ಉಡುಪಿ: ಮರಳು ಪೂರೈಕೆಗೆ ಸಜ್ಜು
ಕಾರ್ಮಿಕರು, ಕಟ್ಟಡ ನಿರ್ಮಾತೃಗಳಲ್ಲಿ ಖುಷಿ
Team Udayavani, Sep 24, 2019, 5:15 AM IST
ಮರಳುಗಾರಿಕೆ ಪುನರಾರಂಭಕ್ಕೆ ಸಿದ್ಧತೆಯಾಗಿ ದೋಣಿಗಳ ಸಾಗಾಟ.
ಉಡುಪಿ: ಎರಡೂವರೆ ವರ್ಷಗಳಿಂದ ಗ್ರಹಣ ಬಡಿದಂತಿದ್ದ ಉಡುಪಿ ಜಿಲ್ಲೆಯ ಮರಳುಗಾರಿಕೆಗೆ ಮರುಜೀವ ನೀಡುವುದಕ್ಕಾಗಿ ಸಿದ್ಧತೆಗಳು ಬಹುತೇಕ ಪೂರ್ಣಹಂತಕ್ಕೆ ಬಂದಿವೆ. ಇದು ಕಾರ್ಮಿಕರು, ಕಟ್ಟಡ ನಿರ್ಮಾಣಗಾರರು, ಮರಳು ಸಾಗಾಟ ಲಾರಿಯವರ ಜತೆಗೆ ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸುತ್ತಿದೆ.
ಕಳೆದೆರಡು ವರ್ಷಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ, ನಗರದಲ್ಲಿ ವಾಹನ ರ್ಯಾಲಿ, ಪ್ರತಿಭಟನ ಸಭೆ ಸೇರಿದಂತೆ ವಿವಿಧ ರೀತಿಯ ಹೋರಾಟಗಳು ನಡೆದಿದ್ದವು. ಈಗ ಮಂಗಳವಾರ ಅಥವಾ ಬುಧವಾರ ಮರಳುಗಾರಿಕೆಗೆ ಮುಹೂರ್ತ ನಿಗದಿಯಾಗಿದೆ. ಮೊದಲ ಹಂತದಲ್ಲಿ 158 ಮಂದಿಗೆ, ಅನಂತರ ಇತರ 21 ಮಂದಿಗೆ (2011ರ ಹಿಂದಿನ ಪರವಾನಿಗೆಯವರು) ಅವಕಾಶ ನೀಡಲು ತೀರ್ಮಾನವಾಗಿದೆ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಮರಳುದಿಬ್ಬಗಳ ತೆರವಿಗೆ ಅವಕಾಶ ದೊರೆತಂತಾಗಿದೆ. ಮೊದಲ ಮೂರು ತಿಂಗಳು ಸ್ಯಾಂಡ್ ಬಝಾರ್ ಆ್ಯಪ್ ಬಳಸದೆ ಈ ಹಿಂದಿನಂತೆಯೇ ಜನರಿಗೆ ಮರಳು ಒದಗಿಸಲು ನಿರ್ಧರಿಸಲಾಗಿದೆ.
ಜಿಪಿಎಸ್ ಅಳವಡಿಕೆ ಚುರುಕು
ಜಿಲ್ಲೆಯಲ್ಲಿ ಈ ಹಿಂದೆ ಸುಮಾರು 1,800 ಮರಳು ಸಾಗಾಟ ವಾಹನಗಳು ಜಿಪಿಎಸ್ ಅಳವಡಿಸಿದ್ದವು. ಆಗ ಹೊರ ಜಿಲ್ಲೆಗಳಿಗೂ ಮರಳು ಸಾಗಾಟವಾಗುತ್ತಿತ್ತು. ಆದರೆ ಈ ಬಾರಿ ಹೊರ ಜಿಲ್ಲೆಗಳಿಗೆ ಮರಳು ಸಾಗಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಾಗಾಗಿ ಈ ಬಾರಿ ಸುಮಾರು 1,200 ವಾಹನಗಳು ಜಿಪಿಎಸ್ ಅಳವಡಿಸಿಕೊಳ್ಳುತ್ತಿದ್ದು ಜಿಪಿಎಸ್ ಅಳವಡಿಕೆ ಮತ್ತು ಆ್ಯಕ್ಟಿವೇಷನ್ ಪ್ರಕ್ರಿಯೆ ಚುರುಕುಗೊಂಡಿದೆ. ಮರಳು ದಕ್ಕೆಗಳಿಗೆ ಜಿಯೋ ಫೆನ್ಸಿಂಗ್ ಮಾಡಲಾಗುತ್ತಿದೆ.
ಇಂದೇ ಅನುಮತಿಪತ್ರ?
ದಕ್ಕೆ ಸಿದ್ಧಗೊಂಡು ಎಲ್ಲ ನಿಯಮಾವಳಿಗಳನ್ನು ಅನುಸರಿಸಿರುವ ಪರವಾನಿಗೆದಾರರಿಗೆ ಮಂಗಳವಾರವೇ ಅನುಮತಿ ಪತ್ರ ಹಾಗೂ ಕಾರ್ಯಾದೇಶ ನೀಡುವ ನಿರೀಕ್ಷೆ ಇದೆ. ಹಾಗಾಗಿ ಬುಧವಾರ ಮರಳು ಪೂರೈಕೆ ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.
7.96 ಲಕ್ಷ ಮೆಟ್ರಿಕ್ ಟನ್ ಲಭ್ಯ
ಇನ್ನೆರಡು ದಿನಗಳಲ್ಲಿ ಅನುಮತಿ ಪತ್ರ ನೀಡಲಾಗುವುದು. ಜಿಲ್ಲೆಯ ಸ್ವರ್ಣಾ ನದಿಯ ಉಪ್ಪೂರು, ಸೀತಾನದಿಯ ಮೂಡುತೋನ್ಸೆ, ಬೈಕಾಡಿ ಮತ್ತು ಹಾರಾಡಿ ಹಾಗೂ ಪಾಪನಾಶಿನಿಯಲ್ಲಿ ಪಡುಕೆರೆ ಒಳಗೊಂಡಂತೆ ಒಟ್ಟು 8 ದಿಬ್ಬಗಳನ್ನು ಈಗಾಗಲೇ ಗುರುತಿಸಲಾಗಿದೆ. ಒಟ್ಟು 7,96,522 ಲಕ್ಷ ಮೆಟ್ರಿಕ್ ಟನ್ ಮರಳು ಲಭ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.
ಲಾಟರಿ ಮೂಲಕ ಆಯ್ಕೆ
ಈಗಾಗಲೇ 35 ದಕ್ಕೆಗಳನ್ನು ಗುರುತಿಸಲಾಗಿದೆ. ಕೆಲ ದಕ್ಕೆಗಳಿಗೆ ಅಧಿಕ ಪ್ರಮಾಣದಲ್ಲಿ ಬೇಡಿಕೆ ಇದೆ. ಅಂತಹ ಸಂದರ್ಭದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.