ದೇಗುಲದ ಗೋಪುರವೇ ವಲಸೆ ಕಾರ್ಮಿಕರ ಮಕ್ಕಳಿಗೆ ಜ್ಞಾನದೇಗುಲ
ಏಣಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
Team Udayavani, Nov 16, 2019, 5:27 AM IST
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
1912 ಶಾಲೆ ಆರಂಭ
ಶಾಲೆ ಪ್ರಾರಂಭದಲ್ಲಿ ಮರಳು-ಮಣ್ಣಿನ ಪಾಠ
ಕಟಪಾಡಿ: ಅಗ್ರಹಾರ ಏಣಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು ಹೆಚ್ಚಿನ ವಲಸೆ ಕೂಲಿ ಕಾರ್ಮಿಕರ ಮಕ್ಕಳಿಗೆ ಜ್ಞಾನ ದೇಗುಲವಾಗಿರುವುದೇ ವಿಶೇಷತೆ.
1912ರಲ್ಲಿ ಯೇಣಗುಡ್ಡೆ ಕಡವಿನ ಬಾಗಿಲು ಹೊಳೆದಂಡೆಯ ದಾಸ್ತಾನು ಕೊಠಡಿಯಲ್ಲಿ ವೈ. ನಂದ್ಯಪ್ಪ ಹೆಗ್ಡೆ ಅವರಿಂದ ಮರಳು-ಮಣ್ಣಿನ ಪಾಠ ಆರಂಭಗೊಂಡು ಅಗ್ರಹಾರ ವೀರಸ್ತಂಭ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಗೋಪುರದಲ್ಲಿ ಇರುವ ಈ ಶಾಲೆಗೆ ನಿರಂತರ 60 ವರ್ಷಗಳಿಂದ ಮುಖ್ಯೋಪಾಧ್ಯಾಯರಾಗಿದ್ದರು. ಮಾಲಿಂಗ ಹೆಗ್ಡೆ, ಕೃಷ್ಣಯ್ಯ ಹೆಗ್ಡೆ ಸ್ಥಾಪಕರಾಗಿದ್ದರು. ಹೊಂಗಾರದ ಬೀಜ(ಪೊಂಗಾರ್) ಮತ್ತು ಕರವೀರ ಕಾಯಿಯು ಅಕ್ಷರ ಜ್ಞಾನವನ್ನು ನೀಡುತ್ತಿದ್ದ ದಿನಗಳನ್ನು ಕೆಲವು ಹಳೆ ವಿದ್ಯಾರ್ಥಿಗಳು ಈ ಸಂದರ್ಭ ಸ್ಮರಿಸಿರುತ್ತಾರೆ.
ಉಡುಪಿ ಶ್ರೀ ಕೃಷ್ಣ ಮಠದ ನಂಟು
ಉಡುಪಿ ಶ್ರೀ ಕೃಷ್ಣ ಮಠದಿಂದ ಚಿಣ್ಣರ ಸಂತರ್ಪಣೆಯ ಶ್ರೀ ಕೃಷ್ಣ ಪ್ರಸಾದದ ರೂಪದಲ್ಲಿ ಅಕ್ಕಿಯು ಪ್ರತೀ ತಿಂಗಳು ಈ ಶಾಲೆಗೆ ಬರುತ್ತಿದ್ದು, ಮಕ್ಕಳ ಮಧ್ಯಾಹ್ನದ ಅನ್ನದಾಸೋಹವಾಗುತ್ತಿದೆ. ಸಮವಸ್ತ್ರವೂ ಮಠದಿಂದಲೇ ನೀಡಲಾಗುತ್ತಿದೆ. ಕೃಷ್ಣಜನ್ಮಾಷ್ಟಮಿಯ ಸಂದರ್ಭವೂ ಮುದ್ದುಕೃಷ್ಣ ವೇಷ ಸ್ಪರ್ಧೆ ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನೂ ಶ್ರೀ ಮಠವೇ ನೀಡುತ್ತಿದೆ.
ಮೂಲಭೂತ ಸವಲತ್ತುಗಳು
ಅಕ್ಷರ ದಾಸೋಹ ಕಟ್ಟಡ, ಸುಸಜ್ಜಿತ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಹೊಂದಿದ್ದು, ಸ್ವಂತ ಸ್ಥಳವನ್ನು ಹೊಂದಿಲ್ಲ. ದೇಗುಲದ ಗೋಪುರದಲ್ಲಿ ಶಾಲಾ ತರಗತಿ ಕೊಠಡಿಗಳನ್ನು ಹೊಂದಿದೆ.
ಶಾಲೆಯ ವಿವಿಧ ಸಾಧಕರು
ವಿಜಯಾ ಬ್ಯಾಂಕ್‌ನ ಚೇರ್ಮನ್ ವೈ.ಎಸ್. ಹೆಗ್ಡೆ, ಇಂಡಿಯನ್ ಆರ್ಮಿಯ ಬಸಪ್ಪ ಎನ್. ಹದಾರಿ, ಜಿ.ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರಪೂಜಾರಿ ಮೊದಲಾದವರು ಇದೇ ಕನ್ನಡ ಮಾಧ್ಯಮ
ಶಾಲೆಯಲ್ಲಿ ಕಲಿತವರು.
ಮಾಜಿ ಸಚಿವ ದಿ| ವಸಂತ ವಿ.ಸಾಲ್ಯಾನ್ ಹಾಗೂ ರಾಜ್ಯ ಸಚೇತಕರಾಗಿದ್ದ ದಿ|ಭಾಸ್ಕರ ಶೆಟ್ಟಿ ಸಹಿತ ಅನೇಕ ಗಣ್ಯರು ಈ ಶಾಲೆಯೊಂದಿಗೆ ನಿಕಟ ಬಾಂಧವ್ಯ ಇರಿಸಿಕೊಂಡಿದ್ದರು. 2015ರಲ್ಲಿ ಶತಮಾನೋತ್ಸವ ಸಂಭ್ರಮದ ಸಮಾರೋಪ ಕಂಡ ಈ ಶಾಲೆಯು ಹಲವು ಸಾಧಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿರುತ್ತದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಬಾಗಲಕೋಟೆಯ ತುರಡಗಿ ಮೂಲದ ನನಗೆ ಹೊರ ಜಿಲ್ಲೆಯಿಂದ ಬಂದರೂ ತಾರತಮ್ಯವೆಸಗದೆ ಉತ್ತಮ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣ ಈ ಕನ್ನಡ ಮಾಧ್ಯಮ ಶಾಲೆ ನೀಡಿದೆ. ಇದೀಗ ಇಂಡಿಯನ್ ಆರ್ಮಿಯಲ್ಲಿ 18 ವರ್ಷದಿಂದ ಸೇವೆಯನ್ನು ಸಲ್ಲಿಸುತ್ತಿದ್ದೇನೆ. ಶತಮಾನದ ಸಂದರ್ಭ ನನ್ನನ್ನು ಗುರುತಿಸಿ ಸಮ್ಮಾನಿಸಿದ್ದು ಬದುಕಿನ ಸಂತಸದ ಕ್ಷಣಗಳಲ್ಲೊಂದಾಗಿ.
-ಬಸಪ್ಪ ಎನ್. ಹದಾರಿ, ಸೈನಿಕ , ಹಳೆ ವಿದ್ಯಾರ್ಥಿ
ಶಾಲಾ ಆಡಳಿತ ಮಂಡಳಿಯ ದಕ್ಷ ಸೇವೆಯಿಂದ ಈ ಶಾಲೆ ಬೆಳೆದು ನಿಂತಿದೆ.ಐವರು ಗೌರವ ಶಿಕ್ಷಕರ ಸಹಿತ ವಿದ್ಯಾರ್ಥಿಗಳಿಗೆ ಉತ್ತಮ ಸವಲತ್ತುಗಳನ್ನು ಆಡಳಿತ ಮಂಡಳಿಯು ಸಮರ್ಥವಾಗಿ ನಿಭಾಯಿಸುತ್ತಿದೆ. 1ರಿಂದ 7ನೇ ತರಗತಿ ವರೆಗೆ ಶೇ.90ರಷ್ಟು ಹೊರ ಜಿಲ್ಲಾ ವಲಸೆ ಕೂಲಿ ಕಾರ್ಮಿಕರ ಮಕ್ಕಳೇ ನಮ್ಮ ವಿದ್ಯಾರ್ಥಿಗಳಾಗಿದ್ದಾರೆ.
-ಕೆ.ಸರೋಜಿನೀ ದೇವಿ,ಮುಖ್ಯೋಪಾಧ್ಯಾಯಿನಿ.
– ವಿಜಯ ಆಚಾರ್ಯ,ಉಚ್ಚಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್ ಪ್ರೌಢಶಾಲೆಗೆ 121ರ ಸಂಭ್ರಮ
ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ
ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ
112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.