ಒಂದು ಪವನ್ ತೂಕದ ಚಿನ್ನದ ಸರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ ಹನೀಫ್
Team Udayavani, Aug 16, 2021, 4:32 PM IST
ಕಟಪಾಡಿ : ತನಗೆ ದಾರಿಯಲ್ಲಿ ಸಿಕ್ಕ ಒಂದು ಪವನ್ ತೂಕದ ಚಿನ್ನದ ಸರವನ್ನು ವಾರೀಸುದಾರರಿಗೆ ಹಸ್ತಾಂತರಿಸುವ ಮೂಲಕ ಕಟಪಾಡಿಯ ರಿಕ್ಷಾ ಚಾಲಕನೋರ್ವ ಪ್ರಾಮಾಣಿಕತೆ ಮೆರೆದಿದ್ದಾರೆ.
ಕಟಪಾಡಿ ಜಂಕ್ಷನ್ ಬಳಿಯ ರಿಕ್ಷಾ ನಿಲ್ದಾಣದ ಬಳಿ ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ಚಿನ್ನದ ಸರವನ್ನು ಗಮನಿಸಿ ಕಟಪಾಡಿಯ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ, ರಿಕ್ಷಾ ಚಾಲಕ ನಾಗಿ ದುಡಿಯುತ್ತಿರುವ ಮೊಹಮ್ಮದ್ ಹನೀಫ್ ಮಣಿಪುರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಹರಿಯ ಬಿಟ್ಟಿದ್ದು, ಗುರುತು ಹೇಳಿ ಪಡೆದುಕೊಳ್ಳುವಂತೆ ಆ.15ರಂದು ಮಧ್ಯಾಹ್ನದ ವೇಳೆಯಲ್ಲಿಯೇ ವಿನಂತಿಸಿದ್ದರು.
ಇದನ್ನೂ ಓದಿ : ಜಮೀರ್ ಅಹಮದ್ ಖಾನ್ ಭೇಟಿಯಾದ ಮಾಜಿ ಡಿಸಿಎಂ ಜಿ. ಪರಮೇಶ್ವರ್
ಕಟಪಾಡಿ ಇಂದಿರಾ ನಗರದ ನಿವಾಸಿ ಮಹಿಳೆಯೋರ್ವರು ಸರ ಖರೀದಿಸಿದ ಬಿಲ್, ಈ ಮೊದಲು ಚಿನ್ನದ ಸರ ತೊಟ್ಟಿದ್ದ ಫೋಟೋ ಸಹಿತ ಇತರೇ ಸೂಕ್ತ ದಾಖಲೆಗಳೊಂದಿಗೆ ಗುರುತು ಹೇಳಿ ಈ ಒಂದು ಪವನ್ ತೂಕದ ಚಿನ್ನದ ಸರವನ್ನು ಮರಳಿ ಪಡೆದುಕೊಂಡ ಮಹಿಳೆಯು ಸಂತಸ ವ್ಯಕ್ತಪಡಿಸಿರುತ್ತಾರೆ
ಕಾಪು ಪೊಲೀಸ್ ಠಾಣಾ ಪಿ.ಎಸೈ. ರಾಘವೇಂದ್ರ ಸಿ. ಅವರ ಸಮಕ್ಷಮದಲ್ಲಿ ವಾರೀಸುದಾರರಿಗೆ ಹಸ್ತಾಂತರಿಸಲಾಗಿದ್ದು, ರಿಕ್ಷಾ ಚಾಲಕನ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ : Watch Video: ಕಾಬೂಲ್- ವಿಮಾನ ಚಕ್ರ ಹಿಡಿದು ನೇತಾಡುತ್ತಿದ್ದ ಇಬ್ಬರು ಕೆಳಕ್ಕೆ ಬಿದ್ದು ಸಾವು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.