Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ
ನೆನಪಿನ ಬುತ್ತಿ ಬಿಚ್ಚಿಟ್ಟ ಮೊದಲ ಬ್ಯಾಚ್‌ನ ವಿದ್ಯಾರ್ಥಿ ರಾಜೀವ್ ಶೆಟ್ಟಿ
Team Udayavani, Nov 29, 2024, 8:15 PM IST
ಉಡುಪಿ: ‘ಕಾಲೇಜಿನಲ್ಲಿ ಉಪನ್ಯಾಸಕರು ಪಾಠ ಮಾಡುವುದು ಸಾಮಾನ್ಯ. ಆದರೆ ನಾವು ಓದಿದ ಕಾಲೇಜಿನಲ್ಲಿ ಕಾಲೇಜಿನ ಸಂಸ್ಥಾಪಕರು ಪ್ರತಿ ಶುಕ್ರವಾರ ಕಾಲೇಜಿಗೆ ಬಂದು ಜೀವನ ಕೌಶಲದ ಪಾಠ ಮಾಡುತ್ತಿದ್ದರು. ಅವರ ಹಿತನುಡಿಯೇ ನಮ್ಮ ಜೀವನಕ್ಕೆ ಆದರ್ಶ ಪಾಠವಾಯಿತು…’
ಇದು 75ನೇ ವರ್ಷಾಚರಣೆ ಸಂಭ್ರಮದಲ್ಲಿರುವ (ನ. 29ರಿಂದ ಡಿ. 1ರ ವರೆಗೆ) ಉಡುಪಿಯ ಎಂಜಿಎಂ ಕಾಲೇಜಿನ ಮೊದಲ ಬ್ಯಾಚ್‌ನ ವಿದ್ಯಾರ್ಥಿ, ನಿವೃತ್ತ ಶಿಕ್ಷಣಾಧಿಕಾರಿ, ಕುಂದಾಪುರ ತಾಲೂಕು ಅಸೋಡು ನಿವಾಸಿ ಕೊಕ್ಕರ್ಣೆ ರಾಜೀವ್ ಶೆಟ್ಟಿ ಅವರ ಮಾತುಗಳು. ಅವರು ತಮ್ಮ ಕಾಲೇಜು ದಿನಗಳನ್ನು ಉದಯವಾಣಿ ಜತೆಗೆ ಹಂಚಿಕೊಂಡಿದ್ದಾರೆ.
ಇಂಟರ್‌ಮೀಡಿಯೇಟ್ ಅನಂತರದಲ್ಲಿ ಕಾಲೇಜು ಸೇರಲು ಆಯ್ಕೆಗಳು ಹೆಚ್ಚಿರ ಲಿಲ್ಲ. ಆದರೆ ಅಲೋಶಿಯಸ್ ಕಾಲೇಜಿಗೆ ಸೇರಿಸಲು ಸ್ನೇಹಿತರು ಯೋಜನೆ ರೂಪಿಸಿದ್ದರು. ಈ ಮಧ್ಯೆ ಉಡುಪಿಯಲ್ಲಿ ಆಗಷ್ಟೇ ತೋನ್ಸೆ ಮಾಧವ ಅನಂತ ಪೈ(ಟಿಎಂಎ ಪೈ) ಅವರು ಕಾಲೇಜು ಸ್ಥಾಪಿಸಿರುವ ಬಗ್ಗೆ ತಂದೆಯವರು ಮಾಹಿತಿ ನೀಡಿ, ಅಲ್ಲಿಗೆ ಸೇರಿಸಿಯೇ ಬಿಟ್ಟಿದ್ದರು. 1949ರಲ್ಲಿ ಈಗಿನ ನಗರಸಭೆ ಕಚೇರಿ ಎದುರಿನಲ್ಲಿ ಕ್ಯಾಲೇಜಿನ ಮೊದಲ ವರ್ಷದ ತರಗತಿ ನಡೆದಿತ್ತು. ಆಗ ನಾವು 92 ವಿದ್ಯಾರ್ಥಿಗಳಿದ್ದೆವು. ಅವರಲ್ಲಿ ಎರಡನೇ ವರ್ಷದಲ್ಲಿ ಇಬ್ಬರು ಕಾಲೇಜು ಬಿಟ್ಟಿದ್ದರು. 90 ಮಂದಿ ಪದವಿ ಮೊದಲ ಬ್ಯಾಚ್ ಪದವಿ ಪೂರೈಸಿ ಹೊರ ಬಂದೆವು. ಅನಂತರ ಕಾಲೇಜು ಈಗಿರುವ ಕ್ಯಾಂಪಸ್‌ನಲ್ಲೇ ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಾ ಬಂದಿದೆ.
ಕಾಲೇಜಿಗೆ ಪ್ರತಿ ಶುಕ್ರವಾರ ಟಿಎಂಎ ಪೈ ಅವರು ಬಂದು ಜೀವನ ಕೌಶಲದ ಪಾಠ ಮಾಡುತ್ತಿದ್ದರು. ಇದು ನಮಗೆ ಅಂದಿನ ಕಾಲದಲ್ಲಿ ವಿಶೇಷವಾಗಿತ್ತು. ನಾನು ಎನ್‌ಸಿಸಿ ಅಧಿಕಾರಿಯಾಗಿದ್ದಾಗ ಕೇರಳದ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರೇ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರ ಎದುರಿನಲ್ಲಿ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದ್ದೆ. ಯಾವ ಕಾಲೇಜಿನ ವಿದ್ಯಾರ್ಥಿ ಎಂದು ಕೇಳಿದ್ದರು. ಎಂಜಿಎಂ ಕಾಲೇಜಿನ ಮೊದಲ ಬ್ಯಾಚ್ ವಿದ್ಯಾರ್ಥಿ ಎಂದು ಅವರಲ್ಲಿ ಹೇಳಿದಾಗ ಅವರು ನನ್ನ ಬೆನ್ನು ತಟ್ಟಿದ ಆ ಗಳಿಗೆ ಇಂದಿಗೂ ಸ್ಮರಣೀಯವಾಗಿಯೇ ಉಳಿದಿದೆ.
ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳಾಗಿದ್ದ ನಮಗೆ ಆಟೋಟಕ್ಕೆ ಅಜ್ಜರಕಾಡು ಜಿಲ್ಲಾ ಮೈದಾನವೇ ಆಶ್ರಯವಾಗಿತ್ತು. ಕಾಲೇಜಿನ ಪಿಟಿ ಅವಧಿಯಲ್ಲಿ ನೇರವಾಗಿ ಅಜ್ಜರಕಾಡು ಮೈದಾನಕ್ಕೆ ಹೋಗಿ ಫುಟ್‌ಬಾಲ್, ಕ್ರಿಕೆಟ್ ಆಡುವುದು. ಆಗೆಲ್ಲ ಸರಿಯಾದ ಸಾರಿಗೆ ವ್ಯವಸ್ಥೆ ಇರಲಿಲ್ಲ. ಮನೆಯಿಂದ ಕಾಲೇಜಿಗೆ, ಕಾಲೇಜಿನಿಂದ ಮನೆಗೆ ಹೋಗುವುದೇ ರೋಚಕವಾಗಿತ್ತು ಎಂದು ಕಾಲೇಜು ದಿನಗಳ ನೆನಪುಗಳನ್ನು ಹಂಚಿಕೊಂಡರು.
ಮೋಹನದಾಸ್ ಪೈಗಳೂ ಮೊದಲ ಬ್ಯಾಚ್ ವಿದ್ಯಾರ್ಥಿ
ಕಾಲೇಜಿನಲ್ಲಿ ಕೆಲವರು ಆಂಗ್ಲ ಮಾಧ್ಯಮದಲ್ಲಿ ಓದಿ ಬಂದವರಿದ್ದರು. ಆಗೆಲ್ಲ ಆಂಗ್ಲ ಮಾಧ್ಯಮದಲ್ಲಿ ಓದಿದವರೆಂದರೆ ಚೆನ್ನಾಗಿ ಇಂಗ್ಲಿಷ್ ಮಾತನಾಡಬಲ್ಲವರು ಎಂದುಕೊಂಡಿದ್ದೆವು. ಆದರೆ ಮದ್ರಾಸ್ ಮಟ್ಟದಲ್ಲಿ ನಮ್ಮ ಕಾಲೇಜಿನಲ್ಲಿ ಕನ್ನಡ ಮಾಧ್ಯಮದ ನಿರ್ಮಲಾ ಪೈ ಅವರು ಮೊದಲ ರ್‍ಯಾಂಕ್ ಬಂದಿದ್ದರು. ನಾಗಾಲ್ಯಾಂಡ್ ರಾಜ್ಯದ ರಾಜ್ಯಪಾಲರಾಗಿದ್ದ ಪಿ.ಬಿ. ಆಚಾರ್ಯ ಅವರು ಮೊದಲ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದರು. ವಿಶೇಷ ಎಂದರೆ ಟಿಎಂಎ ಪೈ ಅವರ ಪುತ್ರ ಟಿ.ಮೋಹನ್‌ದಾಸ್ ಪೈ ಅವರು ಮೊದಲ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದರು. ಸ್ಥಾಪಕರ ಪುತ್ರನಾಗಿದ್ದರೂ ಮೋಹನದಾಸ್ ಪೈಯವರು ಸರಳವಾಗಿಯೇ ನಮ್ಮೊಂದಿಗೆ ಬೆರೆಯುತ್ತಿದ್ದರು. ನಮ್ಮ ಬ್ಯಾಚ್‌ನಲ್ಲಿದ್ದ ಅಂಬಲಪಾಡಿಯ ಶ್ರೀಶ ಬಲ್ಲಾಳ್ (ಬಳಿಕ ಎಂಜಿಎಂ ಕಾಲೇಜಿನ ಹೆಸರಾಂತ ಪ್ರಾಧ್ಯಾಪಕರಲ್ಲಿ ಒಬ್ಬರಾದರು) ಮತ್ತು ನಾನು ಒಟ್ಟಿಗೆ ಕುಳಿತುಕೊಳ್ಳುತ್ತಿದ್ದೆವು. ನನ್ನ ಹಸ್ತಾಕ್ಷರ ಸುಂದರಗೊಳಿಸುವಲ್ಲಿ ಇವರ ಪಾತ್ರ ದೊಡ್ಡದಿದೆ. ನಮಗೆ ಪ್ರೊ| ಸುಂದರ್‌ರಾವ್ ಅವರು ಪ್ರಾಂಶುಪಾಲರಾಗಿದ್ದರು. ಅವರು ಪಾಠದ ಜತೆಗೆ ನೀಡುತ್ತಿದ್ದ ಹಿತನುಡಿ ಇಂದಿಗೂ ಪ್ರೇರಣೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thane; ಕ್ರಿಮಿನಲ್ ಕೇಸ್ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ
Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್ ಡೇಂಜರ್ ಸ್ಪಾಟ್
Brijesh Chowta: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್ ಚೌಟ
Royal Movie; ಜ.24ರಿಂದ ʼರಾಯಲ್ʼ; ಟ್ರೇಲರ್ ರಿಲೀಸ್‌ಗೆ ತಂಡ ರೆಡಿ
Udupi: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ: 3.25 ಲಕ್ಷ ಮೌಲ್ಯದ MDMA, ಚರಸ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.