ಉಡುಪಿ: ಗರಿಷ್ಠ 402 ಪಾಸಿಟಿವ್, 2 ಸಾವು; 7,000 ದಾಟಿದ ಒಟ್ಟು ಪ್ರಕರಣ
Team Udayavani, Aug 13, 2020, 10:10 PM IST
ಸಾಂದರ್ಭಿಕ ಚಿತ್ರ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಗುರುವಾರ ಕೋವಿಡ್ ನಿಂದ ಎರಡು ಸಾವು ಸಂಭವಿಸಿದೆ. ಒಟ್ಟು 402 ಪಾಸಿಟಿವ್ ಮತ್ತು 1,185 ನೆಗೆಟಿವ್ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳನ್ನು ಕಂಡ ದಿನ ಇದಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 7,000 ದಾಟಿದೆ.
ಮಾರನಕಟ್ಟೆಯ 56 ವರ್ಷದ ವ್ಯಕ್ತಿಯೊಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಕೋಟತಟ್ಟು ನಿವಾಸಿ 61 ವರ್ಷ ಪ್ರಾಯದವರೊಬ್ಬರು ಬುಧವಾರ ರಾತ್ರಿ ಮನೆಯಿಂದ ಮಣಿಪಾಲ ಆಸ್ಪತ್ರೆಗೆ ಕರೆತರುವಾಗ ಕೊನೆಯುಸಿರೆಳೆದರು. ಇವರಿಬ್ಬರಿಗೂ ಇತರ ಆರೋಗ್ಯ ಸಮಸ್ಯೆಗಳಿದ್ದವು.
ಪಾಸಿಟಿವ್ ಪ್ರಕರಣಗಳಲ್ಲಿ ಐವರು ಬಾಲಕರು, 18 ಬಾಲಕಿಯರು, 186 ಪುರುಷರು, 155 ಮಹಿಳೆಯರು, ತಲಾ 19 ಮಂದಿ 60 ವರ್ಷ ಮೇಲ್ಪಟ್ಟವರು ಇದ್ದಾರೆ. 99 ಮಂದಿ ರೋಗ ಲಕ್ಷಣದವರು, 303 ರೋಗಲಕ್ಷಣ ಇಲ್ಲದವರಿದ್ದಾರೆ. ಉಡುಪಿ ತಾಲೂಕಿನ 232, ಕುಂದಾಪುರ ತಾಲೂಕಿನ 117, ಕಾರ್ಕಳ ತಾಲೂಕಿನ 49 ಮಂದಿ, ಹೊರ ಜಿಲ್ಲೆಯ ನಾಲ್ವರು ಇದ್ದಾರೆ. ಗುರುವಾರ 292 ಮಂದಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಒಟ್ಟು 7,175 ಪ್ರಕರಣ ಗಳಲ್ಲಿ 4,258 ಮಂದಿ ಗುಣಮುಖರಾಗಿದ್ದು 2,847 ಸಕ್ರಿಯ ಪ್ರಕರಣಗಳಿವೆ.
ಇದುವರೆಗೆ ಒಟ್ಟು 71 ಸಾವು ಉಂಟಾಗಿದೆ. ಗುರುವಾರ 190 ಮಂದಿ ಆಸ್ಪತ್ರೆಗಳಲ್ಲಿ, 212 ಮಂದಿ ಮನೆ ಐಸೊಲೇಶನ್‌ಗೆ ದಾಖಲಾಗಿದ್ದಾರೆ. ಗುರುವಾರ 1,697 ಮಂದಿಯ ಗಂಟಲ ದ್ರವ ಸಂಗ್ರಹಿಸಲಾಗಿದ್ದು 1,855 ಮಾದರಿಯ ವರದಿಗಳು ಬರಬೇಕಿವೆ.
ಕುಂದಾಪುರ, ಬೈಂದೂರು: 38 ಪ್ರಕರಣ
ಕುಂದಾಪುರ: ಬೈಂದೂರು ತಾಲೂಕಿನಲ್ಲಿ 16, ಕುಂದಾಪುರ ತಾಲೂಕಿನಲ್ಲಿ 22 ಮಂದಿ ಸೇರಿದಂತೆ ಗುರುವಾರ ಒಟ್ಟು 38 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕುಂದಾಪುರ ತಾಲೂಕಿನ ಅಂಪಾರು, ಬಸ್ರೂರಿನ ತಲಾ 7 ಮಂದಿ, ಆನಗಳ್ಳಿಯ ಐವರು, ಬಳ್ಕೂರು, ದೇವಲ್ಕುಂದ, ಗಂಗೊಳ್ಳಿಯ ತಲಾ ಒಬ್ಬರಿಗೆ, ಬೈಂದೂರು ತಾಲೂಕು ಬಿಜೂರಿನ ಮೂವರು, ಬಡಾಕೆರೆ, ಬೈಂದೂರು, ಯಡ್ತರೆ, ಗೋಳಿಹೊಳೆಯ ತಲಾ ಇಬ್ಬರು, ನಾವುಂದ, ಹಡವು, ನಾಡ, ಕಿರಿಮಂಜೇಶ್ವರ, ಯಳಜಿತ್‌ನ ತಲಾ ಒಬ್ಬರು ಬಾಧಿತರಾಗಿದ್ದಾರೆ.
ಪಡುಬಿದ್ರಿ: ಐವರಿಗೆ ಪಾಸಿಟಿವ್
ಪಡುಬಿದ್ರಿ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಗುರುವಾರ ಐವರಲ್ಲಿ ಸೋಂಕು ದೃಢಪಟ್ಟಿದೆ. ಕಾಡಿಪಟ್ಣ, ಉಚ್ಚಿಲ, ಭಾಸ್ಕರನಗರ, ಬ್ರಹ್ಮಸ್ಥಾನ ಬಳಿಯ ಪುರುಷರು ಮತ್ತು ತೆಂಕ ಗ್ರಾ.ಪಂ. ವ್ಯಾಪ್ತಿಯ ಮಹಿಳೆ ಬಾಧಿತರು.
ಮುಂಡ್ಕೂರು: ಐದು ಪ್ರಕರಣ
ಬೆಳ್ಮಣ್: ಮುಂಡ್ಕೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಗುರುವಾರ 5 ಪ್ರಕರಣಗಳು ದೃಢಪಟ್ಟಿವೆ. ಮುಲ್ಲಡ್ಕ, ಸಂಕಲಕರಿಯ ಹಾಗೂ ಸಚ್ಚೇರಿಪೇಟೆ ಬೊಮ್ಮಯ್ಯಲಚ್ಚಿಲ್‌ನ ವ್ಯಕ್ತಿಗಳು ಬಾಧಿತರಾಗಿದ್ದಾರೆ.
ಶಿರೂರು: ಮುಂದುವರಿದ ಬ್ಯಾಂಕ್ ಸೀಲ್‌ಡೌನ್
ಬೈಂದೂರು: ಶಿರೂರಿನ ಬ್ಯಾಂಕ್ ಆಫ್ ಬರೋಡಾ ಶಾಖೆಯ ಸಿಬಂದಿಯೊರ್ವರಿಗೆ ಶುಕ್ರವಾರ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ 3 ದಿನಗಳ ಕಾಲ ಶಾಖೆಯನ್ನು ಸೀಲ್‌ಡೌನ್ ಮಾಡಲಾಗಿತ್ತು. ಬಳಿಕ ಇತರ ಮೂವರಲ್ಲಿ ಸೋಂಕು ಕಂಡುಬಂದಿರುವುದರಿಂದ ಬ್ಯಾಂಕ್ ಸೀಲ್‌ಡೌನ್ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.