ಗಾಯಗೊಂಡ ಸಿಂಗಳೀಕದ ಮರಿಗೆ ಮಾನವೀಯ ಚಿಕಿತ್ಸೆ : ಮರಳಿ ತಾಯಿ ಮಡಿಲಿಗೆ
Team Udayavani, Jul 16, 2021, 6:25 PM IST
ಕೋಟ: ಮರದಿಂದ ಮರಕ್ಕೆ ಹಾರುವ ಸಂದರ್ಭ ಸಿಂಗಳೀಕದ ಮರಿಯೊಂದು ತಾಯಿಯ ಕೈ ಜಾರಿ ರಸ್ತೆಗೆ ಬಿದ್ದು ತೀವೃವಾಗಿ ಗಾಯಗೊಂಡಿದ್ದು, ರಸ್ತೆಯಲ್ಲಿ ಸಂಚರಿಸುತ್ತಿದ್ದ ಉದ್ಯಮಿಯೋರ್ವರು ಇದನ್ನು ಗಮನಿಸಿ ಪಶು ವೈದ್ಯರ ಮೂಲಕ ಸೂಕ್ತ ಚಿಕಿತ್ಸೆ ನೀಡಿ ಮರಳಿ ತಾಯಿಯ ಮಡಿಲು ಸೇರಿಸಿದ ಮಾನವೀಯ ಘಟನೆ ಸಾಬ್ರಕಟ್ಟೆ ಸಮೀಪ ಕಳ್ಳಾಡಿಯಲ್ಲಿ ನಿನ್ನೆ ನಡೆದಿದೆ.
ತೆಕ್ಕಟ್ಟೆ ಸಮೀಪ ಮಲ್ಯಾಡಿ ನಿವಾಸಿ, ಉದ್ಯಮಿ ನಿಖಿಲ್ ಅವರು ಸಾಬ್ರಕಟ್ಟೆಯಿಂದ ಶಿರಿಯಾರ ಕಡೆಗೆ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಕಾರಿನ ಎದುರಿಗೆ ಸಿಂಗಳೀಕವೊಂದು ಮರದಿಂದ-ಮರಕ್ಕೆ ಹಾರುವಾಗ ಸುಮಾರು 1ತಿಂಗಳ ಮರಿಯೊಂದನ್ನು ಕೈ ಜಾರಿ ಕೆಳಬೀಳಿಸಿತ್ತು ಹಾಗೂ ಇದರಿಂದ ಮರಿ ತೀವ್ರ ಗಾಯಗೊಂಡಿತ್ತು. ನಿಖಿಲ್ ಅವರು ತತ್‌ಕ್ಷಣ ಕಾರುನಿಲ್ಲಿಸಿ ಮರಿಯನ್ನು ರಸ್ತೆಯಿಂದ ಮೇಲೆತ್ತಿ ಪ್ರಥಮ ಚಿಕಿತ್ಸೆ ನೀಡಿ, ಸ್ಥಳೀಯ ಪಶುವೈದ್ಯಾಧಿಕಾರಿ ಡಾ| ಪ್ರದೀಪ್ ಕುಮಾರ್ ಅವರಿಗೆ ಕರೆ ಮಾಡಿದ್ದಾರೆ ಹಾಗೂ ಪಡುಮುಂಡು ಭಾಗದಲ್ಲಿ ಕಾರ್ಯನಿರತರಾಗಿದ್ದ ಪಶು ವೈದ್ಯರನ್ನು ಭೇಟಿಯಾಗಿ, ಗ್ಲೋಕೋಸ್, ಇಂಜೆಕ್ಷನ್ ಮುಂತಾದ ಸೂಕ್ತ ಚಿಕಿತ್ಸೆಗಳನ್ನು ನೀಡಿದ್ದಾರೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆತಿದ್ದರಿಂದ ಮರಿ ಚೇತರಿಸಿಕೊಂಡು ಲವ-ಲವಿಕೆಗೊಂಡಿತ್ತು. ಅನಂತರ ಅದನ್ನು ಪುನಃ ತಾಯಿ ಇರುವ ಸ್ಥಳಕ್ಕೆ ಕೊಂಡೊಯ್ದು ಬಿಡಲಾಯಿತು.
ಮರಿಯನ್ನು ಕಾರಿನಲ್ಲಿ ಕರೆದೊಯ್ಯುವ ಸಂದರ್ಭ ಹಾಗೂ ಚಿಕಿತ್ಸೆ ನೀಡುವ ಸಂದರ್ಭ ಸ್ವಲ್ಪವೂ ಭಯಗೊಳ್ಳದೆ ಆತ್ಮೀಯವಾಗಿ ಬೆರೆತಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.