ಅದಮಾರು ಮಠದ ಭಿತ್ತಿಗಳಿಗೆ ಸುಣ್ಣ, ಮಣ್ಣಿನ ಗಾರೆ
ಪರ್ಯಾಯಕ್ಕೆ ದೇಸೀ ತಂತ್ರಜ್ಞಾನದ ಸ್ಪರ್ಶ
Team Udayavani, Sep 18, 2019, 5:38 AM IST
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಪರ್ಯಾಯೋತ್ಸವಕ್ಕೆ ಪೀಠವೇರುವ ಯತಿಗಳ ಮಠವನ್ನು ನವೀಕರಿಸಿ ಅಲಂಕರಿಸುವ ಕ್ರಮವಿದೆ. ಮುಂದಿನ ಜ. 18ರಂದು ಅದಮಾರು ಮಠದ ಪರ್ಯಾಯ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅದಮಾರು ಮಠದಲ್ಲಿ ಇದಕ್ಕೆ ಬೇಕಾದ ಸಿದ್ಧತೆ ನಡೆಯುತ್ತಿದ್ದು, ಇದರಲ್ಲಿ ಮಠಕ್ಕೆ ಸುಣ್ಣ ಬಣ್ಣ ಬಳಿಯುವುದೂ ಒಂದು. ಈ ಬಾರಿ ಹಳೆಯ ಸಂಪ್ರದಾಯವಾದ ಸುಣ್ಣ- ಮಣ್ಣಿನ ಗಾರೆಯನ್ನು ನಿರ್ಮಿಸಲಾಗುತ್ತಿದೆ.
ಮಠದ ಒಳಸುತ್ತಿನ ಹೊರಗೆ ಇರುವ ನಾಲ್ಕೂ ಸುತ್ತಿನ ಗೋಡೆಯ (ತಲಾ 40×8 ಅಡಿ ವಿಸ್ತೀರ್ಣ) ಗಾರೆ ಅಲ್ಲಲ್ಲಿ ಹಾಳಾಗಿತ್ತು. ಇದನ್ನು ತೆಗೆದು ಈಗ ಸುಣ್ಣ, ಮಣ್ಣಿನ ಗಾರೆ ಹಾಕಲಾಗುತ್ತಿದೆ. ಮೂರು ಬದಿಯ ಕೆಲಸ ಪೂರ್ಣವಾಗಿದೆ, ಒಂದು ಬದಿ ಮಾತ್ರ ಬಾಕಿ ಇದೆ.
ಗಾರೆ ಮಾಡುವುದು ಹೀಗೆ
ಮಣ್ಣು, ಸುಣ್ಣದ ಗಾರೆ ಕ್ರಮ ತೀರ ಸರಳ. ಮಣ್ಣು, ಸುಣ್ಣ, ಹೊಯಿಗೆಯನ್ನು ಮಿಶ್ರ ಮಾಡಿ ಒಂದು ದಿನ ಕೊಳೆಯಲಿಡಬೇಕು. ಬಳಿಕ ಇದನ್ನು ಬಳಸಿ ಗಾರೆ. ಎರಡನೆಯ ಹಂತದಲ್ಲಿ ಸುಣ್ಣ, ಕೆಂಪು ಕಾವಿ, ಕೊಳೆತ ಬೆಲ್ಲ, ಕೆಸರು ಮಣ್ಣು ಮಿಶ್ರ ಮಾಡಿ ತೆಳುವಾದ ಗಾರೆ ಮಾಡುವುದು. ಗಾರೆಯ ಒಟ್ಟು ದಪ್ಪ ಮುಕ್ಕಾಲು ಇಂಚು ಇರುತ್ತದೆ. ಈ ಗಾರೆಗೆ ಸಿಮೆಂಟ್ ಗಾರೆಯಂತೆ ಹೆಚ್ಚಿನ ನೀರು ಬೇಕೆಂದಿಲ್ಲ. ಮಠದ ಒಳಭಾಗವಾದ ಕಾರಣ ಮಳೆ ನೀರು ಬಿದ್ದು ಹಾಳಾಗುವ ಪ್ರಶ್ನೆ ಇಲ್ಲ. ಇಲ್ಲಿ ಬಳಸುವ ಎಲ್ಲ ಕಚ್ಚಾ ಸಾಮಗ್ರಿಗಳು ಅಪ್ಪಟ ದೇಸೀ ಎಂಬುದೇ ಹೆಚ್ಚುಗಾರಿಕೆ.
ಗಾರೆಯನ್ನು ಕೊಡುವ ಮೊದಲು ಮೇಲ್ಪದರವನ್ನು ತೆಗೆಯುತ್ತಾರೆ. ಆಗ ಹಿಂದಿನ ಕಾಲದಲ್ಲಿ ರಚಿಸಿದ ಗೋಡೆಯ ಲಕ್ಷಣ ತೋರುತ್ತದೆ. ಅದರಲ್ಲಿ ಮಣ್ಣು, ಕೊಳೆತ ಬೆಲ್ಲ, ಹೊಯಿಗೆಯ ಜತೆ ಸಣ್ಣದಾಗಿ ಕತ್ತರಿಸಿದ ಮುಳಿಹುಲ್ಲೂ ಕಂಡುಬರುತ್ತಿದೆ.
ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಈಗ ನೆನಪಿನಲ್ಲಿ ಉಳಿದಿರುವ ಸಂಸ್ಕೃತಿ ಸಂರಕ್ಷಕ ವಿಜಯನಾಥ ಶೆಣೈಯವರು ಮಣಿಪಾಲದಲ್ಲಿ ನಿರ್ಮಿಸಿದ ಹೆರಿಟೇಜ್ ವಿಲೇಜ್, ಕಲಾವಿದ ಪುರುಷೋತ್ತಮ ಅಡ್ವೆಯವರು ತೋರಿಸಿದ ರಚನೆಗಳನ್ನು ನೋಡಿ ಸುಣ್ಣ, ಮಣ್ಣಿನ ಗಾರೆಯನ್ನು ಮಾಡಲು ಮುಂದಾಗಿದ್ದಾರೆ.
ಸುಣ್ಣ, ಮಣ್ಣಿನ ಗಾರೆ ಉತ್ತಮ ಬಾಳಿಕೆ ಬರುತ್ತದೆಂದು ಹೇಳುತ್ತಾರೆ. ನಾವು ಪ್ರಾಯೋಗಿಕವಾಗಿ ಮಾಡಿ ನೋಡಬೇಕು. ಇದು ನಮ್ಮ ಪ್ರಾಚೀನರ ತಂತ್ರಜ್ಞಾನವನ್ನು ಉಳಿಸುವ ಪ್ರಯತ್ನವೂ ಹೌದು, ದೇಸೀ ತಂತ್ರಜ್ಞಾನಕ್ಕೆ ತೋರುವ ಗೌರವವೂ ಹೌದು. ಗೋಡೆಯ ಮೇಲೆ ಚಿತ್ರವನ್ನು ಬಿಡಿಸಬೇಕೋ ಎಂದು ನಿರ್ಧರಿಸಿಲ್ಲ. ಇದನ್ನು ಪರ್ಯಾಯಕ್ಕೆಂದೇ ಮಾಡಿರುವುದಲ್ಲ. ಮುಂದೆ ಎಲ್ಲೆಲ್ಲಿ ಹಾಳಾಗುತ್ತದೋ ಅಲ್ಲಲ್ಲಿ ಪ್ರತಿವರ್ಷ ದುರಸ್ತಿ ಮಾಡಬೇಕು. ಇದಕ್ಕೆ ವರ್ಷದಲ್ಲಿ ಒಂದು ತಿಂಗಳನ್ನು ನಿರ್ವಹಣೆಗಾಗಿ ನಿಗದಿಪಡಿಸಬೇಕು. ಹಾಗಾದಾಗ ಪರ್ಯಾಯಕ್ಕೆಂದು ಮಾಡುವ ಸಿದ್ಧತೆ ಕಡಿಮೆಯಾಗುತ್ತದೆ. ಈಗಲೂ ಹಾಳಾದ ಹೆಂಚುಗಳನ್ನು ಮಾತ್ರ ಹೊಸದಾಗಿ ಹಾಕಲಾಗುತ್ತದೆ.
– ಶ್ರೀಈಶಪ್ರಿಯತೀರ್ಥ ಶ್ರೀಪಾದರು,
ಕಿರಿಯ ಯತಿ, ಶ್ರೀ ಅದಮಾರು ಮಠ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.