ಇಂದು ಮಲ್ಪೆ, ಬ್ರಹ್ಮಾವರಕ್ಕೆ ನಿತಿನ್ ಗಡ್ಕರಿ
Team Udayavani, Apr 15, 2019, 6:30 AM IST
ಉಡುಪಿ: ಕೇಂದ್ರದ ಬಂದರು ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಎ.15ರಂದು ಸಂಜೆ 3.30ಕ್ಕೆ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಮಲ್ಪೆಯ ಪೊಲೀಸ್ ಠಾಣೆ ಸಮೀಪದ ವಡಭಾಂಡೇಶ್ವರದ ಮುಂಭಾಗದ ಮೈದಾನದಲ್ಲಿ ಸಂಜೆ 5 ಗಂಟೆಗೆ ನಡೆಯುವ ಸಾರ್ವಜನಿಕ ಸಭೆ ನಡೆಯಲಿದೆ. ಇದಕ್ಕೂ ಮುನ್ನ 4ಕ್ಕೆ ಕಲ್ಮಾಡಿಯ ಡಾ|ವಿ.ಎಸ್.ಆಚಾರ್ಯರ ಕ್ಲಿನಿಕ್ ಸಮೀಪದಿಂದ ರ್ಯಾಲಿ ನಡೆಯಲಿದೆ. ಈ ಕಾರ್ಯಕ್ರಮವು ಕಾರ್ಯಕರ್ತರಿಗೆ ಹೊಸ ಹುರುಪು ನೀಡಲಿದೆ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಪಾರ್ಕಿಂಗ್ ವ್ಯವಸ್ಥೆ
ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ದ್ವಿಚಕ್ರ ಮತ್ತು ಲಘು ವಾಹನಗಳಿಗೆ ಮಲ್ಪೆಯ ಗಾಂಧಿ ಶತಾಬ್ದ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಘನವಾಹನದಲ್ಲಿ ಆಗಮಿಸುವವರು ಕಲ್ಮಾಡಿಯ ಡಾ| ವಿ.ಎಸ್.ಆಚಾರ್ಯ ಕ್ಲಿನಿಕ್ ಸಮೀಪ ಇಳಿದು ಮೈದಾನಕ್ಕೆ ಆಗಮಿಸಬೇಕು.
660 ಕೋ.ರೂ. ಮಂಜೂರು
ನಿತಿನ್ ಗಡ್ಕರಿಯವರು ಹೆದ್ದಾರಿ ಸಚಿವರಾಗಿ ರಾ.ಹೆ.ಯ ಆದಿಉಡುಪಿ-ಮೊಳಕಾಲ್ಮೂರು ರಸ್ತೆಗೆ 660 ಕೋ.ರೂ. ಈಗಾಗಲೇ ಮಂಜೂರು ಮಾಡಿದ್ದಾರೆ. ಅದರಲ್ಲಿ 95 ಕೋ.ರೂ. ಈಗಾಗಲೇ ಬಿಡುಗಡೆಯಾಗಿದ್ದು, ಕಾಮಗಾರಿ ಆರಂಭಗೊಂಡಿದೆ. ಆದಿಉಡುಪಿ, ಮಲ್ಪೆ ಹೆದ್ದಾರಿ ಅಭಿವೃದ್ಧಿಗೆ 40 ಕೋ.ರೂ. ಬಿಡುಗಡೆ ಆಗಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಬಂದರು ಸಚಿವರಾಗಿ ಕೂಡ ಅವರ ಪಾತ್ರ ಕೂಡ ನಮ್ಮ ಜಿಲ್ಲೆಗೆ ಅತ್ಯವಶ್ಯವಾಗಿದೆ. ಬಂದರು 4ನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಮೀನುಗಾರರ ಮುಖಂಡರು, ಅಲ್ಲಿನ ಜನರಿಂದ ಮಾಹಿತಿ ಸಂಗ್ರಹಿಸಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.
ಮೀನುಗಾರಿಕೆ ದೋಣಿಯ ಡೀಸೆಲ್‌ಗೆ ಈ ಹಿಂದೆ 1.5ರೂ. ರೋಡ್‌ಸೆಸ್ ವಿಧಿಸಲಾಗುತ್ತಿತ್ತು. ಬಳಿಕ ವಾಜಪೇಯಿ ಪ್ರಧಾನಿಯಾದಾಗ ಅದನ್ನು ರದ್ದುಪಡಿದಿದ್ದರು. ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ 1.5ರೂ. ರೋಡ್ ಸೆಸ್ ಎಂದು ಹೇಳಲಾಯಿತು. ಇದು ಸಂಪೂರ್ಣ ವಿರುದ್ಧವಾಗಿದೆ. ನಿತಿನ್ ಗಡ್ಕರಿಯವರಿಗೆ ಈ ಬಗ್ಗೆ ಮನವರಿಕೆ ಮಾಡಿ 1.5 ರೋಡ್ ಸೆಸ್ ಸಿಗಬೇಕೆಂದು ಮನವರಿಕೆ ಮಾಡಲಾಗಿದೆ ಎಂದರು.
ಬ್ರಹ್ಮಾವರ ಹೆದ್ದಾರಿಯ ಫ್ಲೈಓವರ್ ಅವ್ಯವಸ್ಥೆ ಬಗ್ಗೆಯೂ ಸಚಿವರ ಗಮನಕ್ಕೆ ತರಲಾಗುವುದು. ಗಡ್ಕರಿಯವರು ಕರಾವಳಿಗೆ ಅನನ್ಯ ಕೊಡುಗೆ ನೀಡಿದ್ದು, ಮುಂದೆ ಕೂಡ ಹಲವಾರು ಕೊಡುಗೆಗಳನ್ನು ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಉಡುಪಿ ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಮುಖಂಡ ಯಶ್‌ಪಾಲ್ ಸುವರ್ಣ, ನಗರಸಭಾ ಸದಸ್ಯರಾದ ಕೊಳವಾರ್ಡ್‌ನ ಲಕ್ಷ್ಮೀ ಮಂಜುನಾಥ, ವಡಮಂಡೇಶ್ವರ ವಾರ್ಡ್‌ನ ಯೋಗೀಶ್ ಸಾಲ್ಯಾನ್, ಮಲ್ಪೆ ಸೆಂಟ್ರಲ್ ವಾರ್ಡ್‌ನ ಎಡ್ಲಿನ್ ಕರ್ಕಡ ಭಾಗವಹಿಸಲಿದ್ದಾರೆ ಎಂದರು.
ಭಟ್ ಅವರು ನಿತಿನ್ ಗಡ್ಕರಿಯವರ ಭೇಟಿ ನಿಮಿತ್ತ ರಘುಪತಿ ಭಟ್ ಉಡುಪಿ, ಬ್ರಹ್ಮಾವರದಲ್ಲಿ ವಿವಿಧೆಡೆ ಪ್ರಚಾರ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್ ವಿರುದ್ಧ ವರ್ಮಾ
Divorce Rumours: ಚಹಾಲ್ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?
Aranthodu: ವ್ಯಕ್ತಿಯ ಮೇಲೆ ಕಾಡಾನೆ ದಾಳಿ
Sandalwood: ಫಸ್ಟ್‌ಲುಕ್‌ನಲ್ಲಿ”ಕುಲದಲ್ಲಿ ಕೀಳ್ಯಾವುದೋ’
New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.