ನಿಟ್ಟೆ ತಾಂತ್ರಿಕ ಕಾಲೇಜಿನ ತಂಡದಿಂದ “ಟಚ್‌ಲೆಸ್ ಸ್ಯಾನಿಟೈಸರ್ ಡಿಸ್ಪೆಂಸರ್’
Team Udayavani, May 18, 2020, 5:09 AM IST
ಕಾರ್ಕಳ: ನಿಟ್ಟೆ ತಾಂತ್ರಿಕ ಕಾಲೇಜಿನ ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಒಂದು ಸರಳ ಹಾಗೂ ಅತಿ ಕಡಿಮೆ ವೆಚ್ಚದ “ಟಚ್‌ಲೆಸ್ ಸ್ಯಾನಿಟೈಸರ್ ಡಿಸ್ಪೆಂಸರ್’ ಉಪಕರಣವನ್ನು ವಿನ್ಯಾಸಗೊಳಿಸಿರುತ್ತಾರೆ.
ಕೋವಿಡ್-19 ವೈರಸ್ ಹರಡುವುದನ್ನು ತಡೆಗಟ್ಟುವಲ್ಲಿ ಸ್ಯಾನಿಟೈಸರ್ ಗಳ ಬಳಕೆ ಅತ್ಯಗತ್ಯ. ಒಂದೇ ಸ್ಯಾನಿಟೈಸರ್ ಡಿಸ್ಪೆಂಸರ್‌ನ್ನು ಪದೇಪದೇ ಹಲವರು ಬಳಸುವುದು ಅಪಾಯಕಾರಿ. ಈ ಅಪಾಯವನ್ನು ದೂರವಾಗಿಸುವ ನಿಟ್ಟಿನಲ್ಲಿ ಟಚ್‌ಲೆಸ್ ಸ್ಯಾನಿಟೈಸರ್ ಡಿಸ್ಪೆಂಸರ್ ಬಳಕೆ ಅನಿವಾರ್ಯ. ಇದಕ್ಕೊಂದು ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಇಲ್ಲಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಕರಣವೊಂದನ್ನ ಅಭಿವೃದ್ಧಿಪಡಿಸಿರುತ್ತಾರೆ.
ಹ್ಯಾಂಡ್ ಡಿಟೆಕ್ಷನ್, ಪವರ್ ಇಂಡಿಕೇಟರ್ ಹಾಗೂ ಉಳಿದಿರುವ ಸ್ಯಾನಿಟೈಸರ್ ನ ಪ್ರಮಾಣವನ್ನು ತಿಳಿಯುವ ತಂತ್ರಜ್ಞಾನ ಇದರಲ್ಲಿದೆ. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್ ಎನ್. ಚಿಪ್ಳೂಣ್ಕರ್ ಮೇ 13ರಂದು ಸಂಸ್ಥೆಯ ಆವರಣದಲ್ಲಿ ಉಪಕರಣ ಉದ್ಘಾಟಿಸಿದರು. ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ| ಸೂರ್ಯನಾರಾಯಣ ಕೆ. ಸ್ವಾಗತಿಸಿ, ಉಪಕರಣದ ಕುರಿತು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.