Utensils: ಉದಯ ಪರ್ಬ: “ಉದಯ ಮ್ಯಾಜಿಕ್ ಪಾಟ್’ ಬಹುಬೇಡಿಕೆಯಲ್ಲಿ ಮಾರಾಟ
Team Udayavani, Aug 19, 2023, 2:34 PM IST
ಉಡುಪಿ: ಉದಯ ಸಮೂಹ ಸಂಸ್ಥೆಯ ಉದಯ ಕಿಚನೆಕ್ಸ್ಟ್ ಸೂಪರ್ ಮಾರ್ಕೆಟ್ ಗಳಲ್ಲಿ ಹಮ್ಮಿಕೊಳ್ಳಲಾದ ವಿಶೇಷ ಮಾರಾಟ ಮೇಳ “ಉದಯ ಪರ್ಬ’ದಲ್ಲಿ ಬಹುಬೇಡಿಕೆಯಲ್ಲಿ “ಉದಯ ಮ್ಯಾಜಿಕ್ ಪಾಟ್’ ಮಾರಾಟವಾಗುತ್ತಿದೆ.
ಮ್ಯಾಜಿಕ್ ಪಾಟ್ ಅನ್ನು ಕರ್ನಾಟಕದಲ್ಲಿ ಪ್ರಥಮವಾಗಿ ತಯಾರಿಸಿದ ಹೆಗ್ಗಳಿಕೆಗೆ ಪಾತ್ರವಾದ ಸಂಸ್ಥೆಯ ಎಲ್ಲ ಮಳಿಗೆಗಳಲ್ಲಿ ಇದರ ಅಪಾರ ಸಂಗ್ರಹವಿದ್ದು, ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯವಿದೆ. ಇದರಲ್ಲಿ ಮನೆಯಲ್ಲಿರುವ ಸದಸ್ಯರಿಗೆ ಅನುಗುಣವಾಗಿ 1, 1 ಕಾಲು ಕೆಜಿ ಮತ್ತು 2 ಕೆಜಿ ಹಾಗೆಯೇ 3, 5, 7 ಪಾವು ಅಕ್ಕಿಯನ್ನು ಬೇಯಿಸಬಲ್ಲ ಮ್ಯಾಜಿಕ್ ಪಾಟ್‌ಗಳು ದೊರೆಯಲಿವೆ.
ಸಾಮಾನ್ಯವಾಗಿ ಗ್ಯಾಸ್ ಒಲೆಯಲ್ಲಿ ಕುಚ್ಚಲಕ್ಕಿ ಅನ್ನ ತಯಾರಿಸಲು ಸುಮಾರು 1ರಿಂದ 2 ಗಂಟೆ ಬೇಕಾಗುತ್ತದೆ. ಆದರೆ ಈ ಉತ್ಪನ್ನದಿಂದ ಸುಮಾರು 1ರಿಂದ ಒಂದೂವರೆ ಗಂಟೆ ಖರ್ಚಾಗುವ ಗ್ಯಾಸ್ ಉಳಿತಾಯವಾಗಲಿದೆ. ಕುಚ್ಚಲಕ್ಕಿಯನ್ನು ತೊಳೆದು ಕ್ರಮದಂತೆ ನೀರು ಹಾಕಿ ಸುಮಾರು 20 ನಿಮಿಷ (1 ಕುದಿ ಬರುವವರೆಗೆ) ಬೇಯಿಸಬೇಕು. ಅನಂತರ ಆ ಪಾತ್ರೆ ಸಮೇತ ಮ್ಯಾಜಿಕ್ ಪಾಟ್‌ನೊಳಗಡೆ ಮುಚ್ಚಿಟ್ಟು ಸುಮಾರು 2 ಗಂಟೆಯೊಳಗೆ ಕುಚ್ಚಲಕ್ಕಿ ಅನ್ನ ತಯಾರಾಗುವುದು. ಅಲ್ಲದೆ ಬೆಳಗ್ಗೆ ತಯಾರಿಸಿದ ಅನ್ನದ ರುಚಿಯು ರಾತ್ರಿಯ ವರೆಗೂ ಯಥಾಸ್ಥಿತಿಯಲ್ಲಿ ಇರಲಿದೆ. ಇದರಲ್ಲಿರುವ ಅನ್ನವು ಸುಮಾರು 8ರಿಂದ 10 ಗಂಟೆಗಳ ಕಾಲ ಯಥಾಪ್ರಕಾರ ಬಿಸಿಯಾಗಿರುತ್ತದೆ.
ಉದಯ ಮ್ಯಾಜಿಕ್ ಪಾಟ್ ದೀರ್ಘ ಬಾಳಿಕೆ ಬರುವುದಲ್ಲದೆ, ತುಕ್ಕು ಹಿಡಿಯುವುದಿಲ್ಲ. ಇದನ್ನು 304 ಹೆವಿ ಗೇಜ್ ಸ್ಟೇನ್‌ಲೆಸ್ ಸ್ಟೀಲ್ ನಿಂದ ಉತ್ತಮ ಗುಣಮಟ್ಟದಲ್ಲಿ ತಯಾರಿಸಲಾಗಿದೆ. ಇದರಲ್ಲಿ ಅನ್ನ ತಯಾರಿಸುವುದರಿಂದ ಪ್ರೊಟೀನ್ ಮತ್ತು ವಿಟಮಿನ್‌ಗಳ ಸತ್ವ ಹೊರಹೋಗುವುದಿಲ್ಲ.
ಆಧುನಿಕ ಕಾಲದ ಚಿಕ್ಕ ಕುಟುಂಬ ಗಳಿಗೆ ಹಾಗೂ ಮನೆಮಂದಿ ಎಲ್ಲರೂ ವ್ಯವಹಾರದಲ್ಲಿ ತೊಡಗಿಕೊಂಡು ಬ್ಯುಸಿಯಾಗಿರುವ ಕುಟುಂಬಗಳಿಗೆ “ಉದಯ ಮ್ಯಾಜಿಕ್ ಪಾಟ್’ ಬಹಳಷ್ಟು ವರದಾನವಾಗಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.