Hebri ಪೇಟೆಯಲ್ಲೇ ನೆಟ್ವರ್ಕಿಲ್ಲ! ಇಲ್ಲಿನ ಕೆಲವು ಕಡೆ ಮನೆಯೊಳಗೆ ಫೋನ್‌ ಬಳಸುವಂತಿಲ್ಲ!

ಕಚೇರಿಗಳಲ್ಲಿ ಪರದಾಟ, ಶೂನ್ಯ ನೆಟ್ವರ್ಕ್‌ ಪ್ರದೇಶ ಹೆಚ್ಚಿದೆ

Team Udayavani, Jan 13, 2025, 2:35 PM IST

6

ಹೆಬ್ರಿ: ತಾಲೂಕು ಕೇಂದ್ರವಾದ ಹೆಬ್ರಿಯ ಹೃದಯ ಭಾಗದಲ್ಲಿಯೇ ನೆಟ್‌ವರ್ಕ್‌ ಸಮಸ್ಯೆ ಕಾಡುತ್ತಿದೆ. ಹೀಗಿರುವಾಗ ಹಳ್ಳಿಗಳ ಕಥೆ ಕೇಳಬೇಕಾ? ಇಲ್ಲಿ ಬಿಎಸ್‌ಎನ್‌ಎಲ್‌ ಒಂದೇ ಸಮಸ್ಯೆಯಲ್ಲ, ಯಾವುದೇ ಕಂಪೆನಿಗಳ ಗ್ರಾಹಕರಾದರೂ ಸಮಸ್ಯೆ ತಪ್ಪಿದ್ದಲ್ಲ.

ಹೆಬ್ರಿ ತಾಲೂಕು ಕಚೇರಿ ಪರಿಸದರ ಮನೆಗಳಲ್ಲಿ ಮನೆಯಿಂದ ಹೊರಗೆ ಬಂದರೆ ಮಾತ್ರ ಫೋನ್‌ ರಿಂಗ್‌ ಆಗುತ್ತದೆ. ಇದು ಏರ್‌ಟೆಲ್‌ ಸಮಸ್ಯೆ ಇರಬಹುದು ಎಂದು ಕೆಲವರು ಜಿಯೋಗೆ ಪೋರ್ಟ್‌ ಮಾಡಿಕೊಂಡರು. ಆದರೆ, ಸಮಸ್ಯೆ ಕಂಪೆನಿಯದ್ದಲ್ಲ, ನೆಟ್ವರ್ಕ್‌ನದು! ಆಧುನಿಕ ತಾ‌ಂತ್ರಿಕತೆ ಇಷ್ಟೊಂದು ಬೆಳೆದಿದ್ದರೂ ಈಗಲೂ ಫೋನ್‌ ಕರೆ ಸ್ವೀಕರಿಸಲು ಮನೆಯ ಮಹಡಿಯೋ, ಮಾರ್ಗದ ಬದಿಗೋ ಹೋಗಬೇಕಾದ ಪರಿಸ್ಥಿತಿ ಪೇಟೆಯಲ್ಲೇ ಇದೆ.

ಸುತ್ತಮುತ್ತ ಎಲ್ಲೆಡೆ ಸಮಸ್ಯೆ
ಹೆಬ್ರಿ ಹೃದಯ ಭಾಗದ ಸಮೀಪ‌ ಹುತ್ತುರ್ಕೆ, ಬ್ಯಾಣ, ಜರ್ವತ್ತು, ಇಂದಿರಾನಗರ ಸುತ್ತಮುತ್ತ ಪ್ರದೇಶದಲ್ಲಿ ನಿರಂತರ ನೆಟ್‌ ವರ್ಕ್‌ ಸಮಸ್ಯೆಯಿಂದ ಜನ ಹೈರಾಣಾಗಿದ್ದಾರೆ. ಪ್ರಮುಖ ಪ್ರದೇಶಗಳಲ್ಲಿ ಟವರ್‌ಗಳು ಆಗಬೇಕು ಎಂಬ ಕೂಗು ಕೇಳಿ ಬರುತ್ತಿದ್ದು ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ನೆಟ್‌ ವರ್ಕ್‌ ಕಂಪೆನೆಗಳು ಕಾರ್ಯಪ್ರವೃತ್ತರಾಗಬೇಕಾಗಿದೆ.

ನೆಟ್‌ವರ್ಕ್‌ ಸಮಸ್ಯೆ ಬಗ್ಗೆ ಈಗಾಗಲೇ ಹಲವಾರು ಬಾರಿ ವರದಿ ಮಾಡಲಾಗಿದೆ. ಜನಪ್ರತಿನಿಧಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ವಿನಹಃ ಯಾವುದೇ ಪ್ರಯೋಜವಾಗಿಲ್ಲ .

ಶೂನ್ಯ ನೆಟ್ವರ್ಕ್‌ ಪ್ರದೇಶ!
ಅಚ್ಚರಿ ಎಂದರೆ ಪ್ರಧಾನ ರಸ್ತೆಯ ಕೆಲವು ಪ್ರದೇಶಗಳಲ್ಲಿ ಯಾವುದೇ ಕಂಪೆನಿಯ ನೆಟ್‌ವರ್ಕ್‌ ಸಿಗುತ್ತಿಲ್ಲ. ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಹೆಬ್ರಿ ಸಮೀಪ‌ದ ಜರ್ವತ್ತು ಪ್ರದೇಶದಲ್ಲಿ ಯಾರದಾದರೂ ಕರೆ ಬಂದರೆ ಮಾತನಾಡಲಾಗುತ್ತಿಲ್ಲ. ಈ ಪ್ರದೇಶದಲ್ಲಿ ಬಸ್ಸಿನಲ್ಲಿರುವ ಹೆಚ್ಚಿನ ಜನರು ಹಲೋ ಹಲೋ ಎಂದು ಬೊಬ್ಬಿಡಬೇಕಾಗುತ್ತದೆ. ಅದೇ ರೀತಿ ಹೆಬ್ರಿಯಿಂದ ಸೋಮೇಶ್ವರ ಹೋಗುವಾಗ ಇಕ್ಕೋಡ್ಲು ಪರಿಸರದಲ್ಲಿ ಹಾಗೂ ಉಡುಪಿಗೆ ಹೋಗುವಾಗ ಪಾಡಿಗಾರ ಪ್ರದೇಶ‌ದಲ್ಲಿ ಶೂನ್ಯ ನೆಟ್‌ ವರ್ಕ್‌ ಸಮಸ್ಯೆ ಕಂಡುಬರುತ್ತಿದೆ.

ಕಚೇರಿ ಕೆಲಸಗಳು ವಿಳಂಬ
ಅಂಚೆ ಕಚೇರಿ, ಗ್ರಾಮ ಪಂಚಾಯತ್‌, ತಾಲೂಕು ಕಚೇರಿ, ಬ್ಯಾಂಕ್‌ಗಳು ಸೇರಿದಂತೆ ಎಲ್ಲ ಕಚೇರಿಗಳಲ್ಲಿ ನೆಟ್‌ ವರ್ಕ್‌ ಸಮಸ್ಯೆ ಹೇಳತೀರದಂತಾಗಿದೆ. ಕಚೇರಿ ಕೆಲಸಗಳಿಗೆ ಬಂದ ಜನ ನಿತ್ಯ ಕಾದು ಕೆಲಸವಾಗದೆ ಹಿಂದಿರುಗಿದ ಘಟನೆಗಳಿವೆ. ಬಿಎಸ್ಸೆನ್ನೆಲ್‌ ಮೊದಲಾದ ನೆಟ್‌ ವರ್ಕ್‌ನಿಂದ ಬೇಸತ್ತ ಕೆಲವರು ಖಾಸಗಿ ನೆಟ್‌ವರ್ಕ್‌ ಮೊರೆಹೋಗಿದ್ದಾರೆ. ಖಾಸಗಿ ಕಂಪೆನಿಯಲ್ಲಿದ್ದು ಮನೆಯಲ್ಲಿ ಉದ್ಯೋಗ ಮಾಡುವ ಹೆಚ್ಚಿನವರು ಕಂಪನಿಗಳಿಂದ ಬರುವ ಯಾವುದೇ ಸಂದೇಶವನ್ನು ಅಥವಾ ಇಮೇಲ್‌ಗ‌ಳನ್ನು ಕಳುಹಿಸಲು ಪರದಾಡುವಂತಹ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಕೆಲವರು ಖಾಸಗಿ ಬ್ರಾಡ್‌ ಬ್ಯಾಂಡ್‌ ನೆಟ್‌ ವರ್ಕ್‌ ಬಳಸುತ್ತಿದ್ದಾರೆ.

ನಿಮ್ಮೂರಲ್ಲೂ ನೆಟ್ವರ್ಕ್‌ ಸಮಸ್ಯೆಯೇ?
ನಿಮ್ಮೂರಲ್ಲೂ ನೆಟ್‌ವರ್ಕ್‌ ಸಮಸ್ಯೆಯಿದ್ದರೆ ಕನ್ನಡದಲ್ಲಿ ಟೈಪ್‌ ಮಾಡಿ ವಾಟ್ಸ್‌ಆ್ಯಪ್‌ ಸಂಖ್ಯೆ 6362906071ಗೆ ಹೆಸರು, ಊರು ನಮೂದಿಸಿ ಕಳುಹಿಸಿ.

-ಹೆಬ್ರಿ ಉದಯಕುಮಾರ್‌ ಶೆಟ್ಟಿ

ಟಾಪ್ ನ್ಯೂಸ್

eart

Japan; ಕ್ಯುಶು ಪ್ರದೇಶದಲ್ಲಿ 6.9 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ!

Udupi: ಗೋವಿನ ಮೇಲಿನ ಕ್ರೌರ್ಯ ಖಂಡಿಸಿದ ಮಠಾಧೀಶರು

Udupi: ಗೋವಿನ ಮೇಲಿನ ಕ್ರೌರ್ಯ ಖಂಡಿಸಿದ ಮಠಾಧೀಶರು

baby 2

Brahmin welfare panel; 4 ಮಕ್ಕಳು ಪಡೆದು 1 ಲಕ್ಷ ರೂ. ಬಹುಮಾನ ಗೆಲ್ಲಿ!

South Africa squad announced for Champions Trophy 2025

Champions Trophy: ದ.ಆಫ್ರಿಕಾ ತಂಡ ಪ್ರಕಟ; ಇಬ್ಬರು ಸ್ಟಾರ್‌ ವೇಗಿಗಳಿಗಿಲ್ಲ ಸ್ಥಾನ

Sankranti Special: ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಸಿಹಿ ಪೊಂಗಲ್‌, ಗೆಣಸಿನ ಹೋಳಿಗೆ

Sankranti Special: ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಸಿಹಿ ಪೊಂಗಲ್‌, ಗೆಣಸಿನ ಹೋಳಿಗೆ

Vijyanagara-DC

Viral Video: ವೇದಿಕೆಯಲ್ಲಿ ಕುಳಿತಿದ್ದ ಡಿಸಿಯನ್ನೇ ಗದರಿಸಿ ಕಳುಹಿಸಿದ ಸಿಎಂ ಸಿದ್ದರಾಮಯ್ಯ!

1-bangla

India ತಿರುಗೇಟು; ಬಾಂಗ್ಲಾದೇಶ ರಾಯಭಾರಿಗೆ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೋವಿನ ಮೇಲಿನ ಕ್ರೌರ್ಯ ಖಂಡಿಸಿದ ಮಠಾಧೀಶರು

Udupi: ಗೋವಿನ ಮೇಲಿನ ಕ್ರೌರ್ಯ ಖಂಡಿಸಿದ ಮಠಾಧೀಶರು

Udupi: ವಿಶೇಷ ಕುಣಿತ ಭಜನೋತ್ಸವಕ್ಕೆ ಚಾಲನೆ ನೀಡಿದ ಪುತ್ತಿಗೆ ಶ್ರೀ

Udupi: ವಿಶೇಷ ಕುಣಿತ ಭಜನೋತ್ಸವಕ್ಕೆ ಚಾಲನೆ ನೀಡಿದ ಪುತ್ತಿಗೆ ಶ್ರೀ

9(1

Manipal: ಮಕ್ಕಳ ಪಾರ್ಕ್‌ ಉರುಳಿದೆ, ಚಿಟ್ಟೆ ಪಾರ್ಕ್‌ ಎಲ್ಲಿದೆ?

Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ

Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ

Udupi: ದಿಲ್ಲಿಯ ಗಣರಾಜ್ಯೋತ್ಸವಕ್ಕೆ 80 ಬಡಗಬೆಟ್ಟು ಗ್ರಾ.ಪಂ.ಅಧ್ಯಕ್ಷರು

Udupi: ದಿಲ್ಲಿಯ ಗಣರಾಜ್ಯೋತ್ಸವಕ್ಕೆ 80 ಬಡಗಬೆಟ್ಟು ಗ್ರಾ.ಪಂ.ಅಧ್ಯಕ್ಷರು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

1-king

Hosanagar; ತೋಟದಲ್ಲಿ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷ

eart

Japan; ಕ್ಯುಶು ಪ್ರದೇಶದಲ್ಲಿ 6.9 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ!

Udupi: ಗೋವಿನ ಮೇಲಿನ ಕ್ರೌರ್ಯ ಖಂಡಿಸಿದ ಮಠಾಧೀಶರು

Udupi: ಗೋವಿನ ಮೇಲಿನ ಕ್ರೌರ್ಯ ಖಂಡಿಸಿದ ಮಠಾಧೀಶರು

rape 1

Chhattisgarh; 4 ವರ್ಷದ ಬಾಲಕಿ ಮೇಲೆ 10,13 ವರ್ಷದ ಹುಡುಗರಿಬ್ಬರಿಂದ ಲೈಂಗಿ*ಕ ದೌರ್ಜನ್ಯ

ಕೆಎ-11-1977: ಇದು ವಾಹನ ಸಂಖ್ಯೆಯಲ್ಲ, ಸಿನಿಮಾ ಟೈಟಲ್

ಕೆಎ-11-1977: ಇದು ವಾಹನ ಸಂಖ್ಯೆಯಲ್ಲ, ಸಿನಿಮಾ ಟೈಟಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.