವವರ ನಡುವೆ ಇಂಥವರು ಸಿಗುವುದು ಬಲು ಅಪರೂಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.