ಉಡುಪಿ: 190 ಮಂದಿಗೆ ಸೋಂಕು; ಸಮುದಾಯಕ್ಕೆ ಹಬ್ಬಿದ ಭಯ; ಸಾವಿರ ದಾಟಿದ ಸಕ್ರಿಯ ಪ್ರಕರಣ
Team Udayavani, Jul 25, 2020, 8:10 AM IST
ಉಡುಪಿ: ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಕೋವಿಡ್ ಸೋಂಕಿನ ಕಾರಣದಿಂದ ಮಣಿಪಾಲ ಆಸ್ಪತ್ರೆಯಲ್ಲಿ ತಮ್ಮ ಎಂದಿನ ಜಪತರ್ಪಣಾದಿಗಳೊಂದಿಗೆ ವಿಶ್ರಾಂತಿ ಪಡೆಯುತ್ತಿದ್ದಾರೆ.
ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 265 ನೆಗೆಟಿವ್ ಮತ್ತು 190 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಸಕ್ರಿಯ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,000 ದಾಟಿದೆ. ಇದೇ ವೇಳೆ ಒಟ್ಟು ಸೋಂಕಿತರ ಸಂಖ್ಯೆ 3,000 ದಾಟಿದೆ. ಗುರುವಾರ 994 ಇದ್ದ ಸಕ್ರಿಯ ಪಾಸಿಟಿವ್ ಪ್ರಕರಣ ಶುಕ್ರವಾರ ಒಮ್ಮೆಲೆ 1,096ಕ್ಕೇರಿದೆ. ಒಟ್ಟು 3,036 ಪಾಸಿಟಿವ್ ಪ್ರಕರಣಗಳಲ್ಲಿ 1,929 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಸಾವಿನ ಸಂಖ್ಯೆ 14ಕ್ಕೇರಿಕೆ
ಜಿಲ್ಲೆಯಲ್ಲಿ ಗುರುವಾರ ರಾತ್ರಿ ಮತ್ತೂಂದು ಸಾವು ಸಂಭವಿಸಿದೆ. 63 ವರ್ಷ ಪ್ರಾಯದ ಕುಂದಾಪುರ ಕೋಣಿ ನಿವಾಸಿ ಮಣಿಪಾಲ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮೃತಪಟ್ಟ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇವರ ಅಂತ್ಯಕ್ರಿಯೆ ಶುಕ್ರವಾರ ಉಡುಪಿಯಲ್ಲಿ ನಡೆಯಿತು. ಇದುವರೆಗೆ ಒಟ್ಟು 14 ಮಂದಿ ಕೊರೊನಾ ಪಾಸಿಟಿವ್‌ನಿಂದ ಮೃತಪಟ್ಟಿದ್ದಾರೆ. ಕೇರಳದ ಯುವಕನ ಸಾವಿನ ಪ್ರಕರಣ ಇದರಲ್ಲಿ ಸೇರಿಲ್ಲ.
190 ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ ತಾ.ನ 99, ಕುಂದಾಪುರದ 50, ಕಾರ್ಕಳದ 41 ಮಂದಿ ಸೇರಿದ್ದಾರೆ. ಪುರುಷರು 112, ಮಹಿಳೆಯರು 78. ಜ್ವರ ಬಾಧೆಯವರು 56, ಉಸಿರಾಟದ ಸಮಸ್ಯೆಯವರು (ಸಾರಿ) ಒಬ್ಬರು ಇದ್ದಾರೆ. 133 ಮಂದಿ ಸ್ಥಳೀಯ ಸಂಪರ್ಕಿತರು. ಶುಕ್ರವಾರ 413 ಮಾದರಿಗಳನ್ನು ಸಂಗ್ರಹಿಸಿದ್ದು 611 ಮಾದರಿಗಳ ವರದಿ ಬರಬೇಕಾಗಿದೆ. ಪ್ರಸ್ತುತ 1,729 ಮಂದಿ ಮನೆಗಳಲ್ಲಿ ಮತ್ತು 217 ಮಂದಿ ಆಸ್ಪತ್ರೆಗಳ ಐಸೊಲೇಶನ್ ವಾರ್ಡ್‌ಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಶುಕ್ರವಾರ ಆಸ್ಪತ್ರೆಯಿಂದ 88 ಜನರು ಬಿಡುಗಡೆಗೊಂಡಿದ್ದಾರೆ.
81 ಕಡೆ ಸೀಲ್‌ಡೌನ್
ತೆಂಕನಿಡಿಯೂರು, ಮೂಡ ನಿಡಂಬೂರಿನಲ್ಲಿ ತಲಾ 3, ಶಿವಳ್ಳಿಯಲ್ಲಿ 7, ಅಲೆವೂರಿನಲ್ಲಿ 2, ಕೊರಂಗ್ರಪಾಡಿ, ಬಡಾನಿಡಿಯೂರು, ಉದ್ಯಾವರದಲ್ಲಿ ತಲಾ ಒಂದು ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಉಡುಪಿ ಹಳೆ ತಾಲೂಕು ಕಚೇರಿ ಸಮೀಪದ ಒಂದು ರೆಸ್ಟೋರೆಂಟ್, ಒಂದು ಹೊಟೇಲ್‌ನ್ನು ಸೀಲ್‌ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ 81 ಕಡೆ ಸೀಲ್‌ಡೌನ್ ಮಾಡಲಾಗಿದೆ.
ಪಡುಬಿದ್ರಿ: 7 ಮಂದಿಗೆ ಪಾಸಿಟಿವ್
ಪಡುಬಿದ್ರಿ: ಪಡುಬಿದ್ರಿ ವ್ಯಾಪ್ತಿಯಲ್ಲಿ ಶುಕ್ರವಾರ 7 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬಡಾ ಗ್ರಾಮದ 60 ವರ್ಷದ ಪುರುಷ, ಉಚ್ಚಿಲದ 63 ವರ್ಷದ ಮಹಿಳೆ ಮತ್ತು 37 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದ್ದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಡ್ಪಾಲು ಗ್ರಾಮದ 33 ವರ್ಷದ ಪುರುಷ, ಪಡುಬಿದ್ರಿ ಕೆಳಗಿನ ಪೇಟೆಯ 36 ವರ್ಷದ ಪುರುಷ, ಉಚ್ಚಿಲದ 29 ವರ್ಷದ ಪುರುಷ ಮತ್ತು ಪಾದೆಬೆಟ್ಟುವಿನ 50 ವರ್ಷದ ಪುರುಷರಿಗೂ ಪಾಸಿಟಿವ್ ಬಂದಿದೆ. ಆದರೆ ರೋಗ ಲಕ್ಷಣಗಳಿಲ್ಲದ ಕಾರಣ ಮನೆಯಲ್ಲಿ ಐಸೊಲೇಶನ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.