ಉಡುಪಿ ಜಿಲ್ಲೆಗೆ ಬೇಕು ವಿಶ್ವವಿದ್ಯಾನಿಲಯ
ಪಶು ವೈದ್ಯಕೀಯ, ಮೀನುಗಾರಿಕಾ ವಿ.ವಿ. ಸ್ಥಾಪನೆ ಬೇಡಿಕೆ
Team Udayavani, Dec 21, 2020, 5:47 AM IST
ಸಾಂದರ್ಭಿಕ ಚಿತ್ರ
ಉಡುಪಿ ಜಿಲ್ಲೆಯಲ್ಲಿ ಸರಕಾರಿ ಸ್ವಾಮ್ಯದ ಒಂದೇ ಒಂದು ವಿ.ವಿ. ಇಲ್ಲ. ಅಂತಹ ಒಂದು ಪ್ರತಿಷ್ಠಿತ ಸಂಸ್ಥೆ ಆರಂಭವಾಗಬೇಕಾಗಿದೆ ಎನ್ನುವುದು ಜಿಲ್ಲೆಯ ಬಹು ಹಿಂದಿನ ಬೇಡಿಕೆ. ಜಿಲ್ಲೆಯಾಗಿ 25 ವರ್ಷ ಸಮೀಪಿಸುತ್ತಿರುವ ಹೊತ್ತಿಗೆ ಸರಕಾರ ರಜತೋತ್ಸವದ ಕೊಡುಗೆಯಾಗಿ ನೀಡಬೇಕು ಎನ್ನುವುದು ಜಿಲ್ಲೆಯ ಜನರ ಆಗ್ರಹ.
ಉಡುಪಿ: ಯಾವುದೇ ಸರಕಾರಿ ವಿಶ್ವವಿದ್ಯಾನಿಲಯ ಇಲ್ಲದ ಉಡುಪಿ ಜಿಲ್ಲೆಯಲ್ಲಿ ಮೀನುಗಾರಿಕೆ, ಪಶು ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಬೇಡಿಕೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಪ್ರಸ್ತುತ ರಾಜ್ಯದ ತುತ್ತತುದಿಯ ಬೀದರ್ ಜಿಲ್ಲೆಯಲ್ಲಿ ರಾಜ್ಯದ ಏಕೈಕ ಪಶು ವೈದ್ಯಕೀಯ ಮತ್ತು ಮೀನು ಗಾರಿಕೆ ವಿಜ್ಞಾನದ ವಿಶ್ವವಿದ್ಯಾನಿಲಯ ಇದೆ. ಇಡೀ ರಾಜ್ಯದ ಒತ್ತಡ ಇದರ ಮೇಲೆ ಬಿದ್ದಿದ್ದು, ಮೀನುಗಾರಿಕೆ ಅಷ್ಟೊಂದು ಇರದ ಪ್ರದೇಶದಲ್ಲಿ ಮಿನುಗಾರಿಕೆ ವಿ.ವಿ. ಇರುವು ದರಿಂದ ಪ್ರಯೋಜನ ಕರಾ ವಳಿ ಪ್ರದೇಶಕ್ಕೆ ಸಿಗಬೇಕು. ರಾಜ್ಯದ ಮೀನುಗಾರಿಕಾ ಪ್ರಧಾನ ಕಾರ್ಯ ಕ್ಷೇತ್ರಗಳಾದ ಕರಾವಳಿಯ ಮೂರು ಜಿಲ್ಲೆ ಗಳಲ್ಲಿ ಉಡುಪಿ ಕೇಂದ್ರ ಸ್ಥಾನದಲ್ಲಿದೆ. ಈ ಹಿನ್ನೆಲೆ ಯಲ್ಲಿ ಮೀನುಗಾರಿಕೆಯನ್ನು ಪ್ರತ್ಯೇಕಿಸಿ ಉಡುಪಿ ಜಿಲ್ಲೆಯಲ್ಲಿ ಸ್ಥಾಪಿಸಿ ದರೆ ಕರಾವಳಿಯುದ್ದಕ್ಕೂ ಇದರ ಪ್ರಯೋಜನ ಜನರಿಗೆ ಲಭ್ಯವಾಗಲಿದೆ ಎಂಬುದು ಸಾರ್ವಜನಿಕರ ಅಭಿಮತ. ಮೀನು ಗಾರಿಕೆಯ ಒಂದೇ ಕಾಲೇಜು ಇರುವುದರಿಂದ ಮೀನುಗಾರಿಕೆಗೆಂದೇ ಪ್ರತ್ಯೇಕ ವಿಶ್ವವಿದ್ಯಾನಿಲಯ ತೆರೆಯುವುದು ಕಷ್ಟ ಎಂಬ ಅಭಿಪ್ರಾಯವೂ ಕೇಳಿಬಂದಿದೆ.
ಕರಾವಳಿಯಲ್ಲಿದೆ ಅವಕಾಶ
ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೃಷಿ ಭೂಮಿ ಇದ್ದರೂ ಕೃಷಿಗೆ ಪೂರಕವಾದ ಪಶುಸಂಗೋಪನೆ, ಮೀನು ಗಾರಿಕೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅವಲಂಬಿಸಿ ಕೊಂಡಿದ್ದಾರೆ. ಆದರೆ ಇವರಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ಮಾಹಿತಿ ಪೂರೈಕೆಯಲ್ಲಿ ಕೊರತೆ ಇದೆ. ಇತ್ತೀಚೆಗಿನ ದಿನಗಳಲ್ಲಿ ದೇಸೀ ತಳಿಗಳ ಉಪಯುಕ್ತತೆ ಕುರಿತು ವಿಶೇಷ ಆಸಕ್ತಿ ಬೆಳೆಯುತ್ತಿದೆ. ಈ ಭಾಗದ ದೇಸೀ ತಳಿಗಳು ಕಣ್ಮರೆ ಯಾಗುವ ಸ್ಥಿತಿಯಲ್ಲಿವೆ. ಕರಾವಳಿಯ ಎಮ್ಮೆ, ಬನ್ನೂರು-ಮಂಡ್ಯ ಕುರಿ ತಳಿಗಳ ಮೇಲೆ ಸಂಶೋಧನೆ ನಡೆಸಲು ಸಾಕಷ್ಟು ಅವಕಾಶಗಳಿವೆ. ಇದಕ್ಕೆಲ್ಲಾ ಪಶು ಸಂಗೋಪನೆ ವಿಶ್ವವಿದ್ಯಾನಿಲಯವನ್ನು ಅವಿಭಜಿತ ಕನ್ನಡ ಜಿಲ್ಲೆಯಲ್ಲಿ ಒಂದಾದರೂ ಕಡೆ ಇರಬೇಕೆಂಬುದು ಜನರ ಆಗ್ರಹ.
ಬ್ರಹ್ಮಾವರ ಏಕೆ ಸೂಕ್ತ?
ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸುಮಾರು 35 ಎಕ್ರೆ, ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸುಮಾರು 100 ಎಕ್ರೆ ಭೂಮಿ ಇರುವುದರಿಂದ ಸರಕಾರಿ ಜಾಗವನ್ನು ಹುಡುಕುವ ಅಗತ್ಯವಿಲ್ಲ. ಇವೆರಡೂ ಕೃಷಿ, ಹೈನುಗಾರಿಕೆಗೆ ಪೂರಕವಾದ ಸಂಸ್ಥೆಗಳು. ಜಿಲ್ಲಾ ಕೇಂದ್ರಕ್ಕೆ ಸಮೀಪವೂ ಜಿಲ್ಲೆಯ ಮಧ್ಯ ಭಾಗದಲ್ಲಿಯೂ ಇರುವ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಿಂದಾಗಿ ಸುಲಭ ಸಂಪರ್ಕ ಸಾಧ್ಯ ಎನ್ನಲಾಗುತ್ತಿದೆ.
ದಕ್ಷಿಣ ಕರ್ನಾಟಕದ ಸಂಸ್ಥೆಗಳು
ಶಿವಮೊಗ್ಗ, ಹಾಸನ, ಬೆಂಗಳೂರು, ಪುತ್ತೂರು ಕೊçಲದ ಪಶುವೈದ್ಯಕೀಯ ಕಾಲೇಜು, ಬೆಂಗಳೂರಿನ ಹೈನುಗಾರಿಕ ವಿಜ್ಞಾನ ಕಾಲೇಜು, ಲಸಿಕೆ ತಯಾರಿಕೆ ಸಂಸ್ಥೆ, ನಾಲ್ಕು ಮೀನುಗಾರಿಕಾ ಸಂಸ್ಥೆಗಳಾದ ಮಂಗಳೂರಿನ ಮೀನುಗಾರಿಕಾ ಕಾಲೇಜು, ಬೆಂಗಳೂರು ಹೆಬ್ಟಾಳ, ಹೇಸರಘಟ್ಟ, ಅಂಕೋಲಾದ ಮೀನುಗಾರಿಕಾ ಸಂಶೋಧನ ಕೇಂದ್ರಗಳು, ತಿಪಟೂರು, ನಾಗಮಂಗಲ, ಮುಳುಬಾಗಿಲಿನ ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ, ತಿಪಟೂರು, ಗುಂಡ್ಲುಪೇಟೆ, ಹಾಸನದ ಪಶುಸಂಗೋಪನ ಪಾಲಿಟೆಕ್ನಿಕ್, ಮಂಗಳೂರು ಮತ್ತು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ, ಕೊಡಗಿನ ವನ್ಯಜೀವಿ ಚಿಕಿತ್ಸಾ ಸಂಸ್ಥೆ, ಶಿವಮೊಗ್ಗದ ಮಲೆನಾಡು ತಳಿ ಅಭಿವೃದ್ಧಿ ಸಂಸ್ಥೆ, ಜಾನುವಾರು ನಿಗೂಢ ಕಾಯಿಲೆಗಳ ಸಂಶೋಧನ ಕೇಂದ್ರ, ಕೂಡಿಗೆಯ ವನ್ಯಜೀವಿ ಸಂಶೋಧನ ಕೇಂದ್ರ.
ಉಡುಪಿ ಜಿಲ್ಲೆಯಲ್ಲಿ ಅಗತ್ಯವೇಕೆ?
ಬೀದರ್‌ನ ಏಕೈಕ ವಿ.ವಿ.; ಹೆಚ್ಚಿದ ರಾಜ್ಯದ ಒತ್ತಡ
ಉಡುಪಿ ಜಿಲ್ಲೆಯಲ್ಲಿ ಸರಕಾರಿ ವಿ.ವಿ.ಗಳೇ ಇಲ್ಲ
ಕರಾವಳಿಯ ಮೀನುಗಾರಿಕಾ ಚಟು ವಟಿಕೆಗಳನ್ನು ಬಲಪಡಿಸಲು ಪಶು ವೈದ್ಯಕೀಯ ವಿ.ವಿ. ಜತೆ ಸಂಲಗ್ನ ಗೊಳಿಸುವ ಅವಕಾಶ.
ಪ್ರಾಧ್ಯಾಪಕರು, ವೈದ್ಯರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೀದರ್‌ಗಿಂತ ಎಷ್ಟೋ ಪಟ್ಟು ಹೆಚ್ಚಿನ ಸೌಲಭ್ಯ ಹೊಂದಿದ ಕರಾವಳಿ ಪ್ರದೇಶ.
ನಮ್ಮ ದೃಷ್ಟಿ ಇದ್ದದ್ದು ಮೀನುಗಾರಿಕಾ ವಿ.ವಿ. ಸ್ಥಾಪನೆ ಕುರಿತು. ಪಶುವೈದ್ಯಕೀಯ ಮತ್ತು ಮೀನುಗಾರಿಕಾ ವಿ.ವಿ.ಯ ಹೊಸ ಪ್ರಸ್ತಾವನೆಯನ್ನು ಚರ್ಚಿಸುತ್ತೇವೆ.
– ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ಸಚಿವರು.
ಬೀದರ್‌ನಲ್ಲಿರುವ ಒಂದೇ ವಿ.ವಿ. ಯಲ್ಲಿ ಪಶು ವೈದ್ಯಕೀಯ ಮತ್ತು ಮೀನು ಗಾರಿಕಾ ಎರಡೂ ವಿಷಯ ಗಳು ಇರುವು ದರಿಂದ ದಕ್ಷಿಣ ಕರ್ನಾಟಕದಲ್ಲಿ ಇಂತಹ ವಿ.ವಿ. ಪ್ರಸ್ತಾವನೆ ಯನ್ನು ಸಚಿವರ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತರು ತ್ತೇನೆ. ಉಡುಪಿ ಜಿಲ್ಲೆಗೆ ಇಂತಹ ಒಂದು ಸಂಸ್ಥೆಯ ಅಗತ್ಯವಿದೆ.
– ಕೆ. ರಘುಪತಿ ಭಟ್, ಶಾಸಕರು, ಉಡುಪಿ
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.