ಸಗ್ರಿ ವಾರ್ಡ್‌ನ ಕೆಲವೆಡೆ ಹತ್ತು ದಿನಕ್ಕೊಮ್ಮೆಯೂ ನೀರಿಲ್ಲ
ಬಾವಿಗಳಿದ್ದರೂ ಸಾಲದ ನೀರು; ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳ ಹರಸಾಹಸ
Team Udayavani, May 5, 2019, 6:21 AM IST
ಉಡುಪಿ: ಸಗ್ರಿ ವಾರ್ಡ್‌ನ ಕೆಲವೊಂದು ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ನಾಗರಿಕರು ನೀರಿಗಾಗಿ ಪರದಾಡುತ್ತಿದ್ದರೆ, ಸಮಸ್ಯೆಯನ್ನು ನಿವಾರಿಸಲು ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.
ಸಗ್ರಿ ವಾರ್ಡ್ 3,527 ಜನಸಂಖ್ಯೆ ಹೊಂದಿದೆ. 1,000ಕ್ಕೂ ಹೆಚ್ಚಿನ ಮನೆ ಹಾಗೂ 40ಕ್ಕೂ ಹೆಚ್ಚು ಫ್ಲ್ಯಾಟ್‌ಗಳಿವೆ. ಸುಮಾರು 50 ವಾಣಿಜ್ಯ ಸಂಕಿರ್ಣಗಳಿವೆೆ. ಇಲ್ಲಿ ಮನೆಗಳಿಗಿಂತ ಹೆಚ್ಚಾಗಿ ಹೊಟೇಲ್‌ಗಳು ನೀರನ್ನು ಬಳಕೆ ಮಾಡಲಾಗುತ್ತಿವೆ. ಮೂರು ದಿನಕ್ಕೊಮ್ಮೆ ನೀರು ಬರುತ್ತಿದ್ದರೂ ವಾರ್ಡ್‌ನ ಕೆಲವೊಂದು ಪ್ರದೇಶಗಳಿಗೆ 10 ದಿನಗಳಿಂದ ನೀರು ಪೂರೈಕೆಯಾಗುತ್ತಿಲ್ಲ .
ನೀರು ಬಳಕೆಗೆ ನೂರು ಬಾರಿ ಯೋಚಿಸಬೇಕು
ಎ. 17ರ ವರೆಗೆ ನೀರಿನ ಸಮಸ್ಯೆ ಇರಲಿಲ್ಲ. ಕೊನೆಯ ಪಕ್ಷ ಎರಡು ದಿನಕ್ಕೊಮ್ಮೆಯಾದರೂ ಬರುತ್ತಿತ್ತು. ಆದರೆ ಇದೀಗ ವಿದ್ಯಾರತ್ನ ನಗರಕ್ಕೆ ನೀರು ಬಾರದೇ 15 ದಿನಗಳಾಗಿವೆ. ಒಂದು ಬಿಂದಿಗೆ ನೀರು ಬಳಸಬೇಕಾದರೂ 100 ಬಾರಿ ಯೋಚನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಮನೆಗೆ ನೆಂಟರೂ ಬರುವಂತಿಲ್ಲ. ಬಂದರೂ ನಾವೇ ಅವರನ್ನು ಹಿಂದುರುಗಿ ಎಂದು ಮನವಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ವಿದ್ಯಾರತ್ನ ನಗರದ ಪ್ರಜ್ಞಾ ನಾಮಕರಣಕ್ಕೆ ಸಮಸ್ಯೆ ಮನೆಯಲ್ಲಿ 30 ದಿನದ ಪುಟ್ಟ ಮಗುವಿದೆ. ನೀರಿನ ಸಮಸ್ಯೆಯಿಂದ ಇನ್ನೂ ನಾಮಕರಣ ಕಾರ್ಯಕ್ರಮ ನಡೆದಿಲ್ಲ.
ನಗರಸಭೆಯಿಂದ ಮೂರು ದಿನಕ್ಕೆ ಒಮ್ಮೆ ಬರುವ ನೀರು ಅಡುಗೆ ಹಾಗೂ ನಿತ್ಯ ಕಾರ್ಯಗಳಿಗೆ ಸಾಕಾಗುತ್ತಿಲ್ಲ. ಮನೆಯಲ್ಲಿ ಮಗುವಿರುವುದರಿಂದ ನೀರಿನ ಬಳಕೆ ಹೆಚ್ಚಿದೆ. ಇದರಿಂದಾಗಿ ವಾರದಲ್ಲಿ 2 ಬಾರಿ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದೇವೆ ಎನ್ನು ತ್ತಾರೆ ಮೂಡು ಸಗ್ರಿ ನಿವಾಸಿ ವೀಣಾ ಶೆಟ್ಟಿ.
ಎಲ್ಲಿಗೂ ಹೋಗಲಾಗುತ್ತಿಲ್ಲ
ಮೂರು ದಿನಕೊಮ್ಮೆ ನೀರು ಬರುತ್ತಿರುವುದರಿಂದ ಯಾವುದೇ ಸಮಾರಂಭಕ್ಕೆ ಹೋಗುವಂತಿಲ್ಲ. ಕಳೆದ ಬಾರಿಗಿಂತ ಈ ಬಾರಿ ನೀರಿನ ಸಮಸ್ಯೆ ಹೆಚ್ಚಾಗಿದೆ. ರಾತ್ರಿ-ಹಗಲು ನೀರಿಗಾಗಿ ಪರದಾಡಬೇಕಾಗಿದೆ. ಇನ್ನೂ ಟ್ಯಾಂಕರ್ ನೀರು ಎಷ್ಟು ಗಂಟೆಗೆ ಬರುತ್ತದೆಯೋ ಅನ್ನುವ ಚಿಂತೆಯಲ್ಲಿ ದಿನ ಕಳೆಯಬೇಕಾಗಿದೆ ಎನ್ನುತ್ತಾರೆ ಚಕ್ರತೀರ್ಥ ನಗರದ ನಿವಾಸಿ ವಾಣಿಶ್ರೀ.
ಟ್ಯಾಂಕ್ ಸಂಖ್ಯೆ ಹೆಚ್ಚಳ
ನಮ್ಮದು 4 ಸೆಂಟ್ಸ್ ಜಾಗದಲ್ಲಿ ಪುಟ್ಟ ಮನೆ. ಆರು ಮಂದಿ ವಾಸಿಸಲು ಏನೂ ಸಮಸ್ಯೆ ಇಲ್ಲ. ಆದರೆ ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಮನೆಯಲ್ಲಿ ಮನುಷ್ಯರಿಗಿಂತ ಹೆಚ್ಚು ಟ್ಯಾಂಕ್‌ಗಳಿವೆ. ಇಷ್ಟಾದರೂ ನೀರು ಮಾತ್ರ ಸಾಕಾಗುತ್ತಿಲ್ಲ ಎನ್ನುತ್ತಾರೆ ವಿಜಯಲಕ್ಷ್ಮೀ.
ಟ್ಯಾಂಕರ್ ಮೂಲಕ ಪೂರೈಕೆ
ಸಗ್ರಿ ವಾರ್ಡ್‌ನ ವಿದ್ಯಾರತ್ನ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಈ ಪ್ರದೇಶದಲ್ಲಿರುವ 15 ಮನೆಗಳಿಗೆ ಕಳೆದ 10 ದಿನಗಳಿಂದ ನೀರು ಪೂರೈಕೆಯಾಗುತ್ತಿಲ್ಲ. ಜನರು ಕರೆ ಮಾಡಿ ನೀರು ಕೊಡುವಂತೆ ಮನವಿ ಮಾಡುತ್ತಾರೆ. ಸಾಧ್ಯವಾದಷ್ಟು ಮಟ್ಟಿಗೆ ಟ್ಯಾಂಕರ್ ಮೂಲಕ ಪೂರೈಕೆಯಾಗುತ್ತಿದೆ. ಎತ್ತರ ಪ್ರದೇಶವಾಗಿರುವುದರಿಂದ ಬೇಸಗೆ ಕಾಲದಲ್ಲಿ ನೀರಿನ ಕೊರತೆ ಈ ಪ್ರದೇಶದಲ್ಲಿ ತುಸು ಹೆಚ್ಚು.
– ಭಾರತಿ ಪ್ರಶಾಂತ, ನಗರಸಭೆ ಸದಸ್ಯೆ ಉಡುಪಿ
ಜನರ ಬೇಡಿಕೆಗಳು
– ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ
– ಕೊಳವೆ ಬಾವಿಗೆ ಆಗ್ರಹ
– ಆಯ್ದ ಪ್ರದೇಶಗಳಿಗೆ ಟ್ಯಾಂಕರ್ ನೀರು
– ಎರಡು ದಿನಕ್ಕೊಮ್ಮೆ ನೀರು ಕೊಡಿ
– ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.