Belman: ಈ ಮನೆಗೆ ಸೂರೇ ಇಲ್ಲ, ಟಾರ್ಪಾಲೇ ಹೊದಿಕೆ!
ನಂದಳಿಕೆ ಅಬ್ಬನಡ್ಕದ ಪರಿಶಿಷ್ಟ ಪಂಗಡದ ಕುಟುಂಬ ಜೋಪಡಿಯೇ ನೆಲೆ; ಗೈರಾದ ವಿದ್ಯಾರ್ಥಿನಿಯ ಕರೆತರಲು ಹೋದ ಶಿಕ್ಷಕರಿಗೆ ಕಂಡ ಸಂಕಷ್ಟ
Team Udayavani, Aug 6, 2024, 4:44 PM IST
ಬೆಳ್ಮಣ್: ನಂದಳಿಕೆ ಅಬ್ಬನಡ್ಕದಲ್ಲಿನ ಪರಿಶಿಷ್ಟ ಪಂಗಡದ ಕುಟುಂಬವೊಂದು ಸರಿಯಾದ ಸೂರಿಲ್ಲದೆ ಆಗಲೋ ಈಗಲೋ ಎನ್ನುವಂತಿರುವ ಟಾರ್ಪಾಲು ಹೊದಿಕೆಯ ಜೋಪಡಿಯಲ್ಲಿ ವಾಸವಾಗಿದೆ. ಸುಗುಣ ಎಂಬವರ ಮನೆಗೆ ಸಂಪೂರ್ಣ ಟಾರ್ಪಾಲು ಹೊದಿಸಲಾಗಿದೆ. ಬೆಳ್ಮಣ್ ಸರಕಾರಿ ಪ್ರೌಢಶಾಲೆಯ ಅಧ್ಯಾಪಕರ ತಂಡ ಈ ಗಂಭೀರ ವಿದ್ಯಮಾನವನ್ನು ಪತ್ತೆ ಹಚ್ಚಿದೆ.
ಬೆಳಕಿಗೆ ಬಂದ ಬಗೆ
ದಿ| ಗೋಪಾಲ ಹಾಗೂ ಸುಗುಣ ಇವರ ಪುತ್ರಿ ಶೋಭಾ ತರಗತಿಗೆ ಗೈರಾಗುತ್ತಿದ್ದಳು. ವಿಶೇಷ ದಾಖಲಾತಿ ಆಂದೋಲನದಡಿ ಶಾಲೆಯ ತಂಡ ಬೆಳ್ಮಣ್ ರೋಟರಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರ ಜತೆ ಆಕೆಯ ಮನೆಗೆ ಭೇಟಿ ನೀಡಿದಾಗ ವಾಸ್ತವ ಬಯಲಾಯಿತು. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಈ ಮನೆಯಲ್ಲಿ ತಾಯಿ ಮತ್ತು ಮಗಳು ವಾಸವಾಗಿದ್ದಾರೆ. ಶೋಭಾಳಿಗೆ ಓದಲು ಬಿಡಿ ಮಲಗಲೂ ಒಂದಿಂಚು ಜಾಗವಿಲ್ಲದ ಸ್ಥಿತಿ ಇಲ್ಲಿದೆ. ಮನೆಯಲ್ಲಿ ತಾಯಿ ಮಾತ್ರ ಇರುವುದರಿಂದ ಶೋಭಾಳಿಗೆ ವಿದ್ಯಾರ್ಥಿ ನಿಲಯ ಸೇರುವಂತೆಯೂ ಇಲ್ಲ.
ನೆರವಿಗೆ ಮನವಿ
ಸೂರಿಲ್ಲದ ಈ ಕುಟುಂಬಕ್ಕೆ ಸೇವಾ ಸಂಸ್ಥೆಗಳು, ಜನಪ್ರತಿನಿಧಿಗಳು ಸೇರಿ ಸೂರು ಕಲ್ಪಿಸಬೇಕಾಗಿದೆ ಎಂದು ಶಾಲೆಯ ಪ್ರತಿನಿಧಿಗಳು ಮನವಿ ಮಾಡಿದ್ದಾರೆ
ನಿವೇಶನಕ್ಕೆ ಅರ್ಜಿ ಹಾಕಿದ್ದರೂ ಫಲವಿಲ್ಲ
ಈ ಕುಟುಂಬ ಈಗಾಗಲೇ ಸಂತ ನಿವೇಶನಕ್ಕೆ ಅರ್ಜಿ ಹಾಕಿದ್ದರೂ ಪ್ರಯೋಜನವಾಗಿಲ್ಲ. ಚುನಾವಣೆಯ ಸಂದರ್ಭ ಮಾತ್ರ ಜನಪ್ರತಿನಿಧಿಗಳಿಗೆ, ರಾಜಕೀಯ ವ್ಯಕ್ತಿಗಳಿಗೆ ಇವರು ಕಾಣುತ್ತಾರೆ. ಬಳಿಕ ಮರೆತು ಬಿಡುತ್ತಾರೆ. ಇಂಥ ಸ್ಥಿತಿಯಲ್ಲಿ ಶೋಭಾ ನಿರಂತರವಾಗಿ ಶಾಲೆಗೆ ಬರಲು ಸಾಧ್ಯವೇ ಎಂದು ಶಿಕ್ಷಕರೇ ಪ್ರಶ್ನಿಸಿಕೊಳ್ಳುತ್ತಾರೆ.
ನೆರವಿಗೆ ನಿಲ್ಲುತ್ತೇವೆ
ಈ ಕುಟುಂಬ, ವಿದ್ಯಾರ್ಥಿನಿಯ ಮನೆ ಪರಿಸ್ಥಿತಿ ನೋಡಿದರೆ ಮನ ಮಿಡಿಯುತ್ತಿದೆ. ರೋಟರಿ ಅವರ ನೆರವಿಗೆ ನಿಲ್ಲಲಿದೆ.
– ಮುರಳೀಧರ ಜೋಗಿ, ಬೆಳ್ಮಣ್ ರೋಟರಿ ಅಧ್ಯಕ್ಷ
ಸೇವಾ ಸಂಸ್ಥೆಗಳು ಸಹಕರಿಸಬೇಕು
ಈ ಕಾಲದಲ್ಲಿಯೂ ಇಂತಹ ಕುಟುಂಬಗಳಿವೆ ಎಂದಾಗ ನೋವಾಗುತ್ತದೆ. ಸೇವಾ ಸಂಸ್ಥೆಗಳು ಮುಂದೆ ಬಂದು ಸಹಕರಿಸಬೇಕಾಗಿದೆ.
– ಜಯಂತಿ ಶೆಟ್ಟಿ, ಅಧ್ಯಾಪಕಿ, ಬೆಳ್ಮಣ್ ಪ್ರೌಢಶಾಲೆ.
– ಶರತ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.