ಸಂಚಾರ ನಿಯಮಾವಳಿ ಉಲ್ಲಂಘನೆ ; ಹೆಚ್ಚುವರಿ ದಂಡಕ್ಕೂ ಸವಾರರು ಡೋಂಟ್ “ಕೇರ್’
Team Udayavani, Nov 2, 2020, 5:29 AM IST
ಪೊಲೀಸರಿಂದ ವಾಹನ ತಪಾಸಣೆ.
ಉಡುಪಿ: ಕೇಂದ್ರ ಸರಕಾರ ಟ್ರಾಫಿಕ್ ನಿಯಮಾವಳಿ ಉಲ್ಲಂಘನೆಗೆ ದಂಡ ಹೆಚ್ಚಳ ಮಾಡಿದರೂ ಉಡುಪಿ ನಗರಾದ್ಯಂತ ಟ್ರಾಫಿಕ್ ನಿಯಮಾವಳಿ ಉಲ್ಲಂಘನೆ ಪ್ರಕರಣಗಳು ಹೆಚ್ಚಳವಾಗುತ್ತಿವೆ. ವೇಗದ ಚಾಲನೆ, ಮದ್ಯಪಾನ ಮಾಡಿ ವಾಹನ ಓಡಿಸುವುದು, ಪರವಾನಿಗೆ ಇಲ್ಲದೆ ವಾಹನ ಚಲಾಯಿಸುವುದು, ಹೆಲ್ಮೆಟ್ ಧರಿಸದಿರುವುದು, ಅನಧಿಕೃತ ಪ್ರದೇಶಗಳಲ್ಲಿ ವಾಹನ ನಿಲ್ಲಿಸುವುದು ಸಹಿತ ವಿವಿಧ ಕಾರಣಗಳಿಗೆ ಸವಾರರು ದಂಡ ಪಾವತಿಸುತ್ತಿದ್ದಾರೆ.
ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ ನಗರದಲ್ಲಿ ಜನವರಿಯಿಂದ ಅಕ್ಟೋಬರ್ 30ರ ವರೆಗೆ ಒಟ್ಟು 7,756 ಪ್ರಕರಣ ದಾಖಲಾಗಿದ್ದು, 44,54,000 ರೂ. ದಂಡವನ್ನು ಸ್ಥಳದಲ್ಲೇ ವಿಧಿಸಲಾಗಿದೆ. ಮದ್ಯಸೇವಿಸಿ ವಾಹನ ಚಲಾವಣೆ ಹಾಗೂ ಸ್ಥಳದಲ್ಲಿ ದಂಡ ಪಾವತಿಸದವರ ವಾಹನ
ದಾಖಲೆ ನಿಷ್ಕ್ರಿಯಗೊಳಿಸಿ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ. ಈಗಾಗಲೇ 229 ಪ್ರಕರಣಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಅದರಲ್ಲಿ 13 ಪ್ರಕರಣಗಳು ಇತ್ಯರ್ಥಗೊಂಡು 69,500 ರೂ. ದಂಡ ಸಂಗ್ರಹಿಸಲಾಗಿದೆ. ಕೊರೊನಾ ಕಾರಣ ದಿಂದಾಗಿ ಉಳಿದ ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಶೀಘ್ರದಲ್ಲಿ ಇತ್ಯರ್ಥವಾಗಲಿದೆ.
ಆಯಾ ಕಟ್ಟಿನ ಭಾಗದಲ್ಲಿ ಪೊಲೀಸ್ ನಿಗಾ
ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಿಕೊಂಡು ಮಾರ್ಗ ಬದಲಿಸಿ ಸಂಚಾರ ಮಾಡುವವರ ಮೇಲೆಯೂ ಟ್ರಾಫಿಕ್ ಪೊಲೀಸರು ನಿಗಾ ಇರಿಸಿದ್ದಾರೆ. ನಗರದ ಕಲ್ಸಂಕ ವೃತ್ತ, ಸಿಟಿ ಬಸ್ ನಿಲ್ದಾಣ, ಕೆಎಂ ಮಾರ್ಗ, ಕರಾವಳಿ ಬೈಪಾಸ್, ಸಂತೆಕಟ್ಟೆ ಜಂಕ್ಷನ್, ಕ್ಲಾಕ್ ಟವರ್ ಭಾಗದಲ್ಲಿ ದಿನಂಪ್ರತಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿಯೂ ಪೊಲೀಸರು ದಿಢೀರ್ ಕಾರ್ಯಾಚರಣೆ ಮಾಡಿ ನಿಯಮಾವಳಿ ಉಲ್ಲಂ ಸುವವರ ಮೇಲೆ ಕ್ರಮ ಜರಗಿಸುತ್ತಿದ್ದಾರೆ.
ನಗರಸಭೆಯಿಂದ ಶೀಘ್ರ ಮಾರ್ಕಿಂಗ್
ನಗರದ ಆಯಾಕಟ್ಟಿನ ಭಾಗದಲ್ಲಿ ಸುಗಮ ವಾಹನ ನಿಲುಗಡೆ ದೃಷ್ಟಿಯಿಂದ ನಗರಸಭೆಯ ವತಿಯಿಂದ ಮಾರ್ಕಿಂಗ್ ಮಾಡುವಂತೆ ತಿಳಿಸಲಾಗಿದೆ. ಇತ್ತೀಚೆಗಷ್ಟೇ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಮುಂದಿನ ದಿನದಲ್ಲಿ ಮಾರ್ಕಿಂಗ್ ನಡೆಸಲಿ ದ್ದಾರೆ. ಆ ವ್ಯಾಪ್ತಿ ಬಿಟ್ಟು ಹೊರಭಾಗದಲ್ಲಿ ವಾಹನಗಳನ್ನು ನಿಲ್ಲಿಸಿದರೆ ಲಾಕ್ ಮಾಡಿ ಮಾಲಕರಿಗೆ ದಂಡ ವಿಧಿಸಲಾಗುವುದು ಎನ್ನುತ್ತಾರೆ ಟ್ರಾಫಿಕ್ ಪೊಲೀಸರು.
ದ್ವಿಚಕ್ರ ವಾಹನ ಸವಾರರೇ ಅಧಿಕ
ದ್ವಿಚಕ್ರ ವಾಹನ ಸವಾರರು ಕಡ್ಡಾಯ ವಾಗಿ ಹೆಲ್ಮೆಟ್ ಧರಿಸಬೇಕು ಎಂಬ ನಿಯಮ ವಿದ್ದರೂ ಹಲವು ಮಂದಿ ನಿಯಮ ಉಲ್ಲಂ ಸಿ
ದಂಡ ಪಾವತಿಸುತ್ತಿದ್ದಾರೆ. ವಾಹನಗಳಲ್ಲಿ ಇಂಡಿಕೇಟರ್ ಇಲ್ಲದಿರುವುದು, ವಾಯು ಮಾಲಿನ್ಯ ತಪಾಸಣೆ ಮಾಡಿಸದಿರುವುದು, ಅವಧಿ ಮುಗಿದ ಇನ್ಶೂರೆನ್ಸ್ ಸಹಿತ ದ್ವಿಚಕ್ರ ವಾಹನ ಸವಾರರು ಅತ್ಯಧಿಕ ಪ್ರಮಾಣದಲ್ಲಿ ದಂಡ ಪಾವತಿಸುತ್ತಿದ್ದಾರೆ.
ನಿಯಮಾವಳಿ ಪಾಲಿಸಿ
ಪೊಲೀಸರು ತಪಾಸಣೆ ಮಾಡುತ್ತಾರೆ ಎಂದು ತಿಳಿದಿದ್ದರೂ ಹಲವಾರು ಮಂದಿ ಟ್ರಾಫಿಕ್ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದ್ದಾರೆ. ಲಾಕ್‌ಡೌನ್ ಬಳಿಕ ಪ್ರಕರಣಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಸ್ಥಳದಲ್ಲಿಯೇ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ವಾಹನ ಮಾಲಕರು ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಸಂಚಾರ ನಿಯಮ ಪಾಲಿಸಿದರೆ ಒಳ್ಳೆಯದು.
-ಅಬ್ದುಲ್ ಖಾದರ್, ಪೊಲೀಸ್ ನಿರೀಕ್ಷಕರು, ಉಡುಪಿ ಸಂಚಾರ ಠಾಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.