ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ನಲ್ಲಿ ಕಳ್ಳತನ; 1.50ಲಕ್ಷದ ಮದ್ಯ ಕಳವು
Team Udayavani, Apr 24, 2020, 4:20 PM IST
ಕೋಟ: ಮಾಬುಕಳ ಸಮೀಪ ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ಗೆ ಕಳ್ಳರು ನುಗ್ಗಿ ಸುಮಾರು 1.50 ಲಕ್ಷ ಮೌಲ್ಯದ ಮದ್ಯವನ್ನು ಅಪಹರಿಸಿದ ಘಟನೆ ಎ.22ರಂದು ಸಂಭವಿಸಿದೆ. ಬಾರ್ ನ ಹಿಂಬದಿಯ ಕಿಟಕಿ ಹಾಗೂ ಬಾರ್ ನ ಹಂಚಿನ ಮಾಡಿನ ಹಂಚು ತೆಗೆದು ಒಳನುಗ್ಗಿ 266.735 ಲೀಟರ್ ನಷ್ಟು ಮದ್ಯ ತುಂಬಿರುವ ಸುಮಾರು 31 ಬಾಕ್ಸ್ ಹಾಗೂ 44.250 ಲೀಟರ್ ಬಿಯರ್ ಇರುವ 3 ಬಾಕ್ಸ್ ಕಳುವಾಗಿದ್ದು ಅದರ ಮೌಲ್ಯ 1,50,000/ ರೂಪಾಯಿ ಆಗಿರುತ್ತದೆ.
ಗುರುವಾರ ಅಪರಾಹ್ನ ಬಾರ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಭೋಜ ದೇವಾಡಿಗರವರ ಕರೆ ಮಾಡಿ ಬಾರ್ ನ ಹಿಂಬದಿಯ ಕಿಟಕಿ ಮುರಿದಿದ್ದು ಮೇಲಿನ ಹಂಚು ತೆಗೆದ ಸ್ಥಿತಿಯಲ್ಲಿ ಇರುವುದಾಗಿ ತಿಳಿಸಿದ ಮೇರೆಗೆ ಬಾರ್ ನ ಮಾಲೀಕರು ಸ್ಥಳಕ್ಕಾಗಮಿಸಿ ಕೋಟ ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು ಅವರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಸಿ ಟಿವಿ ಕಣ್ತಪ್ಪಿಸಿ ಕಳ್ಳತನ ; ಬಾರ್ ನ ಕಟ್ಟಡ ಅತ್ಯಂತ ಹಳೆಯದಾಗಿದ್ದು ಹಂಚಿನ ಮೇಲ್ಚಾವಣಿ ಹೊಂದಿದ್ದರಿಂದ ಕಳವು ಮಾಡಲು ಸುಲಭವಾಗಿದೆ ಹಾಗೂ ಕಟ್ಟಡದ ಎದುರುಗಡೆ ಸಿಸಿ ಟಿವಿ ಅಳವಡಿಸಿದ್ದರೂ ಹಿಂಬದಿಯಿಂದ ಕ್ಯಾಮಾರ ಕಣ್ತಪ್ಪಿಸಿ ಕೃತ್ಯವೆಸಗಲಾಗಿದೆಯ ಹಾಗೂ ಸ್ಕೂಟಿಯೊಂದರಲ್ಲಿಇಬ್ಬರು ವ್ಯಕ್ತಿಗಳು ಆಗಮಿಸಿದ ಚಿಕ್ಕ ಕುರುಹು ಮಾತ್ರ ಲಭ್ಯವಾಗಿದೆ
ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.